ಭೀಕರ ರಸ್ತೆ ಅಪಘಾತ – 24 ಮಂದಿ ಸಾವು, ಹಲವರಿಗೆ ಗಾಯ
ಬಸ್ಸೊಂದು ಅಪಘಾತಕ್ಕೀಡಾಗಿ ಸುಮಾರು 24 ಜನರು ಸಾವನ್ನಪ್ಪಿದ ಘಟನೆ ಮಧ್ಯ ಮೊರೊಕೊದ ಅಜಿಲಾಲ್ ಪ್ರಾಂತ್ಯದಲ್ಲಿ ನಡೆದಿದೆ. ಇದು ದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಂಭವಿಸಿದ ಭೀಕರ ಅಪಘಾತಗಳಲ್ಲಿ ಒಂದಾಗಿದೆ.
ಮೊರೊಕನ್ ಸಣ್ಣ ಪಟ್ಟಣವಾದ ಡೆಮ್ನೆಟ್‌ನಲ್ಲಿ ಮಾರುಕಟ್ಟೆಗೆ ತೆರಳುತ್ತಿದ್ದ ವೇಳೆ ಮಿನಿಬಸ್ ತಿರುವೊಂದರಲ್ಲಿ ಪಲ್ಟಿಯಾಗಿ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಸುಮಾರು 24 ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಅಪಘಾತ ಸಂಭವಿಸಿದ ಕೂಡಲೆ ಸ್ಥಳೀಯ ಅಧಿಕಾರಿಗಳು, ರಾಯಲ್ ಜೆಂಡರ್ಮೆರಿ ಮತ್ತು ನಾಗರಿಕ ರಕ್ಷಣಾ ಸೇವಾ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ.
ಇದನ್ನೂ ಓದಿ: ಈ ಸಮುದ್ರಕ್ಕೆ ಇಳಿದರೆ ಮುಳುಗುವುದೇ ಇಲ್ಲ – ಸಾಗರದ ಮೇಲೆ ಮಲಗಿದರೂ ಯಾವ ಜಲಚರವೂ ಬರುವುದೂ ಇಲ್ಲ..!
ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಅಪಘಾತಕ್ಕೆ ಕಾರಣ ಇನ್ನಷ್ಟೇ ತಿಳಿದುಬರಬೇಕಾಗಿದೆ. 2015 ರಲ್ಲಿ ದಕ್ಷಿಣ ಮೊರಾಕೊದಲ್ಲಿ ಯುವ ಕ್ರೀಡಾಪಟುಗಳ ನಿಯೋಗವನ್ನು ಹೊತ್ತೊಯ್ಯುತ್ತಿದ್ದ ಸೆಮಿ ಟ್ರೈಲರ್ ಟ್ರಕ್ ಮತ್ತು ಬಸ್ ನಡುವೆ ಡಿಕ್ಕಿಯಾಗಿ 33 ಜನರು ಸಾವನ್ನಪ್ಪಿದ್ದರು. ಕಳೆದ ವರ್ಷ ಆಗಸ್ಟ್‌ನಲ್ಲಿ, ಮೊರಾಕೊದ ಆರ್ಥಿಕ ರಾಜಧಾನಿಯಾದ ಕಾಸಾಬ್ಲಾಂಕಾದ ಪೂರ್ವದ ತಿರುವಿನಲ್ಲಿ ಬಸ್ ಪಲ್ಟಿಯಾಗಿ 23 ಜನರು ಸಾವನ್ನಪ್ಪಿದರು ಮತ್ತು 36 ಜನರು ಗಾಯಗೊಂಡಿದ್ದರು.