AUS ಸೊಕ್ಕಿಳಿಸಿದ ಸೌತ್ ಆಫ್ರಿಕಾ – ಟೆಂಬಾ, ಮಿಲ್ಲರ್ ಬಿಗ್ ಮೆಸೇಜ್
ಕಾಂಗರೂಗಳ ಕಾಲ ಹೋಯ್ತಾ?

AUS ಸೊಕ್ಕಿಳಿಸಿದ ಸೌತ್ ಆಫ್ರಿಕಾ – ಟೆಂಬಾ, ಮಿಲ್ಲರ್ ಬಿಗ್ ಮೆಸೇಜ್ಕಾಂಗರೂಗಳ ಕಾಲ ಹೋಯ್ತಾ?

ಕ್ರಿಕೆಟ್ ಅಂತಾ ಬಂದಾಗ ಆಸ್ಟ್ರೇಲಿಯಾ ಒನ್ ಆಫ್ ದಿ ಸ್ಟ್ರಾಂಗ್ ಟೀಂ. ಮೂರೂ ಮಾದರಿಯಲ್ಲೂ ತನ್ನದೇ ಆದ ಇತಿಹಾಸ ಸೃಷ್ಟಿಸಿರೋ ತಂಡ. ಆದ್ರೆ ಈಗ ಟೆಸ್ಟ್ ಕ್ರಿಕೆಟ್​ನಲ್ಲಿ ಡಾಮಿನೇಷನ್ ಕಂಟಿನ್ಯೂ ಆಗಿದ್ರೂ ವೈಟ್ ಬಾಲ್ ಫಾರ್ಮೆಟ್​ನಲ್ಲಿ ಹಳ್ಳ ಹಿಡಿದಿದೆ. ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಸೋತು ಸುಣ್ಣವಾಗಿದ್ದಾರೆ.

ಇದನ್ನೂ ಓದಿ : ವಿರಾಟ್‌ ವಿಶ್ವರೂಪ.. ಗಿಲ್‌ ಸೂಪರ್‌ ಸೆಂಚುರಿ.. ವಿಂಡೀಸ್‌ ವಿರುದ್ಧ ಭಾರತಕ್ಕೆ 8 ವಿಕೆಟ್‌ ಭರ್ಜರಿ ಜಯ!

ವಿಶ್ವ ಕ್ರಿಕೆಟ್ ಇತಿಹಾಸದಲ್ಲೇ ಅತಿ ಹೆಚ್ಚು ಐಸಿಸಿ ಟ್ರೋಫಿಗಳನ್ನು ಗೆದ್ದಿರೋ ತಂಡ ಆಸ್ಟ್ರೇಲಿಯಾ. ಅದ್ರಲ್ಲೂ ಏಕದಿನ ಕ್ರಿಕೆಟ್​ನಲ್ಲಿ 6 ಬಾರಿ ಚಾಂಪಿಯನ್ಸ್.. 1999 ರಿಂದ 2007 ರವರೆಗೆ ಸತತ 3 ಬಾರಿ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದೆ. ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಆಸ್ಟ್ರೇಲಿಯಾ ಸತತ 34 ಪಂದ್ಯಗಳಲ್ಲಿ ಸೋಲನ್ನೇ ಕಾಣದೆ ಅಜೇಯವಾಗಿ ಉಳಿದ ದಾಖಲೆ ಬರೆದಿದೆ. ಌಂಡ್ ಐಸಿಸಿಯ ಎಲ್ಲಾ 4 ಪ್ರಮುಖ ಟೂರ್ನಮೆಂಟ್‌ಗಳನ್ನು ಗೆದ್ದ ವಿಶ್ವದ ಮೊದಲ ತಂಡ ಆಸ್ಟ್ರೇಲಿಯಾ. ಹೀಗಿರೋ ಕಾಂಗರೂಪಡೆ ಈಗ ಮುಗ್ಗರಿಸುತ್ತಿದೆ.

