ಹಾಲೂ ತುಟ್ಟಿ, ಅಕ್ಕಿಯೂ ತುಟ್ಟಿ.. ಇದೇ ಕಾಂಗ್ರೆಸ್‌ನ ಆಡಳಿತ ಮಂತ್ರ – ಬೆಲೆ ಏರಿಕೆ ವಿರುದ್ಧ ಬಿಜೆಪಿ ಕಿಡಿ  

ಹಾಲೂ ತುಟ್ಟಿ, ಅಕ್ಕಿಯೂ ತುಟ್ಟಿ.. ಇದೇ ಕಾಂಗ್ರೆಸ್‌ನ ಆಡಳಿತ ಮಂತ್ರ – ಬೆಲೆ ಏರಿಕೆ ವಿರುದ್ಧ ಬಿಜೆಪಿ ಕಿಡಿ  

ಬೆಂಗಳೂರು: ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇದೀಗ ನಂದಿನಿ ಹಾಲಿನ ದರ ಹೆಚ್ಚಿಸುವ ಕುರಿತು ಕೆಎಂಎಫ್‌ ನೂತನ ಅಧ್ಯಕ್ಷ ಭೀಮಾ ನಾಯ್ಕ್ ಅವರು ಬುಧವಾರ ಹೇಳಿದ್ದರು. ಇದೀಗ ಭೀಮಾ ನಾಯ್ಕ್ ಅವರ ಹೇಳಿಕೆಗೆ ಬಿಜೆಪಿ ಕಿಡಿಕಾರಿದೆ.

ಇದನ್ನೂ ಓದಿ: ಉರಿಯುವುದು ಎರಡೇ ಬಲ್ಬ್‌.. ಕರೆಂಟ್‌ ಬಿಲ್‌ ಬಂದಿದ್ದು ಲಕ್ಷ! – ಮೀಟರ್‌ ಸಮಸ್ಯೆಯಿಂದ ಆಯ್ತು ಎಡವಟ್ಟು

ಕೆಎಂಎಫ್ ಅಧ್ಯಕ್ಷರು ಹಾಲಿನ ದರವನ್ನು ಲೀಟರ್ ಗೆ ಐದು ರೂಪಾಯಿ ಹೆಚ್ಚಿಸುತ್ತೇವೆ ಎಂದು ಏಕಾಏಕಿ ಹೇಳುವ ಮೂಲಕ ರಾಜ್ಯದ ಪ್ರಜೆಗಳ ಜೇಬಿಗೆ ಕನ್ನ ಹಾಕಿದೆ. ಸಿದ್ದರಾಮಯ್ಯ ಅವರ ಎಟಿಎಂ ಸರ್ಕಾರದಲ್ಲಿ ಈಗಾಗಲೇ ದಿನ ಬಳಕೆ ಸಾಮಾಗ್ರಿಗಳ ಬೆಲೆ ಗಗನಕ್ಕೇರಿದೆ. ಇದೀಗ ಹಾಲಿನ ದರವನ್ನೂ ಏರಿಸುವ ಮೂಲಕ ರಾಜ್ಯದ ಬಡ ಜನರ ಮೇಲೆ ಬರೆ ಎಳೆಯುತ್ತಿದೆ ಎಂದು ಟೀಕಾ ಪ್ರಹಾರ ನಡೆಸಿದೆ. ಅಲ್ಲದೇ, ಈ ಜನದ್ರೋಹಿ ನಿರ್ಧಾರದಿಂದ ಸರ್ಕಾರ ದೂರ ಉಳಿಯಬೇಕೆಂದು ಬಿಜೆಪಿ ಆಗ್ರಹಿಸಿದೆ.

ಕರೆಂಟ್ ಬಿಲ್ ಹೆಚ್ಚಳದಿಂದಾಗಿ ಅಕ್ಕಿ ಮಿಲ್​ಗಳಿಗೆ ಭಾರಿ ಹೊಡೆತ ಬೀಳುತ್ತಿದೆ. ಜೊತೆಗೆ ಎಪಿಎಂಸಿ ಟ್ಯಾಕ್ಸ್ ಕೂಡ ಹೊರೆಯಾಗುತ್ತಿದೆ. ಹೀಗಾಗಿ ಕೆಜಿಗೆ 5 ರಿಂದ 10 ರುಪಾಯಿ ಏರಿಕೆ ಮಾಡಲು ಕರ್ನಾಟಕ ರೈಸ್ ಮಿಲ್ಲರ್ಸ್ ಫೆಡರೇಷನ್ ಚಿಂತನೆ ನಡೆಸಿದೆ. ಇದೀಗ ಈ ವಿಚಾರವಾಗಿಯೂ ಬಿಜೆಪಿ, ಕಾಂಗ್ರೆಸ್‌ ವಿರುದ್ದ ಕಿಡಿಕಾರಿದೆ.

ʼ10 ಕೆ.ಜಿ ಅಕ್ಕಿ ಕೊಡುತ್ತೇವೆ ಎಂದು ಅದರ ಬದಲಿಗೆ ಈಗ ಕೆ.ಜಿಗೆ ₹10 ಜಾಸ್ತಿ ಮಾಡಿ ತಿನ್ನುವ ಅನ್ನಕ್ಕೂ ಕನ್ನ ಹಾಕುತ್ತಾ ಇದ್ದೀರಿ. ನಿಮಗೂ ಫ್ರೀ ಅವರಿಗೂ ಫ್ರೀ ಇಲ್ಲ, ಹಾಲೂ ತುಟ್ಟಿ, ಅಕ್ಕಿಯೂ ತುಟ್ಟಿ ಎಂಬುದೇ ಕಾಂಗ್ರೆಸ್‌ ಸರ್ಕಾರದ ಆಡಳಿತ ಮಂತ್ರ. ಪೆಟ್ರೋಲ್‌ ಮೇಲಿನ ತೆರಿಗೆ ಏರಿಕೆ ಒಂದು ಬಾಕಿ ಇದೆ. ಅದನ್ನೂ ಮಾಡಿ ಮುಗಿಸುತ್ತೀರಾ ಸಿದ್ದರಾಮಯ್ಯನವರೇ?ʼ ಎಂದು ಬಿಜೆಪಿ ಪ್ರಶ್ನಿಸಿದೆ.

suddiyaana