BBKಯಿಂದ ಮಂಜು, ಸತೀಶ್‌ OUT..  5 ಮಂದಿ ವೈಲ್ಡ್‌ ಕಾರ್ಡ್‌ ಎಂಟ್ರಿ! – ವೀಕ್ಷಕರ Vote ಕೌಂಟ್‌ ಆಗಲ್ವಾ?

BBKಯಿಂದ ಮಂಜು, ಸತೀಶ್‌ OUT..  5 ಮಂದಿ ವೈಲ್ಡ್‌ ಕಾರ್ಡ್‌ ಎಂಟ್ರಿ! – ವೀಕ್ಷಕರ Vote ಕೌಂಟ್‌ ಆಗಲ್ವಾ?

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ರಲ್ಲಿ ಯಾರೂ ನೀರಿಕ್ಷಿಸದ ಟ್ವಿಸ್ಟ್‌ ನೀಡಲಾಗ್ತಿದೆ. ಈ ಸೀಸನ್‌ನಲ್ಲಿ Expect the Unexpected ಥೀಮ್‌ ಮಾಡಲಾಗಿದ್ದು, ಸ್ಪರ್ಧಿಗಳು ಮಾತ್ರವಲ್ಲ.. ವೀಕ್ಷಕರ ಲೆಕ್ಕಾಚಾರ ಕೂಡ ಉಲ್ಟಾ ಪಲ್ಟಾ ಆಗ್ತಿದೆ. ಕಳೆದ ವೀಕೆಂಡ್‌ನಲ್ಲಿ ಮಾಳು ಹಾಗೂ ಸ್ಪಂದನಾ ಎಲಿಮಿನೇಟ್‌ ಆಗ್ತಾರೆ ಅಂತಾ ಎಲ್ಲರೂ ಅಂದ್ಕೊಂಡಿದ್ರು.. ಆದ್ರೆ ಕಡೆಗೆ ಅವರಿಬ್ಬರನ್ನ ಫೈನಲ್‌ ಗೆ ಆಯ್ಕೆ ಮಾಡಲಾಗಿತ್ತು.. ಆದ್ರೀಗ ಬಿಗ್ ಬಾಸ್‌ ಮಧ್ಯರಾತ್ರಿಯೇ ಸ್ಪರ್ಧಿಗಳಿಗೆ ಶಾಕ್‌ ನೀಡಿದ್ದಾರೆ. ದೊಡ್ಮನೆಯಲ್ಲಿ ಮಿಡ್‌ ನೈಟ್‌ ಎಲಿಮಿನೇಷನ್‌ ನಡೆದಿದೆ.

ಇದನ್ನೂ ಓದಿ: ಕಾಂತಾರ ಚಾಪ್ಟರ್‌ 1 ಸಕ್ಸಸ್‌ ಬೆನ್ನಲ್ಲೇ ರಿಷಬ್‌ ಶೆಟ್ಟಿ ಟೆಂಪಲ್‌ ರನ್!‌ – ಚಾಮುಂಡೇಶ್ವರಿ ದರ್ಶನ ಪಡೆದ ಡಿವೈನ್‌ ಸ್ಟಾರ್!‌

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶುರುವಾದ ಮೊದಲ ದಿನದಿಂದಲೇ ಸ್ಪರ್ಧಿಗಳಿಗೆ ಶಾಕ್‌ ಮೇಲೆ ಶಾಕ್‌ ನೀಡಲಾಗ್ತಿದೆ. ಈ ಸೀಸನ್‌ ನಲ್ಲಿ ಎರಡು ಫಿನಾಲೆ ನಡೆಯಲಿದೆ. ಈ ವೀಕೆಂಡ್ ಮಿಡ್‌ ಫಿನಾಲೆ ನಡೆಯಲಿದ್ದು,  ಇವೆಲ್ಲದ್ರ ನಡುವೆ ಮತ್ತೊಂದು ಅನಿರೀಕ್ಷಿತ ಟ್ವಿಸ್ಟ್‌ ಕೊಟ್ಟಿದ್ದಾರೆ  ಬಿಗ್ ಬಾಸ್. ರಾತ್ರೋ ರಾತ್ರಿ ಎಲಿಮಿನೇಷನ್‌ ಪ್ರಕ್ರಿಯೇ ನಡೆದಿದೆ. ಇಬ್ಬರು ಸ್ಪರ್ಧಿಗಳು ದೊಡ್ಮನೆಯಿಂದ ಔಟ್‌ ಆಗಿದ್ದಾರೆ ಎಂದು ಹೇಳಲಾಗ್ತಿದೆ.

