ಮೂನ್ ವಾಕ್ ವೇಳೆ ಮೈಕಲ್ ಜಾಕ್ಸನ್ ಧರಿಸುತ್ತಿದ್ದ ಟೋಪಿ ಹರಾಜು – ಅಬ್ಬಬ್ಬಾ ಎಷ್ಟು ಬೆಲೆಗೆ ಮಾರಾಟ ಗೊತ್ತಾ?

ಮೂನ್ ವಾಕ್ ವೇಳೆ ಮೈಕಲ್ ಜಾಕ್ಸನ್ ಧರಿಸುತ್ತಿದ್ದ ಟೋಪಿ ಹರಾಜು – ಅಬ್ಬಬ್ಬಾ ಎಷ್ಟು ಬೆಲೆಗೆ ಮಾರಾಟ ಗೊತ್ತಾ?

ಮೈಕಲ್ ಜಾಕ್ಸನ್. ಡ್ಯಾನ್ಸ್ ಜಗತ್ತಿನ ಮಹಾಗುರು. ಪಾಪ್ ಕಿಂಗ್. ಡ್ಯಾನ್ಸ್ ರಂಗದಲ್ಲಿ ಏನಾದರೂ ಸಾಧಿಸಬೇಕು ಎಂದು ಛಲ ಇಟ್ಟುಕೊಂಡವರಿಗೆ ಮೈಕಲ್ ಜಾಕ್ಸನ್ ಸಾಧನೆ ತಾಜಾ ಉದಾಹರಣೆ. ಈಗಾಗಲೇ ಮೈಕಲ್ ಜಾಕ್ಸನ್ (Michael Jackson) ಜೀವನದ ಕಥೆಯನ್ನ ತೆರೆಗೆ ತರಲು ತಯಾರಿ ನಡೆಯುತ್ತಿದೆ. ತಮ್ಮ ಅದ್ಭುತ ಡ್ಯಾನ್ಸ್‌ನಿಂದ ಪ್ರೇಕ್ಷಕರಿಂದ ರಂಜಿಸಿದ್ದ ಡ್ಯಾನ್ಸ್ ಕಿಂಗ್ ಕಥೆ ಬಯೋಪಿಕ್ (Biopic) ಆಗುತ್ತಿದೆ. ಇದೀಗ ಮೈಕಲ್ ಜಾಕ್ಸನ್ ಧರಿಸಿದ್ದ ಟೋಪಿ ದುಬಾರಿ ಬೆಲೆಗೆ ಮಾರಾಟವಾಗಿದೆ.

ಇದನ್ನೂ ಓದಿ : ಬಿಡುಗಡೆಗೂ ಮುನ್ನವೇ ದಳಪತಿ ವಿಜಯ್ ಸಿನಿಮಾಗೆ ಆತಂಕ – ಕೇರಳದಲ್ಲಿ ಜೋರಾಯ್ತು ಲಿಯೋ ಬಾಯ್ಕಾಟ್ ಟ್ರೆಂಡ್!

