ಬಿಗ್‌ಬಾಸ್ ಮನೆಯಿಂದ ಮೈಕಲ್ ಔಟ್ – ವಿನಯ್ ಟೀಮ್‌ನ ಮತ್ತೊಂದು ವಿಕೆಟ್ ಪತನ

ಬಿಗ್‌ಬಾಸ್ ಮನೆಯಿಂದ ಮೈಕಲ್ ಔಟ್ – ವಿನಯ್ ಟೀಮ್‌ನ ಮತ್ತೊಂದು ವಿಕೆಟ್ ಪತನ

ಬಿಗ್ ಬಾಸ್  ಮನೆಯಲ್ಲಿ ಈ ವಾರ ವಿನಯ್ ಟೀಮ್‌ನ ಮತ್ತೊಂದು ವಿಕೆಟ್ ಪತನವಾಗಿದೆ. ಬಿಗ್ ಬಾಸ್ ಮನೆಯಿಂದ ಮೈಕಲ್ ಅಜಯ್ ಔಟ್ ಆಗಿದ್ದಾರೆ. ಮಾಡೆಲ್ ಆಗಿ ಬಿಗ್ ಬಾಸ್ ಮನೆಗೆ ಕಾಲಿಟ್ಟ ಮೈಕಲ್, 90 ದಿನಗಳ ನಂತರ ಹೊರಬಿದ್ದಿದ್ದಾರೆ.

ಇದನ್ನೂ ಓದಿ:  ‘ಇದು ಎಐ ಜಗತ್ತಲ್ಲ. ಇದು ಯುಐ ಜಗತ್ತು’ – ‘UI’ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪ್ಪಿ ಕರಾಮತ್ತು..!

ಬಿಗ್‌ಬಾಸ್ ಮನೆಯಲ್ಲಿ ಮೈಕಲ್, ಕನ್ನಡ ಕಲಿತು ವೀಕ್ಷಕರ ಮನ ಗೆದ್ದಿದ್ದರು. ಮಣ್ಣಿನ ಮಗ ಮೈಕಲ್ ಎಂದು ಫೇಮಸ್ ಆಗಿದ್ದಾರೆ. ಬಿಗ್ ಬಾಸ್ ಶೋ ಬಂದಿದ್ದಕ್ಕೆ ಕನ್ನಡ ಕಲಿತೆ ಎಂದು ಅಭಿಮಾನದಿಂದ ಮೈಕಲ್ ಮಾತನಾಡಿದ್ದರು. ಇಶಾನಿ ಜೊತೆಗಿನ ಲವ್ವಿ-ಡವ್ವಿ ವಿಚಾರವಾಗಿ ಮೈಕಲ್ ಸಖತ್ ಹೈಲೆಟ್ ಆಗಿದ್ದರು. ಬಿಗ್ ಬಾಸ್‌ಗೆ ಕಾಲಿಟ್ಟ 6 ವಾರಗಳ ಕಾಲ ಮೈಕಲ್ ಆಟ ಚೆನ್ನಾಗಿಯೇ ಇತ್ತು. ಈ ಎರಡು ವಾರಗಳಿಂದ ಮೈಕಲ್ ಆಟದ ರೀತಿಯೇ ಬದಲಾಗಿತ್ತು. ಬಿಗ್ ಬಾಸ್ ಆದೇಶಕ್ಕೆ ಮತ್ತು ಕ್ಯಾಪ್ಟನ್ ಸ್ಥಾನಕ್ಕೆ ಗೌರವ ಕೊಡುತ್ತಿರಲಿಲ್ಲ. ಇದಕ್ಕೆ ಶನಿವಾರ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್ ಕೂಡಾ ಸರಿಯಾಗಿಯೇ ಕ್ಲಾಸ್ ತೆೆಗೆದುಕೊಂಡಿದ್ದರು. ನನಗೆ ರೂಲ್ಸ್ ಫಾಲೋ ಮಾಡೋಕೆ ಆಗಲ್ಲ ಎಂದು ಅಹಂನಿಂದ ಹೇಳಿದ್ದ ಮೈಕಲ್ ಆಟಕ್ಕೆ ಕೊನೆಗೂ ಬಿಗ್ ಬಾಸ್ ಬ್ರೇಕ್ ಹಾಕಿದೆ.

ಮೈಕಲ್ ಅವರ ತಂದೆ ನೈಜೀರಿಯಾ ಮೂಲದವರು. ಹೀಗಾಗಿ, ಮೈಕಲ್‌ಗೆ ಸರಿಯಾಗಿ ಕನ್ನಡ ಮಾತನಾಡಲು ಬರುತ್ತಿರಲಿಲ್ಲ. ಆದರೆ, ಬಿಗ್‌ಬಾಸ್ ಮನೆಗೆ ಬಂದ ಮೇಲೆ ಕನ್ನಡ ಕಲಿಯಲು ಸಾಕಷ್ಟು ಪ್ರಯತ್ನಿಸಿದರು. ಈ ಕಾರಣಕ್ಕೆ ಅವರಿಗೆ ಕಿಚ್ಚನ ಚಪ್ಪಾಳೆ ಕೂಡ ಸಿಕ್ಕಿತ್ತು. ಈಗ ಅವರು ಕಡಿಮೆ ವೋಟ್ ಪಡೆದು ಎಲಿಮಿನೇಟ್ ಆಗಿದ್ದಾರೆ. ಅವರು ಹೊರ ಹೋಗುವಾಗ ಪ್ರತಿಯೊಬ್ಬ ಸ್ಪರ್ಧಿಯೂ ಕಣ್ಣೀರು ಹಾಕಿದ್ದಾರೆ. ನಾನೇ ಬೇರೆ ನನ್ ಸ್ಟೈಲೇ ಬೇರೆ ಅಂತಿದ್ದ ಮೈಕಲ್ ಅವರಿಗೂ ದುಃಖ ತಡೆದುಕೊಳ್ಳಲು ಆಗಲಿಲ್ಲ. ಎಲಿಮಿನೇಟ್ ಆದ ಬಳಿಕ ಮೈಕಲ್ ಅವರು ವೇದಿಕೆ ಮೇಲೆ ಬಂದರು. ಈ ವೇಳೆ ಅವರು ಸುದೀಪ್ ಅವರಿಗೆ ಹಗ್ ಕೊಟ್ಟರು. ಆಗ ಅವರು ಒಂದು ಮಾತನ್ನು ಹೇಳಿದರು. ‘ಸುದೀಪ್ ಅವರನ್ನು ಕಂಡರೆ ಭಯ ಆಗುತ್ತದೆ ಎಂದು ಎಲ್ಲರೂ ಹೇಳುತ್ತಿದ್ದರು. ಆದರೆ, ನನಗೆ ಯಾವಾಗಲೂ ಆ ರೀತಿ ಅನಿಸಲೇ ಇಲ್ಲ. ಯಾವುದೋ ಹಳೆಯ ಗೆಳೆಯನ ಭೇಟಿ ಮಾಡುತ್ತಿದ್ದೇನೆ ಅನಿಸುತ್ತದೆ’ ಎಂದಿದ್ದಾರೆ ಮೈಕಲ್. ಈ ಮಾತನ್ನು ಕೇಳಿ ಸುದೀಪ್‌ಗೆ ಖುಷಿ ಆಯಿತು. ಅವರು ಮತ್ತೊಮ್ಮೆ ಮೈಕಲ್‌ ನ್ನ ಖುಷಿಯಿಂದ ತಬ್ಬಿಕೊಂಡರು.

Sulekha