ಜೋಡಿ ನಂಬರ್-1 ಶೋನಲ್ಲಿ ಮಿಮಿಕ್ರಿ ಗೋಪಿ, ಸಿಂಗರ್ ಬಾಳು ಬೆಳಗುಂದಿ – ಜಗಪ್ಪ, ನಯನಾಗೂ ಸಿಕ್ತು ಚಾನ್ಸ್..!

ಜೋಡಿ ನಂಬರ್-1. ಜೀ ಕನ್ನಡ ವಾಹಿನಿಯಲ್ಲಿ ಹೊಸ ಶೋ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈಗಾಗಲೇ ಪ್ರೋಮೋ ಕೂಡಾ ರಿಲೀಸ್ ಆಗಿದೆ. ಈ ಬಾರಿ ಜೋಡಿ ನಂಬರ್ ಒನ್‌ನಲ್ಲಿ ವೀಕ್ಷಕರಿಗೆ ಪರಿಚಯ ಇರುವ ಸೆಲಿಬ್ರಿಟಿಗಳ ದಂಡೇ ಇದೆ.
ಇದನ್ನೂ ಓದಿ: ಹೊಂಬಾಳೆ ಫಿಲ್ಮ್ಸ್ ಬಳಿಕ ರಾಜ್ ಬಿ ಶೆಟ್ಟಿ, ರುಕ್ಮಿಣಿ ವಸಂತ್ ಅನ್‌ಫಾಲೋ ಮಾಡಿದ ರಿಷಬ್ ಶೆಟ್ಟಿ!
ಜೋಡಿ ನಂಬರ್-1 ಶೋ ಶುರು ಆಗುತ್ತಿದೆ. ಮಿಮಿಕ್ರಿ ಗೋಪಿ ಮತ್ತು ಅವರ ಪತ್ನಿ ಉಷಾ ರಾಣಿ ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿದ್ದಾರೆ. ಮತ್ತು ಸರಿಗಮಪ ಸ್ಪರ್ಧಿಯಾಗಿರುವ ಸಿಂಗ್ ಬಾಳು ಬೆಳಗುಂದಿ ಮತ್ತು ಅವರ ಪತ್ನಿ ಮಾಲಾಶ್ರೀ ಕೂಡಾ ಜೋಡಿ ನಂಬರ್ ಒನ್ ಶೋನ ಭಾಗವಾಗಲಿದ್ದಾರೆ. ಈಗಷ್ಟೇ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್‌ನಲ್ಲಿ ಜಗ್ಗಪ್ಪ ಬ್ಯುಸಿಯಾಗಿದ್ದಾರೆ. ಈ ಶೋ ಮುಗಿಯುತ್ತಿದ್ದಂತೆ ಜಗ್ಗಪ್ಪ ಅವರಿಗಾಗಿ ಜೋಡಿ ನಂಬರ್ ಒನ್ ಶೋ ಕಾಯುತ್ತಿದೆ. ಹೌದು. ಜಗ್ಗಪ್ಪ ಮತ್ತು ಸುಷ್ಮಾ ಜೋಡಿ ನಂಬರ್ ಒನ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇವರೊಂದಿಗೆ ನಟಿ ನಯನಾ ನಾಗರಾಜ್ ಮತ್ತು ಪತಿ ಸುಹಾಸ್ ಭಾಗವಹಿಸಲಿದ್ದಾರೆ.
ನಟ ಅಭಿಲಾಷ್ ಹಾಗೂ ಅಪೂರ್ವ ಜೋಡಿ ಆಗಿದ್ದಾರೆ. ಇವರ ಈ ಶೋದ ಟೈಮ್ ಮತ್ತು ಡೇಟ್ ಕೂಡ ಫಿಕ್ಸ್ ಆಗಿದೆ. ಈಗ ಬಿಟ್ಟಿರೋ ಅಧಿಕೃತ ಪ್ರೋಮೋದಲ್ಲಿಯೇ ಇದು ರಿವೀಲ್ ಆಗಿದೆ. ಇದೇ ಏಪ್ರಿಲ್-4 ರಿಂದ ಈ ಒಂದು ಶೋ ಶುರು ಆಗುತ್ತಿದೆ. ಪ್ರತಿ ಶನಿವಾರ ಮತ್ತು ಭಾನುವಾರ ಈ ಶೋ ಇರಲಿದ್ದು, ರಾತ್ರಿ 9 ಗಂಟೆಗೆ ಪ್ರಸಾರ ಆಗಲಿದೆ.

ನೋಡಿರಿ