ಡ್ಯಾನ್ಸ್ ದಂತಕಥೆ ಮೈಕಲ್ ಜಾಕ್ಸನ್ ಅವರು ಧರಿಸುತ್ತಿದ್ದ ಟೋಪಿಯನ್ನ ಪ್ಯಾರಿಸ್​ನಲ್ಲಿ ಹರಾಜಿಗೆ ಇಡಲಾಗಿತ್ತು. ಈ ಟೋಪಿ ಬರೋಬ್ಬರಿ 68 ಲಕ್ಷ ರೂಪಾಯಿಗೆ ಹರಾಜಾಗಿದೆ. ಈ ಮೊತ್ತ ಕೇಳಿ ಅನೇಕರಿಗೆ ಶಾಕ್ ಆಗಿದೆ. ಸೆಲೆಬ್ರಿಟಿಗಳು ಬಳಕೆ ಮಾಡುತ್ತಿದ್ದ ವಸ್ತುಗಳಿಗೆ ಭರ್ಜರಿ ಬೆಲೆ ಇರುತ್ತದೆ. ಅದನ್ನು ಹರಾಜಿಗೆ ಇಟ್ಟರಂತೂ ಅಭಿಮಾನಿಗಳು ಎಷ್ಟು ದೊಡ್ಡ ಮೊತ್ತಕ್ಕಾದರೂ ಅದನ್ನು ಖರೀದಿಸಲು ಮುಂದೆ ಬರುತ್ತಾರೆ. ಈಗ ವಿಶ್ವ ಕಂಡ ಅದ್ಭುತ ಡ್ಯಾನ್ಸರ್ ಮೈಕಲ್ ಜಾಕ್ಸನ್ (Michael Jackson) ಅವರು ಧರಿಸುತ್ತಿದ್ದ ಟೋಪಿ ಭರ್ಜರಿ ಮೊತ್ತಕ್ಕೆ ಮಾರಾಟ ಆಗಿದೆ. ಮೈಕಲ್ ಜಾಕ್ಸನ್ ಅವರು ಒಳ್ಳೆಯ ಮೂನ್ ವಾಕ್ ಮಾಡುತ್ತಿದ್ದರು. ಅಷ್ಟೇ ಅಲ್ಲ, ಅವರು ಬಳಕೆ ಮಾಡುತ್ತಿದ್ದ ಟೋಪಿ ಕೂಡ ಗಮನ ಸೆಳೆದಿತ್ತು. ಮಂಗಳವಾರ (ಸೆಪ್ಟೆಂಬರ್ 26) ಪ್ಯಾರಿಸ್​ನಲ್ಲಿ ಮೈಕಲ್ ಜಾಕ್ಸನ್ ಟೋಪಿಯನ್ನು ಹರಾಜಿಗೆ ಇಡಲಾಗಿತ್ತು. ಈ ಟೋಪಿ ಬರೋಬ್ಬರಿ 68 ಲಕ್ಷ ರೂಪಾಯಿಗೆ ಹರಾಜಾಗಿದೆ. ಮೂನ್ ವಾಕ್ ಮಾಡುವಾಗ, ಡ್ಯಾನ್ಸ್ ಮಾಡುವಾಗ ಮೈಕಲ್ ಜಾಕ್ಸನ್ ಅವರು ಮುಖಕ್ಕೆ ಹ್ಯಾಟ್​ನ ಅಡ್ಡಲಾಗಿ ಇಟ್ಟುಕೊಳ್ಳುತ್ತಿದ್ದರು. ಈ ಕಾರಣದಿಂದ ಆ ಟೋಪಿ ಸಾಕಷ್ಟು ಸುದ್ದಿ ಆಗಿತ್ತು. ಈಗ ಇದು ಬರೋಬ್ಬರಿ 68 ಲಕ್ಷ ರೂಪಾಯಿಗೆ ಹರಾಜಾಗಿ ಎಲ್ಲರ ಅಚ್ಚರಿಗೆ ಕಾರಣ ಆಗಿದೆ. ಕಳೆದ ವರ್ಷ ಮೈಕಲ್ ಜಾಕ್ಸನ್ ಅವರ ಗಿಟಾರ್​ನ ಹರಾಜಿಗೆ ಇಡಲಾಗಿತ್ತು. ಮೂರು ಕೋಟಿ ರೂಪಾಯಿಗೆ ಈ ಗಿಟಾರ್ ಮಾರಾಟ ಆಗಿತ್ತು.

ಮೈಕಲ್ ಜಾಕ್ಸನ್ ಅವರು 1958, ಆಗಸ್ಟ್ 29ರಂದು ಅಮೆರಿಕದಲ್ಲಿ ಜನಿಸಿದರು. 50ನೇ ವಯಸ್ಸಿಗೆ ಅವರು ಮೃತಪಟ್ಟರು. ಅವರು ಸಾಕಷ್ಟು ವಿವಾದ ಕೂಡ ಮಾಡಿಕೊಂಡಿದ್ದಾರೆ. ಅವರು ಹಲವು ಬಾರಿ ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂದು ಕೂಡ ಹೇಳಲಾಗಿದೆ.

 

Shantha Kumari