ಮೊದಲ ದಿನ ಎಲಿಮಿನೇಟ್‌ ಆಗಿದ್ದ ರಕ್ಷಿತಾ ಮತ್ತೆ ದೊಡ್ಮನೆಗೆ ಬಂದು ಚೆನ್ನಾಗಿ ಆಟ ಆಡ್ತಿದ್ದಾರೆ. ಇನ್ನು ಆರ್‌ ಜೆ ಅಮಿತ್‌, ಬಾಡಿ ಬಿಲ್ಡರ್‌ ಕರಿಬಸಪ್ಪ ಮೊದಲ ವಾರ ಎಲಿಮಿನೇಟ್‌ ಆಗಿದ್ದಾರೆ. ಎರಡನೇ ವಾರ ಸ್ಪಂದನಾ ಮಾಳು ಎಲಿಮಿನೇಟ್‌ ಆಗ್ತಾರೆ ಅಂದ್ಕೊಂಡ್ರೆ ಬಿಗ್‌ ಬಾಸ್‌ ಅವರಿಬ್ಬರನ್ನ ಫೈನಲ್‌ ಗೆ ಸೆಲೆಕ್ಟ್‌ ಮಾಡಿದ್ರು.. ಬಳಿಕ ಕಿಚ್ಚ ಸುದೀಪ್‌ ಈ ವಾರ ಏನ್‌ ಬೇಕಾದ್ರೂ ಆಗ್ಬೋದು.. ಎಷ್ಟು ಜನ ಬೇಕಾದ್ರೂ ಹೊರಗೆ ಹೋಗ್ಬೋದು.. ಎಷ್ಟು ಮಂದಿ ಸ್ಪರ್ಧಿಗಳು ಹೊರಹೋಗುತ್ತಾರೋ ಅಷ್ಟೇ ಮಂದಿ ಪುನಃ ವೈಲ್ಡ್ ಕಾರ್ಡ್ ಮೂಲಕ ದೊಡ್ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಿದ್ರು. ಇದೀಗ ಮಿಡ್‌ ವೀಕ್‌ನಲ್ಲಿ ಎಲಿಮಿನೇಷನ್‌ ಆಗಿದ್ದು. ನಟಿ ಮಂಜು ಭಾಷಿಣಿ ಹಾಗೂ ಡಾಗ್‌ ಸತೀಶ್‌ ದೊಡ್ಮನೆಯಿಂದ ಹೊರ ಬಂದಿದ್ದಾರೆ ಎಂದು ಹೇಳಲಾಗ್ತಿದೆ.

