ಶಿಕ್ಷಣಕ್ಕಾಗಿ ತಮ್ಮ ಹೆಸರಲ್ಲಿದ್ದ ಜಮೀನು ದಾನ ಮಾಡಿದ ಸಚಿವರ ತಾಯಿ!

ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರ ತಾಯಿ ಸಾಮಾಜಿಕ ಕಾರ್ಯದ ಮೂಲಕ ಜನ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ತಂಗಡಗಿ ಅವರ ತಾಯಿ ಹುಲಿಗೆಮ್ಮ ಅವರು ತಮ್ಮ ಹೆಸರಿನಲ್ಲಿದ್ದ ಜಮೀನನ್ನು ಸರ್ಕಾರಿ ಶಾಲೆಗೆ ದಾನ ಮಾಡಿದ್ದಾರೆ.
ಇದನ್ನೂ ಓದಿ: ಯಶ್ ತಾಯಿ ಬೀದಿ ರಂಪಾಟ! – ಕಾಂಪೌಂಡ್ ರಾಮಾಯಣಕ್ಕೆ ಅಧಿಕಾರಿಗಳ ಎಡವಟ್ಟೇ ಕಾರಣ?
ಹುಲಿಗೆಮ್ಮ ಅವರು ಓದಿಲ್ಲ. ತಮಗೆ ಅಕ್ಷರ ಕಲಿಯುವ ಅವಕಾಶ ಸಿಕ್ಕಿಲ್ಲ. ಈಗಿನ ಮಕ್ಕಳು ಅಕ್ಷರದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ತಮ್ಮ ಹೆಸರಿನಲ್ಲಿದ್ದ ಜಮೀನನ್ನು ಸರ್ಕಾರಿ ಶಾಲೆಗೆ ದಾನ ಮಾಡಿದ್ದಾರೆ.
ಕನಕಗಿರಿ ವಿಧಾನಸಭಾ ಕ್ಷೇತ್ರದ ನವಲಿ ಹೋಬಳಿಯ ಆದಾಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಸರಿಯಾದ ಶೈಕ್ಷಣಿಕ ಸೌಲಭ್ಯಗಳು ಇಲ್ಲದಿರುವುದನ್ನು ಹುಲಿಗೆಮ್ಮ ಅವರು ಗಮನಿಸಿದ್ದರು. ಅಲ್ಲದೇ, ಶಾಲೆಯ ಮಕ್ಕಳ ಆಟೋಟಕ್ಕೆ ಮೈದಾನದ ಕೊರತೆ, ಪ್ರೌಢ, ಉನ್ನತ ಶಿಕ್ಷಣಕ್ಕೆ ಜಾಗದ ಕೊರತೆಯ ಬಗ್ಗೆ ತಿಳಿದ ಹುಲಿಗೆಮ್ಮ, ನವಲಿ ಹೋಬಳಿಯ ಆದಾಪುರ ಗ್ರಾಮದ ಸರ್ವೆ ನಂಬರ್ 86/1/9ರಲ್ಲಿ 01 ಎಕರೆಯ ಭೂಮಿ ಖರೀದಿಸಿ ದಾನವಾಗಿ ನೀಡಿದ್ದಾರೆ. ಈ ಮೂಲಕ ಶೈಕ್ಷಣಿಕ ಅಭಿವೃದ್ಧಿ ಮತ್ತು ಮೂಲಸೌಕರ್ಯಗಳ ವಿಸ್ತರಣೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ.
ಕಾರಟಗಿಯ ಉಪ ನೋಂದಣಿ ಕಚೇರಿಗೆ ಆಗಮಿಸಿ ಹುಲಿಗೆಮ್ಮ ತಮ್ಮ ಹೆಸರಲ್ಲಿದ್ದ ಜಮೀನನ್ನು, ಭೂ ಪರಿವರ್ತನೆ, ಕಾನೂನು ಬದ್ಧ ದಾಖಲೆಗಳ ಮೂಲಕ ಅಧಿಕೃತವಾಗಿ ರಾಜ್ಯಪಾಲರ ಹೆಸರಿಗೆ ನೋಂದಣಿ ಮಾಡಿಸಿ ಅದರ ಪ್ರತಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹುಲಿಗೆಮ್ಮ ನೀಡಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಬಿ. ನಟೇಶ್, ಸರ್ಕಾರಿ ಶಾಲೆಯಲ್ಲಿ ಬಹುತೇಕ ಬಡವರ ಮಕ್ಕಳು ಶಿಕ್ಷಣ ಪಡೆಯುತ್ತಿದ್ದು, ಶಾಲೆಯ ಮೂಲ ಸೌಲಭ್ಯಗಳ ವಿಸ್ತರಣೆಗಾಗಿ ಸಚಿವರ ತಾಯಿ ಹುಲಿಗೆಮ್ಮ ನೈಜ ಕಾಳಜಿಯಿಂದ ಭೂಮಿ ದಾನ ಮಾಡಿದ್ದಾರೆ. ಗ್ರಾಮೀಣ ಭಾಗದಲ್ಲಿ ಒಂದು ಎಕರೆ ಜಮೀನು ಹತ್ತರಿಂದ ಹದಿನೈದು ಲಕ್ಷ ರೂಪಾಯಿ ಮೌಲ್ಯವಿದೆ. ಆದರೆ, ಬಡ ಮಕ್ಕಳ ಶಿಕ್ಷಣ ಮತ್ತು ಉಜ್ವಲ ಭವಿಷ್ಯದ ದೃಷ್ಟಿಯಿಂದ ಹುಲಿಗೆಮ್ಮ ಒಂದು ಎಕರೆ ಜಮೀನು ನೀಡಿದ್ದಾರೆ. ಗ್ರಾಮೀಣ ಭಾಗದಲ್ಲಿ ಒಂದು ಎಕರೆ ಜಮೀನು ಹತ್ತರಿಂದ ಹದಿನೈದು ಲಕ್ಷ ರೂಪಾಯಿ ಮೌಲ್ಯವಿದೆ. ಆದರೆ ಬಡ ಮಕ್ಕಳ ಶಿಕ್ಷಣ ಮತ್ತು ಉಜ್ವಲ ಭವಿಷ್ಯದ ದೃಷ್ಟಿಯಿಂದ ಹುಲಿಗೆಮ್ಮ ಒಂದು ಎಕರೆ ಜಮೀನು ನೀಡಿದ್ದಾರೆ ಎಂದು ಸ್ವಾಗತಿಸಿದರು.

ನೋಡಿರಿ

