ಈಗಾಗಲೇ ಇಬ್ಬರ ಜೊತೆ ಲವ್ ಆಗಿದೆ, ಈಗ ಮೈಕಲ್ ಜೊತೆಯೂ ಆಗಬಹುದು – ಬಿಗ್‌ಬಾಸ್ ಮನೆಯಲ್ಲಿ ಶುರುವಾಯ್ತಾ ಇಶಾನಿ ಲವ್ ಸ್ಟೋರಿ

ಈಗಾಗಲೇ ಇಬ್ಬರ ಜೊತೆ ಲವ್ ಆಗಿದೆ, ಈಗ ಮೈಕಲ್ ಜೊತೆಯೂ ಆಗಬಹುದು – ಬಿಗ್‌ಬಾಸ್ ಮನೆಯಲ್ಲಿ ಶುರುವಾಯ್ತಾ ಇಶಾನಿ ಲವ್ ಸ್ಟೋರಿ

ಬಿಗ್‌ಬಾಸ್ ಮನೆಯಲ್ಲಿ ಈಗ ಜೋಡಿ ಲೆಕ್ಕಾಚಾರ ಜೋರಾಗಿಯೇ ಸಾಗುತ್ತಿದೆ. ಬಿಗ್ ಬಾಸ್ ರಿಯಾಲಿಟಿ ಶೋ ಶುರುವಾಗುವಾಗಲೇ ವೀಕ್ಷಕರು ಈ ಬಾರಿ ಯಾರೆಲ್ಲಾ ಜೋಡಿಯಾಗುತ್ತಾರೆ ಎಂದು ಲೆಕ್ಕಾಚಾರ ಮಾಡುತ್ತಿದ್ದರು. ಅದಕ್ಕೆ ಸರಿಯಾಗಿ ಈಗ ದೊಡ್ಮನೆಯೊಳಗೆ ಒಂದೊಂದೇ ಜೋಡಿ ಸೆಟ್ ಆಗುತ್ತಿದೆ. ಇದು ಕೆಲ ವೀಕ್ಷಕರಿಗೆ ಮನರಂಜನೆ ನೀಡಿದರೆ, ಇನ್ನು ಕೆಲವರು ಬಿಗ್‌ಬಾಸ್‌ಗೆ ಇವರೆಲ್ಲಾ ಆಡಲು ಹೋಗ್ತಾರಾ ಇಲ್ಲಾ ಲವ್ ಮಾಡಲು ಹೋಗ್ತಾರಾ ಎಂದು ಪ್ರಶ್ನೆ ಮಾಡುವಂತಾಗಿದೆ.

ಇದನ್ನೂ ಓದಿ: http://ಬಿಗ್ ಬಾಸ್ ನಲ್ಲೀಗ ‘ಹಳ್ಳಿಕಾರ್ ಒಡೆಯ’ನ ಹವಾ – ಹಳ್ಳಿಕಾರ್ ತಳಿಯ ಬಗ್ಗೆ ಜಗತ್ತಿಗೆ ತಿಳಿಸಲು ದೊಡ್ಮನೆಗೆ ಎಂಟ್ರಿ

