ಮಂಗಳೂರಿನಿಂದ ಮೈಸೂರಿಗೆ ಹೊರಟ್ಟಿದ್ದ ಮಹಿಳೆಗೆ ಹೆರಿಗೆ ನೋವು! – ರೈಲಿನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ!

ಮಂಗಳೂರಿನಿಂದ ಮೈಸೂರಿಗೆ ಹೊರಟ್ಟಿದ್ದ ಮಹಿಳೆಗೆ ಹೆರಿಗೆ ನೋವು! – ರೈಲಿನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ!

ಮಂಗಳೂರಿನಿಂದ ಬೆಂಗಳೂರಿಗೆ ಹೊರಟಿದ್ದ ರೈಲಿನಲ್ಲೇ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ. ಭಾನುವಾರ ರಾತ್ರಿ ಈ ಘಟನೆ ನಡೆದಿದೆ.

ಇದನ್ನೂ ಓದಿ: ಮಿಂಚಿದ ನರೈನ್​- ರಿಂಕು.. ಸೂಪರ್‌ ಓವರ್‌ನಲ್ಲಿ KKR ಗೆಲುವಿನ ಕೇಕೆ! – ಅಂಕಪಟ್ಟಿಯಲ್ಲಿ   LSGಗೆ ಕೊನೆ ಸ್ಥಾನ!

ಪೊನ್ನಮ್ಮ ಎಂಬ ತುಂಬು ಗರ್ಭಿಣಿ ಭಾನುವಾರ ಮಂಗಳೂರಿನಿಂದ ಬೆಂಗಳೂರಿಗೆ ಹೊರಟ್ಟಿದ್ದರು. ರಾತ್ರಿ ವೇಳೆ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಸಹ ಪ್ರಯಾಣಿಕರು ತಕ್ಷಣ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅರ್ಧ ಗಂಟೆ ಕಾದರೂ ವೈದ್ಯರು ಸ್ಥಳಕ್ಕೆ ಬಂದಿರಲಿಲ್ಲ. ಕಡೆಗೆ ವೈದ್ಯರಿಲ್ಲದೇ 30 ನಿಮಿಷದವರೆಗೂ ಕಾದ ಜನ ಬಳಿಕ ಹೆರಿಗೆಗಾಗಿ ಪರದೆ ಕಟ್ಟಿ ರೈಲಿನಲ್ಲಿದ್ದ ಮಹಿಳೆಯರೇ ಹೆರಿಗೆ ಮಾಡಿಸಿದ್ದಾರೆ. ವೈದ್ಯಕೀಯ ಸೌಲಭ್ಯವಿಲ್ಲದೆ ತೀವ್ರ ರಕ್ತ ಸಾವ್ರದಿಂದ ಬಳಲುತ್ತಿದ್ದ ಮಹಿಳೆಗೆ ಸುರಕ್ಷಿತವಾಗಿ ಹೆರಿಗೆ ಮಾಡಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ ರೋಡ್‌ನಲ್ಲಿ ರೈಲು ನಿಲ್ಲಿಸಿ ಮಹಿಳೆಯರೇ ಹೆರಿಗೆ ಮಾಡಿಸಿದ್ದಾರೆ. ಸದ್ಯ ತಾಯಿ ಮಗು ಸುರಕ್ಷಿತವಾಗಿದ್ದು, ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Shwetha M