ಮತ್ತಷ್ಟು ಹದಗೆಟ್ಟ ಆರ್ಥಿಕ ಸ್ಥಿತಿ! – ಪಾಕ್‌ನಲ್ಲಿ ಒಂದು ಮೊಟ್ಟೆ ಬೆಲೆ 30 ರೂಪಾಯಿ!

ಮತ್ತಷ್ಟು ಹದಗೆಟ್ಟ ಆರ್ಥಿಕ ಸ್ಥಿತಿ! – ಪಾಕ್‌ನಲ್ಲಿ ಒಂದು ಮೊಟ್ಟೆ ಬೆಲೆ 30 ರೂಪಾಯಿ!

ಉಗ್ರಕೃತ್ಯಗಳಿಂದಲೇ ವಿಶ್ವಮಟ್ಟದಲ್ಲಿ ಛೀಮಾರಿ ಹಾಕಿಸಿಕೊಳ್ಳುವ ಪಾಕಿಸ್ತಾನದ ಸ್ಥಿತಿ ಈಗಾಗಲೇ ಅದೋಃಗತಿಗೆ ತಲುಪಿದೆ. ಪಾಪಿ ಪಾಕಿಸ್ತಾನದಲ್ಲಿ ಕಡು ಬಡತನದ ಸಂಖ್ಯೆ ಹೆಚ್ಚಾಗಿದೆ. ಅಷ್ಟೇ ಅಲ್ಲದೇ ಪಾಕಿಸ್ತಾನ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಇದೀಗ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಈಗ ಪಾಕ್​ನಲ್ಲಿ ಮೊಟ್ಟೆಯ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಅಲ್ಲಿ ಒಂದು ಡಜನ್​ ಮೊಟ್ಟೆಯ ಖರೀದಿಸುವ ಬದಲು ಭಾರತದಲ್ಲಿ 2 ಕೆಜಿ ಕೋಳಿಯನ್ನು ಖರೀದಿಸಬಹುದು.

ಇದನ್ನೂ ಓದಿ: ರಾಷ್ಟ್ರ ರಾಜಧಾನಿಯನ್ನು ಆವರಿಸಿತು ದಟ್ಟ ಮಂಜು – ದೆಹಲಿಯಲ್ಲಿ 30 ವಿಮಾನಗಳು ವಿಳಂಬ!

ಹೌದು, ಅಚ್ಚರಿಯಾದ್ರೂ ಸತ್ಯ. ಪಾಕಿಸ್ತಾನದಲ್ಲಿ  ಗ್ರಾಹಕ ಬೆಲೆ ಸೂಚ್ಯಂಕದಿಂದ ಅಳೆಯಲಾದ ಮಾಸಿಕ ಹಣದುಬ್ಬರವು (ಬೆಲೆ ಏರಿಕೆಯು) ಸೆಪ್ಟೆಂಬರ್​ನಲ್ಲಿ ನಾಲ್ಕು ತಿಂಗಳ ಗರಿಷ್ಠ ಮಟ್ಟವಾದ ಶೇಕಡಾ 31.4ಕ್ಕೆ ತಲುಪಿತು. ಮೇ ತಿಂಗಳಲ್ಲಿ ಮಾಸಿಕ ಹಣದುಬ್ಬರವು ಶೇಕಡಾ 38 ರಷ್ಟು ಹೆಚ್ಚಾಗಿತ್ತು.ಈಗ ಪಾಕ್​ನಲ್ಲಿ ಮೊಟ್ಟೆಯ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಒಂದು ಡಜನ್​ ಮೊಟ್ಟೆಯ ಬೆಲೆ ಅಲ್ಲಿ ಬರೋಬ್ಬರಿ 360 ರೂಪಾಯಿ. ಅಂದರೆ, ಒಂದು ಮೊಟ್ಟೆ ಕೊಂಡುಕೊಳ್ಳಲು 30 ರೂಪಾಯಿ ಕೊಡಬೇಕು. 30 ಡಜನ್ ಮೊಟ್ಟೆಗಳ ಬೆಲೆಯು 10,500 ರೂಪಾಯಿಯಿಂದ 12,500 ರೂಪಾಯಿಗೆ ಏರಿಕೆಯಾಗಿದೆ ಎಂದು ಪಾಕಿಸ್ತಾನದ ಮಾಧ್ಯಮ ವರದಿಗಳು ಮಾಡಿವೆ.

ಪಾಕ್‌ನಲ್ಲಿ ಬೆಲೆ ಏರಿಕೆಗೆ ಕಾರಣ ಏನು?

ಪಾಕಿಸ್ತಾನದಲ್ಲಿ ಮೊಟ್ಟೆ ಉತ್ಪಾದನೆಯಲ್ಲಿ ಪ್ರಮುಖ ಪದಾರ್ಥ ಸೋಯಾಬೀನ್. ಇದನ್ನು ಆಮದು ಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡಿದ್ದರೂ, ಅಧಿಕೃತ ಅಧಿಸೂಚನೆ ಇನ್ನೂ ಹೊರಡಿಸಬೇಕಾಗಿದೆ. ಹವಾಮಾನ ಸಚಿವಾಲಯವು ಅಧಿಸೂಚನೆಗಳನ್ನು ಹೊರಡಿಸುವಲ್ಲಿ ವಿಳಂಬ ಮಾಡುತ್ತಿರುವ ಕಾರಣ ಸೋಯಾಬೀನ್ ಆಮದಿಗೆ ತೊಂದರೆಯಾಗಿದೆ. ಮೊಟ್ಟೆ ಉತ್ಪಾದನೆಗಾಗಿ ಸಾಕುವ ಕೋಳಿಗಳ ಆಹಾರದಲ್ಲಿ ಪ್ರಮುಖವಾಗಿ ಸೋಯಾಬೀನ್ ಅತ್ಯಗತ್ಯ. ಸೋಯಾಬೀನ್‌ ಆಮದು ಮಾಡಿಕೊಳ್ಳುವಲ್ಲಿನ ವಿಳಂಬವು ಸಾಕಷ್ಟು ಮೊಟ್ಟೆ ಉತ್ಪಾದನೆಯನ್ನು ಕಾಪಾಡಿಕೊಳ್ಳುವಲ್ಲಿ ಸವಾಲನ್ನು ಸೃಷ್ಟಿಸಿದೆ. ಹೀಗಾಗಿ ಮೊಟ್ಟೆ ಬೆಲೆಯಲ್ಲಿ ಭಾರಿ ಏರಿಕೆ ಕಂಡಿದೆ.

Shwetha M