ಪಾಕ್‌ನಲ್ಲಿ ಭೀಕರ ದುರಂತ- ಕಲ್ಲಿದ್ದಲು ಗಣಿಯಲ್ಲಿ ಸ್ಫೋ*ಟದಿಂದ 32 ಮಂದಿ ಬಲಿ

ಪಾಕಿಸ್ತಾನದಲ್ಲಿ ಭೀಕರ ಘಟನೆ ನಡೆದಿದೆ. ನೈಋತ್ಯ ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ ಸಂಭವಿಸಿ 32 ಮಂದಿ ಮೃತಪಟ್ಟಿದ್ದಾರೆ. ಸ್ಫೋಟ ಸಂಭವಿಸಿದ ಕೆಲವೇ ಗಂಟೆಗಳಲ್ಲಿ 7 ಮಂದಿಯ ಶವವನ್ನು ಹೊರತೆಗೆಯಲಾಗಿದ್ದು, ಬಳಿಕ ಆಗಮಿಸಿದ ತುರ್ತು ಪ್ರತಿಕ್ರಿಯೆ ತಂಡ 25ಕ್ಕೂ ಹೆಚ್ಚು ಶವಗಳನ್ನು ಹೊರತೆಗೆದಿದೆ. 10ಕ್ಕೂ ಹೆಚ್ಚು ಮಂದಿ ಭೂಮಿಯೊಳಗೆ ಸಿಲುಕಿಕೊಂಡಿದ್ದು, ಅವರನ್ನು ಸುರಕ್ಷಿತವಾಗಿ ಹೊರತೆಗೆಯಲು ರಕ್ಷಣಾ ಸಿಬ್ಬಂದಿ ಪ್ರಯತ್ನಿಸುತ್ತಿದ್ದಾರೆ.
ಇದನ್ನೂ ಓದಿ: ಗಿಲ್ ವಿಶ್ವಕ್ಕೆ ನಂಬರ್ 1 – ಲಕ್ಷ್ಮಣ್ ಗೆಲುವು ಗಂಭೀರ್‌ಗೆ ಕಂಟಕ?
ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಹೇಳಿರುವ ಅವರು, ಭೂಗತದೊಳಗೆ ಆಮ್ಲಜನಕದ ಮಟ್ಟ ತೀವ್ರವಾಗಿ ಕಡಿಮೆ ಇರುವುದರಿಂದ ರಕ್ಷಣಾ ಸಿಬ್ಬಂದಿ ಗಣಿ ಒಳಗೆ ಎಚ್ಚರಿಕೆಯಿಂದ ಚಲಿಸಬೇಕಾಗಿದೆ. ಮೀಥೇನ್ ಅನಿಲ ಸ್ಫೋಟದ ಬಳಿಕ ಒಳಗೆ ಸಿಲುಕಿರುವವರು ಜೀವಂತವಾಗಿ ಇರುವ ಸಾಧ್ಯತೆ ಕಡಿಮೆ. ಈಗಾಗಲೇ ದೊರೆತಿರುವ ಶವಗಳನ್ನು ಅಂತ್ಯಕ್ರಿಯೆಗಾಗಿ ಕುಟುಂಬಗಳಿಗೆ ಹಸ್ತಾಂತರಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಬಲೂಚಿಸ್ತಾನದ ಗಣಿ ಮತ್ತು ಖನಿಜ ಸಚಿವ ಶೋಯೆಬ್ ನೊಶೆರ್ವಾನಿ ಅವರು ಮಾಹಿತಿ ನೀಡಿ, ಕಠಿಣ ಪರಿಸ್ಥಿತಿಯಲ್ಲಿ ರಕ್ಷಣಾ ತಂಡಗಳು ಗಣಿಯೊಳಗೆ ಸಿಲುಕಿರುವವರುಗಾಗಿ ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ. ಸರ್ಕಾರವು ಸಾವನ್ನಪ್ಪಿದ್ದ ಪ್ರತಿಯೊಬ್ಬ ಗಣಿಗಾರನ ಕುಟುಂಬಕ್ಕೆ ತಲಾ 5,00,000 ರೂಪಾಯಿ ಪರಿಹಾರವನ್ನು ನೀಡುವುದಾಗಿ ಘೋಷಿಸಿದರು.

ನೋಡಿರಿ