ಸೌತ್ ಆಫ್ರಿಕಾ ವಿರುದ್ಧ ಎರಡೂ ಏಕದಿನ ಪಂದ್ಯ ಸೋತ ಆಸೀಸ್!

2025ರಲ್ಲಿ ಸೌತ್ ಆಫ್ರಿಕಾ ವಿರುದ್ಧ ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಸೋತಿದ್ದ ಆಸ್ಟ್ರೇಲಿಯಾ ಈಗ ಅದೇ ಸೌತ್ ಆಫ್ರಿಕಾ ವಿರುದ್ಧ ಏಕದಿನ ಸರಣಿಯನ್ನೂ ಸೋತಿದೆ. ಹರಿಣಗಳ ನಾಡಿನಲ್ಲಿ ನಡೆಯುತ್ತಿರೋ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಕಾಂಗರೂಪಡೆ ಸೋಲೊಪ್ಪಿಕೊಂಡಿದೆ. ಸೆಪ್ಟೆಂಬರ್ 24ರಂದು ಮೊದಲ ಪಂದ್ಯ ಡರ್ಬನ್​ನಲ್ಲಿ ನಡೆದಿದ್ದು ಈ ಮ್ಯಾಚಲ್ಲಿ  ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 297/8 ರನ್ ಗಳಿಸಿತು. ಟಾರ್ಗೆಟ್ ಬೆನ್ನಟ್ಟಿದ ಆಸ್ಟ್ರೇಲಿಯಾ 230 ರನ್‌ಗಳಿಗೆ ಆಲೌಟ್ ಆಯಿತು. ದಕ್ಷಿಣ ಆಫ್ರಿಕಾಕ್ಕೆ 67 ರನ್‌ಗಳ ಜಯ ಸಿಕ್ಕಿತ್ತು. ಇನ್ನು 2ನೇ ಏಕದಿನ ಪಂದ್ಯ ಭಾನುವಾರ ಜೋಹಾನ್ಸ್‌ಬರ್ಗ್ ನಲ್ಲಿ ನಡೆದಿದ್ದು ಮತ್ತೆ ಮುಗ್ಗರಿಸಿದೆ. ಸೌತ್ ಆಫ್ರಿಕಾ ಪರ ಡೇವಿಡ್ ಮಿಲ್ಲರ್  142 ರನ್ ಮತ್ತು ಟೆಂಬಾ ಬವುಮಾ 103 ರನ್ ಬಾರಿಸಿದ್ದು ದಕ್ಷಿಣ ಆಫ್ರಿಕಾ 365/9 ರನ್ ಕಲೆಹಾಕಿತು. ಆಸ್ಟ್ರೇಲಿಯಾ 333 ರನ್‌ಗಳಿಗೆ ಸರ್ವಪತನ ಕಂಡಿತು. ದಕ್ಷಿಣ ಆಫ್ರಿಕಾಕ್ಕೆ 32 ರನ್‌ಗಳ ಗೆಲುವು ದಾಖಲಿಸಿತು. ಸೋ ಅಲ್ಲಿಗೆ ಎರಡೂ ಪಂದ್ಯಗಳಲ್ಲೂ ಚೇಸಿಂಗ್​ನಲ್ಲಿ ಆಸೀಸನ್ ಸೋತಿದೆ. ಎರಡೂ ಸಲವೂ ಆಲೌಟ್ ಆಗಿದೆ. ಅದ್ರಲ್ಲೂ ಎರಡನೇ ಪಂದ್ಯದಲ್ಲಿ ಟೆಂಬಾ ಮತ್ತು ಮಿಲ್ಲರ್ ಸೆಂಚುರಿ ಮೂಲಕವೇ ವೀ ಆರ್ ಸೂಪರ್ ಸ್ಟ್ರಾಂಗ್ ಅನ್ನೋ ಮೆಸೇಜ್ ಪಾಸ್ ಮಾಡಿದ್ದಾರೆ. ಮೂರನೇ ಪಂದ್ಯ ಸೆಪ್ಟೆಂಬರ್ 30ಕ್ಕೆ ನಡೆಯಲಿದ್ದು ಅಲ್ಲೂ ಕೂಡ ಗೆದ್ದು ಕ್ಲೀನ್ ಸ್ವೀಪ್ ಮಾಡೋ ಭಯ ಹುಟ್ಟಿಸಿದ್ದಾರೆ. ಅಷ್ಟಕ್ಕೂ ಆಸ್ಟ್ರೇಲಿಯಾ ಇತ್ತೀಚೆಗೆ ಸೀಮಿತ ಓವರ್​ಗಳ ಪಂದ್ಯಗಳಲ್ಲಿ ಡಮ್ಮಿಯಾಗ್ತಿದೆ. 2026ರಲ್ಲೇ ಸಾಕಷ್ಟು ಮುಜುಗರವಾಗುವಂಥ ಸೋಲುಗಳನ್ನ ಕಂಡಿದ್ದಾರೆ.

