ಬಿಗ್‌ಬಾಸ್‌ ಮನೆಯಲ್ಲಿ ಬಿಗ್‌ ಟ್ವಿಸ್ಟ್‌.. ಈ ವಾರ ಡಬಲ್ ಎಲಿಮಿನೇಷನ್ ಅಲ್ಲ! – ಮನೆಗೆ ವಾಪಸ್‌ ಬಂದಿದ್ಯಾರು?

ಬಿಗ್‌ಬಾಸ್‌ ಮನೆಯಲ್ಲಿ ಬಿಗ್‌ ಟ್ವಿಸ್ಟ್‌.. ಈ ವಾರ ಡಬಲ್ ಎಲಿಮಿನೇಷನ್ ಅಲ್ಲ! – ಮನೆಗೆ ವಾಪಸ್‌ ಬಂದಿದ್ಯಾರು?

ಬಿಗ್‌ ಬಾಸ್‌ ಸೀಸನ್‌ 10 ದಿನದಿಂದ ದಿನಕ್ಕೆ ರೋಚಕ ಹಂತ ತಲುಪುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಟ್ವಿಸ್ಟ್​ಗಳು ಸಿಗುತ್ತಲೇ ಇವೆ. ಮನೆಯ ಸ್ಪರ್ಧಿಗಳು ಕೂಡ ಹೊಸ ಹೊಸ ಬದಲಾವಣೆಗೂ ಒಗ್ಗಿಕೊಳ್ಳುತ್ತಿದ್ದಾರೆ. ವೀಕ್ಷಕರಿಗೂ ಆಗಾಗ ಸರ್​ಪ್ರೈಸ್ ಸಿಗುತ್ತಲೇ ಇದೆ. ಕಳೆದ ವೀಕೆಂಡ್​​ನಲ್ಲಿ ಕಿಚ್ಚ ಸುದೀಪ್ ಅನುಪಸ್ಥಿತಿಯಲ್ಲಿ ವೀಕೆಂಡ್‌ ಎಪಿಸೋಡ್‌ ಮೂಡಿಬಂದಿದೆ. ಶನಿವಾರದ ಎಪಿಸೋಡ್​ ಅನ್ನು ಶ್ರುತಿ ಅವರು ನಡೆಸಿಕೊಟ್ಟಿದ್ದಾರೆ. ಭಾನುವಾರ (ಡಿಸೆಂಬರ್ 24) ನಡೆದ ಎಲಿಮಿನೇಷನ್​ನಲ್ಲಿ ಇಬ್ಬರು ಮನೆಯಿಂದ ಹೊರ ಹೋದಂತೆ ತೋರಿಸಲಾಗಿದೆ. ಆದರೆ ಇದರ ಅಸಲಿಯತ್ತು ಬೇರೆಯದೇ ಇದೆ ಎನ್ನಲಾಗಿದೆ. ಇದೀಗ ಇಬ್ಬರ ಪೈಕಿ ಒಬ್ಬ ಸ್ಪರ್ಧಿ ದೊಡ್ಮನೆಗೆ ವಾಪಸ್‌ ಆಗಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ವಿಶ್ವದೆಲ್ಲೆಡೆ ಕ್ರಿಸ್‌ಮಸ್‌ ಹಬ್ಬದ ಸಂಭ್ರಮ – ಏಸುವಿನ ಜನ್ಮಸ್ಥಳದಲ್ಲಿ ಮಾತ್ರ ಸ್ಮಶಾನ ಮೌನ!