ಎಲಿಮಿನೇಷನ್‌ ಪ್ರಕ್ರಿಯೆಯ ಪ್ರೋಮೋವನ್ನ ಕಲರ್ಸ್‌ ಕನ್ನಡ ರಿಲೀಸ್‌ ಮಾಡಿದೆ. ಮಧ್ಯರಾತ್ರಿ ಎಲ್ಲರೂ ಮಲಗಿರುವಾಗ ಬಿಗ್ ಬಾಸ್ ಕಡೆಯಿಂದ ರೆಡ್ ಲೈಟ್ ಆನ್ ಆಗಿ, ಸೈರನ್ ಸೌಂಡ್ ಆಗಿದೆ. ಎಲ್ಲರನ್ನೂ ಗಾರ್ಡನ್ ಏರಿಯಾದಲ್ಲಿ ಸಾಲಾಗಿ ನಿಲ್ಲಿಸಲಾಗಿದೆ. ಗ್ರ್ಯಾಂಡ್ ಫಿನಾಲೆಗು ಮುನ್ನವೇ ಒಬ್ಬರ ಆಟ ಇಲ್ಲಿಗೆ ಮುಗಿದು ಬಿಗ್ ಬಾಸ್ ಮನೆಯಿಂದ ಹೊರಹೋಗಲಿದ್ದಾರೆ. ಯಾರನ್ನ ಈ ಮನೆಯಿಂದ ಹೊರಹಾಕಲು ಇಚ್ಚಿಸುತ್ತೀರಿ ಎಂದು ಘೋಷಿಸಬೇಕು ಎಂದು ಬಿಗ್ ಬಾಸ್ ಹೇಳಿದ್ದಾರೆ. ಈ ವೇಳೆ ಹೆಚ್ಚಿನ ಸ್ಪರ್ಧಿಗಳು ಡಾಗ್ ಸತೀಶ್, ರಕ್ಷಿತಾ ಶೆಟ್ಟಿ, ಸ್ಪಂದನಾ, ಜಾನ್ವಿ ಹೆಸರು ತೆಗೆದುಕೊಂಡಿದ್ದಾರೆ. ಆದರೆ, ಮೂಲಗಳ ಪ್ರಕಾರ ಇಬ್ಬರು ಸ್ಪರ್ಧಿಗಳು ಹೊರಹೋಗಿದ್ದಾರೆ. ಮಂಜು ಭಾಷಿಣಿ ಹಾಗೂ ಸತೀಶ್ ಮಿಡ್ ವೀಕ್ ಡೊಡ್ಮನೆಯಿಂದ ಆಚೆ ಬಂದಿದ್ದಾರೆ ಎಂದು ಹೇಳಲಾಗಿದೆ. ಇಂದಿನ ಎಪಿಸೋಡ್ ನಲ್ಲಿ ಈ ಬಗ್ಗೆ ಗೊತ್ತಾಗಲಿದೆ.

ಅಂದ್ಹಾಗೆ ಇಬ್ಬರು ಎಲಿಮಿನೇಟ್‌ ಆಗಲು ಕಾರಣ ಏನು ಅಂತಾ ನೋಡೋದಾದ್ರೆ ಡಾಗ್ ಸತೀಶ್ ಎಲಿಮಿನೇಟ್ ಆಗಲು ಮುಖ್ಯ ಕಾರಣ ಅವರಿಗೆ ದೊಡ್ಡ ಅಭಿಮಾನಿ ಬಳಗವಿಲ್ಲ. ಅವರು ಮನೋರಂಜನೆ ಕ್ಷೇತ್ರದಿಂದ ಬಂದವರಲ್ಲ. ಅಷ್ಟೇ ಅಲ್ಲದೆ ಸತೀಶ್  ಬಿಗ್ ಬಾಸ್ ಕೊಟ್ಟಿದ್ದ ಸೀಕ್ರೆಟ್ ಟಾಸ್ಕ್‌ ಅನ್ನು ಅಚ್ಚುಕಟ್ಟಾಗಿ ಮಾಡಿದ್ದು ಬಿಟ್ಟರೆ, ಉಳಿದ ಟಾಸ್ಕ್‌ಗಳಲ್ಲಿ ಹಿಂದೆ ಬಿದ್ದಿದ್ದಾರೆ. ಹೀಗಾಗಿ ಇವರು ಎಲಿಮಿನೇಟ್ ಆಗಿದ್ದಾರೆ ಎನ್ನಲಾಗುತ್ತಿದೆ.

