ಕಡಿತಗೊಳಿಸಿದ್ದ ಪ್ರೋತ್ಸಾಹ ಧನ ಮತ್ತೆ ನೀಡಲು ಮುಂದಾದ ಹಾಲಿನ ಒಕ್ಕೂಟ – ಗ್ರಾಹಕರಿಗೆ ಬೆಲೆ ಏರಿಕೆ ಭೀತಿ!

ಕಡಿತಗೊಳಿಸಿದ್ದ ಪ್ರೋತ್ಸಾಹ ಧನ ಮತ್ತೆ ನೀಡಲು ಮುಂದಾದ ಹಾಲಿನ ಒಕ್ಕೂಟ – ಗ್ರಾಹಕರಿಗೆ ಬೆಲೆ ಏರಿಕೆ ಭೀತಿ!

ಬೆಂಗಳೂರು: ರೈತರಿಗೆ ಕೊಡುತ್ತಿದ್ದ ಹಾಲಿನ ಪ್ರೋತ್ಸಾಹ ಧನ ಕಡಿತಗೊಳಿಸಿ ವಿರೋಧಕ್ಕೆ ಕಾರಣವಾಗಿದ್ದ ಹಾಲು ಒಕ್ಕೂಟ ಇದೀಗ ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ಹಾಲಿನ ಪ್ರೋತ್ಸಾಹ ಧನ ನೀಡಲು ಮುಂದಾಗಿದೆ. ಆದರೆ ಹಾಲು ಒಕ್ಕೂಟ ಸರ್ಕಾರಕ್ಕೆ ಕೆಲವು ಕಂಡಿಷನ್‌ ಹಾಕಿದೆ. ಇದರಿಂದಾಗಿ ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ಇದೆ.

ಇದನ್ನೂ ಓದಿ: ಆನೆಗಳಿಗೂ ಯೋಗ ಕ್ಲಾಸ್‌! – ಮನುಷ್ಯರನ್ನೇ ನಾಚಿಸುವಂತಿದೆ ಗಜಪಡೆಯ ಯೋಗಾಭ್ಯಾಸ..

ಅಗತ್ಯ ವಸ್ತುಗಳಿಗೆ ದಿನದಿನಕ್ಕೆ ಬೆಲೆ ಏರಿಕೆಯಾಗುತ್ತಿದೆ. ಇದೀಗ ಮತ್ತೆ ಹಾಲಿನ ದರ ಹೆಚ್ಚಾಗುವ ಆತಂಕ ಎದುರಾಗಿದೆ. ಹಾಲಿನ ಒಕ್ಕೂಟಗಳು ನಷ್ಟ ಅನುಭವಿಸುತ್ತಿವೆ. ಹೀಗಾಗಿ ಎರಡು ತಿಂಗಳಿನಿಂದ ರೈತರಿಗೆ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು ನಿಲ್ಲಿಸಲು ಮುಂದಾಗಿದ್ದವು. ಇದಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಕಡಿತಗೊಳಿಸಿದ ಹಾಲಿನ ಪ್ರೋತ್ಸಾಹಧನವನ್ನು ಮತ್ತೆ ನೀಡಲು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದು, ಮತ್ತೆ ನೀಡಲು ಒಕ್ಕೂಟಗಳು ಮುಂದಾಗಿದೆ. ಆದರೆ ಸರ್ಕಾರದ ಮುಂದೆ ಈಗ ದರ ಏರಿಕೆಯ ಪ್ರಸ್ತಾವನೆ ಇಡಲು ಹಾಲಿನ ಒಕ್ಕೂಟ ತಯಾರಾಗಿದೆ.

ಹಾಲಿನ ಒಕ್ಕೂಟಗಳು ನಿತ್ಯವೂ 16 ರೂಪಾಯಿ ಲಕ್ಷ ನಷ್ಟದಲ್ಲಿ ನಡೆಯುತ್ತಿದೆ. ಇದು ಕೆಎಂಎಫ್‍ ನ ಹಾದಿಗೆ ಕಷ್ಟವಾಗಲಿದೆ. ಪ್ರತಿ ಲೀಟರ್ ಗೆ 5 ರೂಪಾಯಿ ಹೆಚ್ಚಳಕ್ಕೆ ಮನವಿ ಮಾಡಲು ನಿರ್ಧಾರ ಮಾಡಲು ನಿರ್ಧರಿಸಿದೆ. ಹಾಲಿನ ದರ ಏರಿಕೆ ಅನಿವಾರ್ಯತೆ ಅನ್ನೋದು ಹಾಲು ಒಕ್ಕೂಟದ ಮಾತು. ಆದರೆ ಗ್ರಾಹಕರು ಮಾತ್ರ ಇದಕ್ಕೆ ತಯಾರಾಗಿಲ್ಲ. ಅತ್ತ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಸರ್ಕಾರ ದರ ಏರಿಕೆಯತ್ತ ಮನಸು ಮಾಡೋದು ಅನುಮಾನ ಎನ್ನಲಾಗಿದೆ.

suddiyaana