ಪಾಕ್ ವಿರುದ್ಧ ಕ್ಲೀನ್ ಸ್ವೀಪ್.. ವಿಶ್ವಕಪ್ ನಲ್ಲೂ ಮುಖಭಂಗ!

ಕಳೆದ ಜನವರಿ ಹಾಗೂ ಫೆಬ್ರವರಿಯಲ್ಲಿ ಪಾಕಿಸ್ತಾನ ವಿರುದ್ಧದ ಟಿ-20 ಸರಣಿಯಲ್ಲಿ ಪಾಕಿಸ್ತಾನ ತಂಡವು 3-0 ಅಂತರದಲ್ಲಿ ಆಸ್ಟ್ರೇಲಿಯಾವನ್ನು ಕ್ಲೀನ್ ಸ್ವೀಪ್ ಮಾಡಿತು. ಹಾಗೇ ಮೇ ಜೂನ್ ತಿಂಗಳಲ್ಲಿ ನಡೆದಿದ್ದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಕಿಸ್ತಾನ 2-1 ಅಂತರದಲ್ಲಿ ಗೆದ್ದು ಬೀಗಿತ್ತು. ಹಾಗೇ ಜೂನ್ ತಿಂಗಳಲ್ಲೇ ಬಾಂಗ್ಲಾದೇಶ & ಆಸ್ಟ್ರೇಲಿಯಾ ನಡುವಿನ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಬಾಂಗ್ಲಾದೇಶ 2-1 ಸರಣಿ ಮುಡಿಗೇರಿಸಿಕೊಂಡಿತು. ಅಷ್ಟೇ ಅಲ್ಲದೆ ಕಳೆದ ಫೆಬ್ರವರಿಯಲ್ಲಿ ನಡೆದ ಟಿ-20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡವು ಗ್ರೂಪ್ ಹಂತದಲ್ಲೇ ಹೊರಬೀಳುವ ಮೂಲಕ ಅವಮಾನಕ್ಕೊಳಗಾಗಿತ್ತು. ಈ ವರ್ಷ ಒಟ್ಟಾರೆಯಾಗಿ 11 ಏಕದಿನ ಪಂದ್ಯಗಳನ್ನ ಆಡಿದ್ದು ಈ ಪೈಕಿ 6ರಲ್ಲಿ ಸೋಲು ಕಂಡಿದೆ. ಒಟ್ನಲ್ಲಿ ಆಸ್ಟ್ರೇಲಿಯಾ ತಂಡ ಇತ್ತೀಚೆಗೆ ವೈಟ್ ಬಾಲ್ ಸಿರೀಸ್​ನಲ್ಲಿ ಸ್ಟ್ರಗಲ್ ಪಡ್ತಿರೋದು ಕ್ಲಿಯರ್ ಆಗಿ ಗೊತ್ತಾಗ್ತಿದೆ.

Shantha Kumari

Leave a Reply

Your email address will not be published. Required fields are marked *