ಕಳೆದ ವೀಕೆಂಡ್​​ನಲ್ಲಿ ಸುದೀಪ್ ಅವರು ಬಂದಿರಲಿಲ್ಲ. ಅದಕ್ಕೆ ಕಾರಣ ಕೆಸಿಸಿ. ಹೀಗಾಗಿ ಶನಿವಾರದ ಎಪಿಸೋಡ್​ನ ಶ್ರುತಿ ಅವರು ನಡೆಸಿಕೊಟ್ಟಿದ್ದಾರೆ. ಭಾನುವಾರದ ಎಪಿಸೋಡ್​ಗೆ ಅತಿಥಿಗಳಾಗಿ ಬಿಗ್ ಬಾಸ್ ಸೀಸನ್ 7ರ ವಿನ್ನರ್ ಶೈನ್ ಶೆಟ್ಟಿ ಹಾಗೂ ಸೀಸನ್ 8ರ ಸ್ಪರ್ಧಿ ಶುಭಾ ಪೂಂಜಾ ಬಂದಿದ್ದರು. ಇಬ್ಬರೂ ಸಖತ್ ಮನರಂಜನೆ ನೀಡಿದ್ದಾರೆ. ಇನ್ನು ನಾಮಿನೇಟ್ ಆದವರ ಪೈಕಿ ಸೇವ್ ಮಾಡಲು ಬಿಗ್ ಬಾಸ್ ವಿವಿಧ ರೀತಿಯ ಚಟುವಟಿಕೆ ನೀಡುತ್ತಾ ಹೋದರು. ಈ ವೇಳೆ ಕೊನೆಯಲ್ಲಿ ಉಳಿದುಕೊಂಡಿದ್ದು ಮೈಕಲ್ ಹಾಗೂ ಅವಿನಾಶ್ ಮಾತ್ರ. ಅವಿನಾಶ್ ಹಾಗೂ ಮೈಕಲ್​ನ​ ಗಾರ್ಡನ್ ಏರಿಯಾಗೆ ಬಂದ ಕಾರಿನಲ್ಲಿ ಕೂರಿಸಲಾಯಿತು. ಆ ಬಳಿಕ ಎರಡೂ ಕಾರುಗಳು ಹೊರ ಹೋದವು. ಇಲ್ಲಿಗೆ ಎಪಿಸೋಡ್ ಪೂರ್ಣಗೊಂಡಿದೆ. ಇದೀಗ ಇಬ್ಬರು ಸ್ಫರ್ಧಿಗಳ ಪೈಕಿ ಒಬ್ಬ ಸ್ಪರ್ಧಿ ಬಿಗ್‌ಬಾಸ್‌ ಮನೆಗೆ ಆಗಮಿಸಿದ್ದಾರೆ. ಇಂದಿನ ಎಪಿಸೋಡ್​ನಲ್ಲಿ ಮೈಕಲ್ ಮರಳಿ ಬರೋದನ್ನು ತೋರಿಸಲಾಗುತ್ತದೆ ಎನ್ನಲಾಗುತ್ತಿದೆ.

ಇನ್ನು, ಲೈವ್​ನಲ್ಲಿ ಸಿರಿ ಆಡಿದ ಮಾತು ಗಮನ ಸೆಳೆದಿದೆ. ಪಾತ್ರೆ ತೊಳೆಯೋದು ಯಾರು ಎನ್ನುವ ವಿಚಾರವನ್ನು ಅವರು ಮಾತನಾಡುತ್ತಿದ್ದರು. ಈ ವೇಳೆ ಸಿರಿ ಅವರು ಮೈಕಲ್ ಹೆಸರನ್ನು ಸೇರಿಸಿದ್ದರು. ಇದು ಕೂಡ ಮೈಕಲ್ ದೊಡ್ಮನೆಗೆ ಮರಳಿದ್ದಾರೆ ಎನ್ನುವುದಕ್ಕೆ ಸಿಕ್ಕಿರೋ ಸಾಕ್ಷಿ. ಇಂದು (ಡಿಸೆಂಬರ್ 25) ಈ ಎಪಿಸೋಡ್ ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಪ್ರಸಾರ ಕಾಣಲಿದೆ. 24 ಗಂಟೆ ಲೈವ್ ನೋಡೋಕೆ ಅವಕಾಶ ಇದೆ.

Shwetha M