ಬಿಗ್ ಬಾಸ್ ಕನ್ನಡ ಸೀಸನ್ 10 ಶುರುವಾಗಿ ಇನ್ನೂ ಒಂದು ವಾರ ಕಳೆದಿಲ್ಲ. ಈಗಾಗಲೇ ಕೆಲವರು ತಮಗೆ ಯಾರು ಯಾರು ಲವ್ ಮಾಡಲು ಸೆಟ್ ಆಗುತ್ತಾರೆ? ಯಾರ ಜೊತೆ ನಾವು ಲವ್ ಟ್ರ್ಯಾಕ್ ಆರಂಭಿಸಬಹುದು ಎಂದು ಲೆಕ್ಕ ಹಾಕುತ್ತಿದ್ದಾರೆ. ಈಗಾಗಲೇ ಸಂಗೀತಾ ಶೃಂಗೇರಿ ಅವರು ಕಾರ್ತಿಕ್ ಮಹೇಶ್ಗೆ ನಾವು ಲವ್ ಮಾಡೋಕೆ ಇಲ್ಲಿಗೆ ಬಂದಿಲ್ಲ ಎಂದು ಹೇಳಿದ್ದರು. ಈಗ ಈಶಾನಿ ಅವರು ಮೈಕಲ್ ಜೊತೆ ಲವ್ ಮಾಡಬಹುದಾ ಅಂತ ಯೋಚನೆ ಮಾಡುತ್ತಿದ್ದಾರೆ. ನಾನು ಎರಡು ರಿಲೇಶನ್‌ಶಿಪ್‌ನಲ್ಲಿದ್ದೆ. ಒಂದು ದುಬೈನಲ್ಲಿ, ಇನ್ನೊಂದು ಅಮೆರಿಕದಲ್ಲಿ. ಈಗ ಬಿಗ್ ಬಾಸ್ ಮನೆಯಲ್ಲಿ ಮೈಕಲ್ ಜೊತೆ ಕನೆಕ್ಟ್ ಆದ್ರೂ ಆಗಬಹುದು ಎಂಬ ಲೆಕ್ಕಾಚಾರದಲ್ಲಿ ಇದ್ದಾನೆ ಈಶಾನಿ. ಆದರೆ ಉದ್ದೇಶಪೂರ್ವಕವಾಗಿ ಅವರನ್ನು ಲವ್ ಮಾಡಬೇಕು ಅಂತಿಲ್ಲ.. ನ್ಯಾಚುರಲ್ ಆಗಿ ಆದರೆ ಆಗಬಹುದು.. ಈಶಾನಿ ಹಾಗೂ ಮೈಕಲ್ ಅಜಯ್ ಅವರು ಮಾತನಾಡುತ್ತ ಕುಳಿತಿದ್ದರು. ನಿಮ್ಮ ಆಸಕ್ತಿ ಏನು? ಮೈಂಡ್ಸೆಟ್ ಏನು? ವಿಚಾರಧಾರೆಗಳು ಏನು ಅಂತ ಇವರಿಬ್ಬರು ಪರಸ್ಪರ ಹಂಚಿಕೊಳ್ಳಲು ಆರಂಭಿಸಿದ್ದರು. ಇದನ್ನು ನೋಡಿ ಸ್ನೇಹಿತ್, ನಮ್ರತಾ ಗೌಡ ಅವರು ವಯಲಿನ್ ನುಡಿಸುವ ರೀತಿ ಆಕ್ಟ್ ಮಾಡಿದ್ದಾರೆ. ಪ್ರೇಮಿಗಳು ಮಾತನಾಡುವಾಗ ವಯಲಿನ್ ನುಡಿಸಬೇಕು ಅಂತ ಇವರಿಬ್ಬರು ತಮಾಷೆಗೆ ಹೀಗೆ ಮಾಡಿದ್ದಾರೆ. ಇನ್ನು ಮೈಕಲ್ ಅಜಯ್ ಅವರ ತಂದೆ ನೈಜೀರಿಯನ್, ತಾಯಿ ಭಾರತೀಯರು. ಅಂದಹಾಗೆ ಈಶಾನಿ ಅವರು ದುಬೈನಲ್ಲಿ ನೆಲೆಸಿದ್ದು, ಅವರಿಗೂ ಅಷ್ಟಾಗಿ ಕನ್ನಡ ಬರಲ್ಲ. ಇವರಿಬ್ಬರು ಪರಸ್ಪರ ಅರ್ಥ ಮಾಡಿಕೊಳ್ಳಲು ಆರಂಭಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಜೋಡಿ ಮಧ್ಯೆ ಏನಾಗಲಿದೆ ಎಂದು ಕಾದು ನೋಡಬೇಕಿದೆ.

ಸಂಗೀತಾ ಹಾಗೂ ಕಾರ್ತಿಕ್ ಮಹೇಶ್ ಅವರು ಲವ್ ವಿಚಾರವಾಗಿ ಮಾತನಾಡಿಕೊಂಡಿದ್ದು, ನಾವಿಬ್ಬರೂ ಫ್ರೆಂಡ್ಸ್ ಆಗಿರೋಣ ಅಂತ ಹೇಳಿಕೊಂಡಿದ್ದಾರೆ. ಆದರೆ ಸಂಗೀತಾ ಮೇಲೆ ಕಾರ್ತಿಕ್ ಅವರಿಗೆ ಪೊಸೆಸಿವ್ನೆಸ್ ಇದೆ.

Sulekha