ಇಟಲಿ ಕರಾವಳಿಯಲ್ಲಿ ಭೀಕರ ಬೋಟ್ ದುರಂತ – ಯುರೋಪ್ಗೆ ಹೊರಟಿದ್ದ71 ಮಂದಿ ಸಮುದ್ರದಲ್ಲಿ ನಾಪತ್ತೆ

ಇಟಲಿ ಕರಾವಳಿಯಲ್ಲಿ ಭೀಕರ ಬೋಟ್ ದುರಂತ ಸಂಭವಿಸಿದ್ದು, ಯುರೋಪ್ ತಲುಪಲು ಯತ್ನಿಸುತ್ತಿದ್ದ 71 ವಲಸಿಗರು ನಾಪತ್ತೆಯಾಗಿದ್ದಾರೆ. ಲಿಬಿಯಾದಿಂದ ಹೊರಟಿದ್ದ ಬೋಟ್ ಮೆಡಿಟರೇನಿಯನ್ ಸಮುದ್ರದಲ್ಲಿ ಮುಳುಗಿದ್ದು, 32 ಜನರನ್ನು ರಕ್ಷಿಸಲಾಗಿದೆ. ಸಮುದ್ರದ ಪ್ರತಿಕೂಲ ಹವಾಮಾನದಿಂದಾಗಿ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಅಕ್ರಮ ವಲಸೆ ಮತ್ತು ಮಾನವ ಕಳ್ಳಸಾಗಣೆಯ ಅಪಾಯವನ್ನು ಈ ಘಟನೆ ಮತ್ತೊಮ್ಮೆ ಎತ್ತಿ ತೋರಿಸಿದೆ. ಅಂತರಾಷ್ಟ್ರೀಯ ಸಮುದಾಯದ ತುರ್ತು ಕ್ರಮ ಅಗತ್ಯ ಎಂದು ಹೇಳಲಾಗಿದೆ.
ಲಿಬಿಯಾದಿಂದ ಯುರೋಪ್ಗೆ ಹೊರಟಿದ್ದ ಈ ಬೋಟ್ನಲ್ಲಿ ಒಟ್ಟು 105 ಜನರಿದ್ದರು ಎಂದು ಬದುಕುಳಿದವರು ತಿಳಿಸಿದ್ದಾರೆ. ಈಸ್ಟರ್ ರಜಾದಿನಗಳ ಸಂದರ್ಭದಲ್ಲಿ ಈ ಪ್ರಯಾಣವನ್ನು ಮಾಡಲಾತ್ತು. ಸಂತೋಷದಿಂದ ರಜೆ ದಿನವನ್ನು ಕಳೆಯುವ ಎಂದವರಿಗೆ ದೊಡ್ಡ ಅಘಾತವೇ ಕಾಯುತ್ತಿತ್ತು.ಆದರೆ, ಮೆಡಿಟರೇನಿಯನ್ ಸಮುದ್ರದ ಭೀಕರ ಅಲೆಗಳು ಮತ್ತು ಪ್ರತಿಕೂಲ ಹವಾಮಾನದಿಂದಾಗಿ ಬೋಟ್ ಭಾಗಶಃ ಮುಳುಗಿದೆ ಎಂದು ಹೇಳಲಾಗಿದೆ
ಇದನ್ನೂಓದಿ: 24 ಗಂಟೆಗಳಲ್ಲಿ RR ರಾಜಯೋಗ ಕಸಿದುಕೊಂಡ RCB- ಅಗ್ರ ಸ್ಥಾನದಲ್ಲಿ ಅಲಂಕರಿಸಿದ ಬೆಂಗಳೂರು ಟೀಮ್
ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸಿ 32 ಜನರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿವೆ. ದುರದೃಷ್ಟವಶಾತ್ ಇಬ್ಬರ ಶವಗಳು ಪತ್ತೆಯಾಗಿದ್ದು, ಇನ್ನುಳಿದ 71 ಜನರ ಪತ್ತೆಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿರುವುದರಿಂದ ಕಾರ್ಯಾಚರಣೆಗೆ ಅಡ್ಡಿಯುಂಟಾಗುತ್ತಿದೆ ಎಂದು ಇಟಲಿ ಅಧಿಕಾರಿಗಳು ತಿಳಿಸಿದ್ದಾರೆ.
ಮೆಡಿಟರೇನಿಯನ್ ಸಮುದ್ರವು ವಿಶ್ವದ ಅತ್ಯಂತ ಅಪಾಯಕಾರಿ ಪ್ರದೇಶವಾಗಿ ಮಾರ್ಪಟ್ಟಿದೆ. ಹಳೆಯ ಮತ್ತು ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರನ್ನು ತುಂಬಿದ ಬೋಟ್ಗಳ ಮೂಲಕ ನಡೆಯುವ ಇಂತಹ ಪ್ರಯಾಣಗಳು ಪದೇ ಪದೇ ಇಂತಹ ದುರಂತಗಳಿಗೆ ಕಾರಣವಾಗುತ್ತಿವೆ. ಅಕ್ರಮ ವಲಸೆಯನ್ನು ತಡೆಗಟ್ಟಲು ಮತ್ತು ಸುರಕ್ಷಿತ ಮಾರ್ಗಗಳನ್ನು ಕಲ್ಪಿಸಲು ಅಂತರಾಷ್ಟ್ರೀಯ ಸಮುದಾಯವು ತಕ್ಷಣ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಈ ಘಟನೆಯಿಂದ ಮತ್ತೊಮ್ಮೆ ಸಾಬೀತಾಗಿದೆ.

ನೋಡಿರಿ

