ಮಧ್ಯಪ್ರಾಚ್ಯದಲ್ಲಿ ಯುದ್ಧ ಎಫೆಕ್ಟ್ – ಭಾರತದಲ್ಲೇ ವೆಸ್ಟ್ ಇಂಡೀಸ್ , ಜಿಂಬಾಬ್ವೆ ಆಟಗಾರರು ಲಾಕ್

ಮಧ್ಯಪ್ರಾಚ್ಯದಲ್ಲಿ ಯುದ್ಧ ಎಫೆಕ್ಟ್ – ಭಾರತದಲ್ಲೇ  ವೆಸ್ಟ್ ಇಂಡೀಸ್ , ಜಿಂಬಾಬ್ವೆ ಆಟಗಾರರು ಲಾಕ್

ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಟಿ20 ವಿಶ್ವಕಪ್‌ ಆಡಲು ಬಂದಿದ್ದ ವೆಸ್ಟ್‌ ಇಂಡೀಸ್‌ ಮತ್ತು ಜಿಂಬಾಬ್ವೆ ತಂಡಗಳು ವಿಶ್ವಕಪ್ ರೇಸ್‌ನಿಂದ ಹೊರ ಬಿದ್ದರು ಭಾರತದಲ್ಲಿ ಉಳಿದುಕೊಳ್ಳುವಂತಾಗಿದೆ.  ಅಂತರರಾಷ್ಟ್ರೀಯ ವಾಯುಪ್ರದೇಶದ ನಿರ್ಬಂಧಗಳಿಂದಾಗಿ ಭಾರತದಲ್ಲೇ ಉಳಿಯುವಂತಾಗಿದೆ. ಆಟಗಾರರು ಮತ್ತು ಸಿಬ್ಬಂದಿಗಳ ಸುರಕ್ಷಿತ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಕ್ರಿಕೆಟ್ ವೆಸ್ಟ್ ಇಂಡೀಸ್  ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ  ಮತ್ತು ಸಂಬಂಧಿತ ಸರ್ಕಾರಿ ಅಧಿಕಾರಿಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದೆ.

“ಐಸಿಸಿ ಪುರುಷರ ಟಿ20 ವಿಶ್ವಕಪ್‌ನಿಂದ ಹೊರಬಿದ್ದ ನಂತರ, ವೆಸ್ಟ್ ಇಂಡೀಸ್ ಹಿರಿಯ ಪುರುಷರ ತಂಡವು ಭಾರತದಿಂದ ನಿರ್ಗಮಿಸುವುದು ಅಂತರರಾಷ್ಟ್ರೀಯ ವಾಯುಪ್ರದೇಶದ ನಿರ್ಬಂಧಗಳಿಂದಾಗಿ ವಿಳಂಬವಾಗಿದೆ ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಕೋಲ್ಕತ್ತಾದಲ್ಲಿ ಭಾರತದ ವಿರುದ್ಧ ಗೆಲ್ಲಲೇಬೇಕಾದ ಸೂಪರ್ ಎಂಟನೇ ಪಂದ್ಯದಲ್ಲಿ ಸೋತ ನಂತರ ವೆಸ್ಟ್ ಇಂಡೀಸ್ ತಂಡವು ಪಂದ್ಯಾವಳಿಯಿಂದ ಹೊರಬಿತ್ತು.

ಇದನ್ನೂ ಓದಿ: ಜೀವನಾಂಶ ಕೇಳಿದ ಹೆಂಡತಿಗೆ ಸುಪಾರಿ – ಕೊ*ಲೆ ಮಾಡಿ ಆ್ಯ*ಕ್ಸಿಡೆಂಟ್ ಎಂದು ನಂಬಿಸಿದವರು ಲಾಕ್

ವಿಶ್ವದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದಾದ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೂ ಹಾನಿ ಸಂಭವಿಸಿದ್ದು, ಭದ್ರತಾ ಕಾಳಜಿ ಹೆಚ್ಚಾದ ಕಾರಣ ಗಲ್ಫ್ ಪ್ರದೇಶದ ಕೆಲವು ಭಾಗಗಳಲ್ಲಿ ವಿಮಾನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.

ಇದು ಜಿಂಬಾಬ್ವೆ ತಂಡದ ಮೇಲೂ ಕೂಡ ಎಫೆಕ್ಟ್ ಬೀಳುವಂತೆ ಮಾಡಿದೆ.  ಜಿಂಬಾಬ್ವೆ ತಂಡದ ಆಟಗಾರರು ಸದ್ಯ ದೆಹಲಿಯಲ್ಲಿಯೇ ಉಳಿದಿದ್ದು, ಪರ್ಯಾಯ ಪ್ರಯಾಣ ವ್ಯವಸ್ಥೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ದೃಢಪಡಿಸಿದೆ. ತಂಡವು ದುಬೈ ಮೂಲಕ ತವರಿಗೆ ಮರಳಬೇಕಿತ್ತು, ಆದರೆ ಮಧ್ಯಪ್ರಾಚ್ಯದಲ್ಲಿ ಉಂಟಾಗುತ್ತಿರುವ ಪರಿಸ್ಥಿತಿಯಿಂದಾಗಿ  ಪ್ರಯಾಣದ ಮೇಲೆ ಎಫೆಕ್ಟ್ ಬಿದ್ದಿದೆ.  ಐಸಿಸಿ ತುರ್ತು ಕ್ರಮಗಳನ್ನು ಸಕ್ರಿಯಗೊಳಿಸಿದ್ದು, ಪರ್ಯಾಯ ವ್ಯವಸ್ಥೆಗಳನ್ನು ಪಡೆಯಲು ಅಂತರರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿದೆ ಎಂದು ಹೇಳಿದೆ.

Kishor KV

Leave a Reply

Your email address will not be published. Required fields are marked *