ಸಿದ್ದರಾಮಯ್ಯ ನಂತ್ರ ಡಿಕೆಶಿ ಸಿಎಂ ಆಗಬೇಕು ಅನ್ನೋದು ನನ್ನ ಆಸೆಯೆಂದ ಜಮೀರ್ ಅಹ್ಮದ್

ಡಿಕೆ ಶಿವಕುಮಾರ್ ಕೂಡ ಸಿಎಂ ಆಗಬೇಕು ಅಂತ ನನ್ನ ಆಸೆ ಅಂತ ಜಮೀರ್ ಅಹ್ಮದ್ ಬೆಳಗಾವಿಯಲ್ಲಿ ಹೇಳಿದ್ದಾರೆ. ಮಾದ್ಯಮದವರು ನಿಮ್ಮನ್ನ ಡಿಕೆಶಿ ಡಿನ್ನರ್ ಮೀಟಿಂಗ್ ಕರೆದಿಲ್ವಾ ಅಂತ ಕೇಳಿದ್ದಕ್ಕೆ ಜಮೀರ್ ಅಹ್ಮದ್ ಉತ್ತರಿಸಿದ್ರು. ದೊಡ್ಡಣ್ಣವರ್ ಫಾರ್ಮ್ಹೌಸ್ನಲ್ಲಿ ನಡೆದಿದ್ದ ಡಿನ್ನರ್ ಮೀಟಿಂಗ್ಗೆ ತಮಗೂ ಆಹ್ವಾನ ಇತ್ತು ಎಂದ್ರು. ಹಾಗೇ ಸಿಎಂ ಚರ್ಚೆ ಬಗ್ಗೆ ಕೂಡ ಮಾತನಾಡಿದ ಜಮೀರ್ ಡಿಕೆಶಿ ಸಿಎಂ ಆಗಬೇಕು ಅಂತ ಆಸೆ ಇದೆ. ಈಗ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಅವರ ನಂತ್ರ ಡಿಕೆಶಿನೇ ಸಿಎಂ ಆಗಲಿ ಅನ್ನೋದು ನನ್ನ ಆಸೆ ಅಂದ್ರು. ನಾನು ಸೆಣ್ಣವನು ಹೈಕಮಾಂಡ್ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೆ ಅಂತ ಹೇಳಿದ್ರು.
ಇದನ್ನೂ ಓದಿ: 7 ವೈಡ್ ಹಾಕಿದ ಅರ್ಶ್ದೀಪ್ ಮೇಲೆ ಕೋಚ್ ಸಿಟ್ಟು – ಗಂಭೀರ್ ಬೈಗುಳಕ್ಕೆ ಬೌಲರ್ ಥಂಡಾ
ಹಾಗೇ ನೀವು ಯಾರ್ ಸಿಎಂ ಆಗ್ತಾರೆ ಅವರ ಹತ್ರ ಇರ್ತೀರಾ ಅನ್ನೋ ಪ್ರಶ್ನೆಗೆ ಉತ್ತರಿಸಿದ ಜಮೀರ್.. ಡಿಕೆಶಿ ನಮ್ಮ ಪಕ್ಷದ ಅಧ್ಯಕ್ಷಕರು ಅವರಿಗೂ ಹತ್ತಿರದಲ್ಲಿದ್ದೇನೆ. ಸತೀಶ್ಗೂ ಹತ್ತಿರದಲ್ಲಿದ್ದೇನೆ.. ಪರಮೇಶ್ವರ್ಗೂ ಹತ್ತಿರದಲ್ಲಿದ್ದೇನೆ.. ನಮ್ಮ ಪಕ್ಷದವರ ಜೊತೆ ಇರದೇ , ಬೇರೆ ಪಕ್ಷದ ಆರ್ ಅಶೋಕ್ ಜೊತೆ ವಿಜಯೇಂದ್ರ ಜೊತೆ ಇರುವುದ್ದಕ್ಕೆ ಆಗುತ್ತಾ ಅಂತ ಜಮೀರ್ ಹೇಳಿದ್ರು. ಹಾಗೇ ಸಿಎಂ ಬದಲಾವಣೆ ವಿಚಾರವಾಗಿ ಮಾತನಾಡಿ ನಮ್ಮ ಪಕ್ಷ ಹೈಕಮಾಂಡ್ ಪಕ್ಷ. ನಮ್ಮ ತೀರ್ಮಾನವನ್ನ ನಾವು ಹೇಳಬಹುದು. ಆದ್ರೆ ತೀರ್ಮಾನ ಮಾಡುವುದು ಹೈಕಮಾಂಡ್ ಅಂತ ಜಮೀರ್ ಅಹ್ಮದ್ ಹೇಳಿದ್ರು.

ನೋಡಿರಿ

