ಮಗುವಿನ ನಿರೀಕ್ಷೆಯಲ್ಲಿ ಮಿಲನಾ ಮತ್ತು ಡಾರ್ಲಿಂಗ್ ಕೃಷ್ಣ – ಖುಷಿ ಹಂಚಿಕೊಂಡ ನಟಿ
ಸ್ಯಾಂಡಲ್ವುಡ್ ಸ್ಟಾರ್ ಜೋಡಿ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಶಿವರಾತ್ರಿ ದಿನವೇ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಈ ಜೋಡಿ ಚೊಚ್ಚಲ ಮಗುವಿನ ಆಗಮನದ ಕಾಯುವಿಕೆಯಲ್ಲಿದೆ.
ಪರಸ್ಪರ ಪ್ರೀತಿಸುತ್ತಿದ್ದ ಇವರು 2021ರ ಫೆಬ್ರವರಿ 14ರಂದು ಮದುವೆ ಆದರು. ಈಗ ಮೂರು ವರ್ಷಗಳ ಬಳಿಕ ಈ ದಂಪತಿ ಸಿಹಿ ಸುದ್ದಿ ನೀಡಿದ್ದಾರೆ. 2024ರ ಸೆಪ್ಟೆಂಬರ್ನಲ್ಲಿ ಮಗುವಿನ ಆಗಮನ ಆಗಲಿದೆ ಎಂದು ಮಿಲನಾ ಹಾಗೂ ಕೃಷ್ಣ ಘೋಷಣೆ ಮಾಡಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಯಾಗಿದ್ದಾರೆ. ದಂಪತಿಗೆ ವಿಶ್ ತಿಳಿಸುತ್ತಿದ್ದಾರೆ.
ಇದನ್ನೂ ಓದಿ: ರೆಬೆಲ್ ಲೇಡಿ ಸುಮಲತಾ ಕಾಂಗ್ರೆಸ್ಸಿಗರ ವಿರುದ್ಧ ಸಿಟ್ಟಾಗಿರೋದೇಕೆ..? ಸಚಿವ ಚಲುವರಾಯಸ್ವಾಮಿ ಕೊಟ್ಟ ತಿರುಗೇಟು ಏನು..?
ಈ ಖುಷಿ ಸುದ್ದಿಯನ್ನು ಮಿಲನಾ ನಾಗರಾಜ್ ಅವರೇ ರಿವೀಲ್ ಮಾಡಿದ್ದಾರೆ. ಶುಭ ಶಿವರಾತ್ರಿಯಂದೇ ಈ ಬಗ್ಗೆ ಮಿಲನಾ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಮಾಹಿತಿ ನೀಡಿದ್ದಾರೆ. ಸಾಂಕೇತಿಕವಾಗಿ ಮಗುವಿನ ಬಟ್ಟೆಯ ಫೋಟೋ ಶೇರ್ ಮಾಡಿದ್ದಾರೆ. ಅದರ ಮೇಲೆ 2024, ಸೆಪ್ಟೆಂಬರ್ನಲ್ಲಿ ಬೇಬಿ ‘KrissMi’ ಆಗಮನ ಆಗ್ತಿದೆ. ನೀವೆಲ್ಲರೂ ನಮಗೆ ಆಶೀರ್ವಾದ ಮಾಡಿ ಎಂದು ಪೋಸ್ಟ್ ಮಾಡಿದ್ದಾರೆ. ‘KrissMi’ ಎಂದು ಬಟ್ಟೆಯ ಮೇಲೆ ಬರೆದಿರೋ ಹಿನ್ನೆಲೆಯಲ್ಲಿ ಮಗುವಿಗೆ ಅದೇ ಹೆಸರು ಇಡುತ್ತಾರೆ ಎಂದು ಅಭಿಮಾನಿಗಳು ಮಾತಾಡಿಕೊಳ್ತಿದ್ದಾರೆ.