ಘರ್ಜನೆ ನಿಲ್ಲಿಸಿದ ಮಿಗ್ 21 – ದೇಶ ರಕ್ಷಕನಿಗೆ ನಮ್ಮ ಕೊನೆಯ ಸೆಲ್ಯೂಟ್


ಆಗಸದಲ್ಲಿ ದೇಶ ರಕ್ಷಕ ಘರ್ಜನೆ ಮಾಡುತ್ತಿದ್ದರೇ, ಕೆಳಗಿ ನಿಂತು ನೋಡುತ್ತಿದ್ದವರ ಕಣ್ಣಲ್ಲಿ ನೀರು ತುಂಬಿತ್ತು.. ಯಾಕಂದ್ರೆ ಇದು ದೇಶ ಸೇವಕನ ಕೊನೆಯ ಘರ್ಜನೆ ಆಗಿತ್ತು. ಬರೋಬ್ಬರಿ 62 ವರ್ಷಗಳ ಕಾಲ ಭಾರತದ ವಾಯುಗಡಿಯ ರಕ್ಷಣೆ ಮಾಡಿದ ಮಿಗ್-21 ಯುದ್ಧ ವಿಮಾನ,(ಸೆ.26-ಶುಕ್ರವಾರ) ಭಾರತೀಯ ವಾಯುಪಡೆಯ ಸೇವೆಯಿಂದ ನಿವೃತ್ತಿ ಹೊಂದಿದೆ. ಇದು ಕೇವಲ ಐಎಎಫ್ಗೆ ಮಾತ್ರವಲ್ಲದೇ, ಇಡೀ ಭಾರತಕ್ಕೆ ಒಂದು ಭಾವನಾತ್ಮಕ ಕ್ಷಣವಾಗಿದೆ.

ಹೌದು, ಅರ್ಧ ಶತಮಾನಗಳಿಗೂ ಅಧಿಕ ಕಾಲ ಭಾರತದ ವಾಯು ಗಡಿಗಳ ರಕ್ಷಕನಾಗಿದ್ದ ಮಿಗ್-21, ಇಂದು ತನ್ನ ಹಾರಾಟವನ್ನು ನಿಲ್ಲಿಸಿದೆ. 1965, 1971, ಮತ್ತು 1999ರ ಭಾರತ-ಪಾಕಿಸ್ತಾನ ಯುದ್ಧಗಳಲ್ಲಿ ಹಾಗೂ 2019ರ ಬಾಲಾಕೋಟ್ ವೈಮಾನಿಕ ದಾಳಿಯಲ್ಲಿ ನಿರ್ಣಾಯಕ ಪಾತ್ರವಹಿಸಿದ್ದ ಮಿಗ್-21, ಇಂದಿನಿಂದ ಕೇವಲ ನೆನಪು ಮಾತ್ರ.

ರಷ್ಯಾದ ಮಿಕೋಯನ್-ಗುರೆವಿಚ್ ಡಿಸೈನ್ ಬ್ಯೂರೋ ವಿನ್ಯಾಸಗೊಳಿಸಿದ್ದ ಮಿಗ್-21 ಯುದ್ಧ ವಿಮಾನಗಳೆಂದರೆ, ಭಾರತೀಯ ವಾಯುಸೇನೆಗೆ ತುಂಬಾ ಅಚ್ಚುಮೆಚ್ಚು. ಮಿಗ್-21 ಯುದ್ಧ ಮೈದಾನಕ್ಕೆ ಧುಮುಕಿದರೆ, ಭಾರತದ ಗೆಲುವು ನಿಶ್ಚಿತ ಎಂಬ ಅಚಲ ನಂಬಿಕೆ ಎಲ್ಲರದ್ದಾಗಿತ್ತು. ಈ ಸೂಪರ್ಸಾನಿಕ್ ಜೆಟ್ ಯುದ್ಧ ವಿಮಾನ ಅದೇ ರೀತಿಯ ಫಲಿತಾಂಶವನ್ನು ಕೂಡ ನೀಡಿತ್ತು.

1963ರಲ್ಲಿ ಚಂಡೀಗಢ ವಾಯುನೆಲೆಯಲ್ಲಿ ಮಿಗ್-21 ಯುದ್ಧ ವಿಮಾನವನ್ನು ಭಾರತೀಯ ವಾಯುಪಡೆಗೆ ಅಧಿಕೃತವಾಗಿ ಸೇರ್ಪಡೆಗೊಳಿಸಲಾಗಿತ್ತು. ಇದೇ ಕಾರಣಕ್ಕೆ ಅದರ ವಿದಾಯ ಸಮಾರಂಭವನ್ನೂ ಇದೇ ವಾಯುನೆಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.

1981ರಲ್ಲಿ ಭಾರತೀಯ ವಾಯುಸೇನೆಯ ಮುಖ್ಯಸ್ಥರಾದ ಏರ್ ಚೀಫ್ ಮಾರ್ಷಲ್ ದಿಲ್ಬಾಗ್ ಸಿಂಗ್, 1963ರಲ್ಲಿ ಚಂಡೀಗಢ ವಾಯುನೆಲೆಯಲ್ಲಿ ಮಿಗ್-21 ಯುದ್ಧ ವಿಮಾನಗಳ ಮೊ,ಲ ಸ್ಕ್ವಾಡ್ರನ್ ಮುನ್ನಡೆಸಿದ್ದರು.


ನೋಡಿರಿ