ಅತ್ತ ಮಂಜು ಭಾಷಿಣಿ ಅವರು ಮೊದಲೆರಡು ವಾರ ಅಡುಗೆ ಮನೆಯಲ್ಲೇ ಫಿಕ್ಸ್ ಆಗಿದ್ದರು. ಕಿಚ್ಚ ಸುದೀಪ್ ಈ ಕುರಿತು ಪರೋಕ್ಷವಾಗಿ ಹೇಳಿದರೂ ಅದನ್ನು ಇವರು ಸೀರಿಯೆಸ್ ಆಗಿ ತೆಗೆದುಕೊಂಡಿಲ್ಲ. ಫಿಸಿಕಲ್ ಟಾಸ್ಕ್‌ಗಳಲ್ಲಿ ಮಂಜು ಉತ್ತಮ ಪ್ರದರ್ಶನ ನೀಡಿಲ್ಲ. ಸ್ಟ್ರಾಟೆಜಿ ಮಾಡೋದ್ರಲ್ಲಿ ಮತ್ತು ಮಾತಲ್ಲೇ ಟಕ್ಕರ್‌ ಕೊಡೋದ್ರಲ್ಲಿ ಮಂಜುಭಾಷಿಣಿ ಮುಂದಿದ್ದರು. ಆದರೆ, ಬಿಗ್ ಬಾಸ್​ನಲ್ಲಿ ಉಳಿಯಲು ಇದಿಷ್ಟೆ ಇದ್ದರೆ ಸಾಲದು. ಹೀಗಾಗಿ ಇವರಿಗೆ ಕಡಿಮೆ ವೋಟ್ ಬಂದು ಮನೆಯಿಂದ ಎಲಿಮಿನೇಟ್ ಆಗಿರಬಹುದು ಎಂದು ಹೇಳಲಾಗ್ತಿದೆ.

ಇನ್ನು ಬಿಗ್ ಬಾಸ್ ಫಿನಾಲೆ ಅಕ್ಟೋಬರ್ 18 ಹಾಗೂ 19 ರಂದು ನಡೆಯಲಿದೆ. ಸದ್ಯ ದೊಡ್ಮನೆಯಲ್ಲಿ 17 ಮಂದಿ ಇದ್ದು, ಇವರಲ್ಲಿ ಇಬ್ಬರು ವಾರದ ಮಧ್ಯವೇ ಹೊರ ಹೋಗಲಿದ್ದಾರೆ. ಆ ಬಳಿಕ ವಾರಾಂತ್ಯದಲ್ಲಿ ನಾಲ್ಕರಿಂದ ಐದು ಜನ ಔಟ್ ಆಗಬಹುದು ಎಂದು ಹೇಳಲಾಗುತ್ತಿದೆ. ಈಗಾಗಲೇ ಫಿನಾಲೆಗೆ ಸ್ಪರ್ಧಿಗಳು ಆಯ್ಕೆ ಆಗಿ ಆಗಿದೆ. ಕಾಕ್ರೋಚ್ ಸುಧಿ, ಅಶ್ವಿನಿ ಗೌಡ, ಮಾಲು ಹಾಗೂ ರಾಶಿಕಾ ಫಿನಾಲೆಯಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನೂ ಮೊದಲ ಫಿನಾಲೆಯಲ್ಲಿ ಯಾರು ಗೆಲ್ತಾರೆ ಅನ್ನೋ ಕ್ಯೂರಿಯಾಸಿಟಿ ಕೂಡ ಮೂಡಿದೆ. ಒಟ್ಟಾರೆ ಮುಂದಿನ ದಿನಗಳಲ್ಲಿ ಬಿಗ್‌ ಬಾಸ್‌ ಮನೆಯ ಆಟ ಸಾಕಷ್ಟು ಟ್ವಿಸ್ಟ್‌ ನಿಂದ ಕೂಡಿರಲಿದೆ.

Shwetha M