ಭಿಕ್ಷೆ ಬೇಡಿಕೊಂಡೇ ಖಾಸಗಿ ಶಾಲೆಗಳಲ್ಲಿ ಮಕ್ಕಳನ್ನು ಓದಿಸುತ್ತಿರುವ ಭಿಕ್ಷುಕ! – ಕೋಟ್ಯಧಿಪತಿ ಪಪ್ಪುನ ಐಷಾರಾಮಿ ಬದುಕು ಹೇಗಿದೆ ಗೊತ್ತಾ?

ಭಿಕ್ಷೆ ಬೇಡಿಕೊಂಡೇ ಖಾಸಗಿ ಶಾಲೆಗಳಲ್ಲಿ ಮಕ್ಕಳನ್ನು ಓದಿಸುತ್ತಿರುವ ಭಿಕ್ಷುಕ! – ಕೋಟ್ಯಧಿಪತಿ ಪಪ್ಪುನ ಐಷಾರಾಮಿ ಬದುಕು ಹೇಗಿದೆ ಗೊತ್ತಾ?

ಭಿಕ್ಷುಕ ಅಂದ್ರೆ ಒಂದೊತ್ತಿನ ಊಟಕ್ಕೂ ಪರದಾಡ್ತಾರೆ. ಪಾಪ ಅವ್ರಿಗೆ ಮಲಗೋಕೆ ಮನೆ ಇರಲ್ಲ, ತಮ್ಮವರು ಅಂತಾ ಯಾರೂ ಇರಲ್ಲ ಅಂತಾನೇ ನಾವು ನೀವೆಲ್ಲಾ ಅನ್ಕೊಂಡಿರೋದು. ಆದ್ರೆ ಅದೇ ಭಿಕ್ಷಾಟನೆಯಿಂದಲೇ ಸೈಟ್, ಮನೆ, ಆಸ್ತಿ ಖರೀದಿಸಿ ಕೋಟ್ಯಧಿಪತಿಯಾಗಿರುವ ಹಾಗೂ ಮಕ್ಕಳನ್ನ ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಓದಿಸ್ತಿರೋ ಶ್ರೀಮಂತ ಬೆಗ್ಗರ್ ಬಗ್ಗೆ ಮಾಹಿತಿ ಇಲ್ಲಿದೆ.

ಬಿಹಾರದ ಪಾಟ್ನಾದಲ್ಲಿ ಭಿಕ್ಷುಕನೊಬ್ಬ ಕೋಟ್ಯಧಿಪತಿ ಅಂತಾನೇ ಫೇಮಸ್ ಆಗಿದ್ದಾನೆ. ಯಾಕಂದ್ರೆ ಆತ ಅನೇಕ ಕಡೆ ಸೈಟ್, ಬ್ಯಾಂಕ್​​ ಖಾತೆಗಳು, ಮನೆ, ಆಸ್ತಿಗಳನ್ನ ಹೊಂದಿದ್ದಾನೆ. ಆತನ ಹೆಸ್ರು ಪಪ್ಪು. ಈತ ಪಂಜಾಬ್​​ ನ್ಯಾಷನಲ್​ ಬ್ಯಾಂಕ್​, ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ಮತ್ತು ಬ್ಯಾಂಕ್​ ಆಫ್​ ಬರೋಡಾದಲ್ಲಿ ಖಾತೆಯನ್ನು ಹೊಂದಿದ್ದಾನೆ. ಈತನ ಹೆಂಡತಿ ಕೂಡ  ICICI ಮತ್ತು ಕೊ-ಆಪರೇಟಿವ್​​ ಬ್ಯಾಂಕ್​ನಲ್ಲಿ ಠೇವಣಿ ಇಟ್ಟಿದ್ದಾರೆ.  ಈ ಎಲ್ಲಾ ಆಸ್ತಿಯನ್ನು ಅವರು ಭಿಕ್ಷೆ ಬೇಡಿದ ಹಣದಿಂದಲೇ ಸಂಪಾದಿಸಿದ್ದಾರೆ. ಅಷ್ಟಕ್ಕೂ ಪಪ್ಪು ಭಿಕ್ಷುಕನಾದ ಕಥೆಯೇ ಇಂಟ್ರೆಸ್ಟಿಂಗ್ ಆಗಿದೆ.

ಇದನ್ನೂ ಓದಿ: ಪಟಾಕಿ ಕಾರ್ಖಾನೆಯಲ್ಲಿ ಸ್ಪೋಟ – 11 ಮಂದಿ ಸಾವು, 60ಕ್ಕೂ ಹೆಚ್ಚು ಮಂದಿಗೆ ಗಾಯ

ಪೋಷಕರ ಜೊತೆ ಪಾಟ್ನಾದಲ್ಲಿ ವಾಸವಿದ್ದ ಪಪ್ಪುಗೆ ಓದೋದ್ರಲ್ಲಿ ಆಸಕ್ತಿ ಇರಲಿಲ್ಲ. ಕುಟುಂಬಸ್ಥರು ಓದುವಂತೆ ಹೊಡೆಯುತ್ತಾರೆ ಎಂದು ಸಿಟ್ಟಿನಿಂದ ಮನೆ ಬಿಟ್ಟು ಮುಂಬೈ ಸೇರಿದ್ದ. ಒಂದಷ್ಟು ದಿನ ಅಲ್ಲೇ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ. ಆದ್ರೆ ಒಂದ್ಸಲ ಟ್ರೈನ್​ನಲ್ಲಿ ಹೋಗುವಾಗ ಅಪಘಾತವಾಗಿ ಕೈ ಮುರಿದು ಹೋಗಿತ್ತು. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಬಳಿಕ ಪಾಟ್ನಾಗೆ ಮರಳಲು ರೈಲ್ವೆ ಸ್ಟೇಷನ್​ಗೆ ಬಂದು ಕುಳಿತಿದ್ದ. ಕೈ ಮುರಿದಿದ್ದು, ಕೊಳಕು ಬಟ್ಟೆ ಹಾಕಿದ್ದ ಪಪ್ಪುನ ನೋಡಿನ ಜನ ಭಿಕ್ಷುಕ ಎಂದು ಭಾವಿಸಿದ್ದರು. ಜಸ್ಟ್ ಎರಡೇ ಗಂಟೆಗಳಲ್ಲಿ 3,400 ರೂಪಾಯಿ ಹಣ ಪಪ್ಪು ಮುಂದೆ ಬಿದ್ದಿತ್ತು. ಆಶ್ಚರ್ಯಗೊಂಡ ಪಪ್ಪು ಮರುದಿನ ಮತ್ತೆ ಅದೇ ಸ್ಥಳಕ್ಕೆ ಹೋಗಿ ಕುಳಿತಿದ್ದಾನೆ. ಮತ್ತೆ ಹಣ ಸಂಗ್ರಹವಾಗಿದೆ. ಇದಾದ ಬಳಿಕ ಪಾಟ್ನಾಗೆ ಮರಳಿದ ಪಪ್ಪು ಅಲ್ಲಿನ ಹನುಮಾನ್​ ದೇಗುಲ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಭಿಕ್ಷಾಟನೆ ಆರಂಭಿಸಿದ್ದ. ಹೆಚ್ಚೆಚ್ಚು ಹಣ ಸಿಗತೊಡಗಿತ್ತು. ಅದೇ ಹಣದಲ್ಲಿ ಮನೆ, ಸೈಟ್, ಆಸ್ತಿ ಎಲ್ಲಾ ಖರೀದಿಸಿದ. ಹಲವು ಬ್ಯಾಂಕ್​ಗಳಲ್ಲಿ ಅಕೌಂಟ್ ತೆಗೆದು ಹಣವನ್ನೂ ಠೇವಣಿ ಇಟ್ಟಿದ್ದ. ನಂತ್ರ ಮದುವೆಯಾಗಿದ್ದು ಇಬ್ಬರು ಮಕ್ಕಳು ಸಹ ಇದ್ದಾರೆ. ಮಕ್ಕಳಿಬ್ಬರು ಚೆನ್ನಾಗಿ ಓದಿ ಉನ್ನತ ಸ್ಥಾನವನ್ನು ಪಡೆಯಬೇಕು ಎಂದು ಪ್ರತಿಷ್ಠಿತ ಖಾಸಗಿ ಶಾಲೆಗೆ ಸೇರಿಸಿ ಓದಿಸುತ್ತಿದ್ದಾನೆ.

ಇನ್ನು ಪಪ್ಪು ಜೊತೆಗಿನ ಭಿಕ್ಷುಕರು ಕೂಡ ಕೋಟ್ಯಧಿಪತಿಗಳಾಗಿದ್ದರು. ಆದ್ರೆ ಹಣವನ್ನ ವ್ಯರ್ಥ ಮಾಡಿದ್ದಾರೆ. ಪಪ್ಪು ಮಾತ್ರ ಹಣವನ್ನು ಸದುಪಯೋಗ ಪಡಿಸಿಕೊಂಡಿದ್ದು, ಇದೇ ಕಾರಣಕ್ಕೆ ಆತನನ್ನು ಕೋಟ್ಯಧಿಪತಿ ಪಪ್ಪು ಎಂದು ಕರೆಯುತ್ತಾರೆ. ಸದ್ಯ ಪಪ್ಪು ಈಗಲೂ ಭಿಕ್ಷಾಟನೆ ಮುಂದುವರಿಸಿದ್ದು ಬರೋ ಹಣವನ್ನ ಬ್ಯಾಂಕ್​ಗಳಲ್ಲಿ ಠೇವಣಿ ಇಡುತ್ತಿದ್ದಾನೆ.  ನೋಡಿ ನಾವು ನೀವೆಲ್ಲಾ ಭಿಕ್ಷುಕರು ಅಂದ್ರೆ ಏನೂ ಇರಲ್ಲ ಅನ್ಕೊಳ್ತೇವೆ. ಆದ್ರೆ ಯಾರಿಗೆ ಗೊತ್ತು ನಮ್ಮ ಸುತ್ತ ಮುತ್ತ ಓಡಾಡುವ ಇಂಥವ್ರಲ್ಲಿ ಕೆಲವ್ರು ಲಕ್ಷಾಧಿಪತಿಗಳೋ ಅಥವಾ ಕೋಟ್ಯಧಿಪತಿಗಳೋ ಆಗಿರಬಹುದು.

Shwetha M