ಬೆಥೆಲ್ ಬೇಡ.. ವೆಂಕಿ ಓಪನರ್? – MI ಬೇಟೆಗೆ ಕಾಕ್ಸ್ ವಿಕೆಟ್ ಕೀಪರ್?
RCB ಪ್ಲೇಯಿಂಗ್ 11 ಹೇಗಿರಬೇಕು?

ಲಕ್ನೋ ಸೂಪರ್ ಜೇಂಟ್ಸ್ ವಿರುದ್ಧ ಸೋತಿರುವಂಥ ಆರ್ಸಿಬಿಗೆ ಮುಂದಿನ ಪಂದ್ಯ ಮುಂಬೈ ಇಂಡಿಯನ್ಸ್ ವಿರುದ್ಧ. ಅದೂ ಕೂಡ ಸಂಡೇನೇ. ಮಿಡ್ಲಲ್ಲಿ 2 ದಿನ ಬ್ರೇಕ್ ಅಷ್ಟೇ ಇದೆ. & ಎಂಐ ವಿರುದ್ಧದ ಮ್ಯಾಚ್ ಮಸ್ಟ್ ವಿನ್ ಮ್ಯಾಚ್. ಯಾಕಂದ್ರೆ ಆಲ್ರೆಡಿ ಗುಜರಾತ್ ಮತ್ತು ಲಕ್ನೋ ವಿರುದ್ಧ ಬ್ಯಾಕ್ ಟು ಬ್ಯಾಕ್ ಸೋತಿರೋದ್ರಿಂದ ಹ್ಯಾಟ್ರಿಕ್ ಸೋಲಿನ ಆಘಾತ ತಪ್ಪಿಸಿಕೊಳ್ಬೇಕು. ಪ್ಲೇಆಫ್ ರೇಸ್ನಲ್ಲಿ ಸೇಫ್ ಝೋನ್ನಲ್ಲಿರ್ಬೇಕು ಅಂದ್ರೆ ಇಲ್ಲಿ ಗೆಲ್ಲಲೇಬೇಕು.
ಇದನ್ನೂ ಓದಿ : ಮಳೆ ಜೊತೆ ಮುಳುವಾದ ಮಾರ್ಷ್ – ಕೈಯಲ್ಲಿದ್ದ ಮ್ಯಾಚ್ ಬಿಟ್ಟ RCB
ಬೆಂಗಳೂರು ಮತ್ತು ಮುಂಬೈ ನಡುವಿನ ಪಂದ್ಯದ ಸ್ಪೆಷಾಲಿಟಿ ಏನಂದ್ರೆ ಇಬ್ರೂ ಕೂಡ ಲಕ್ನೋ ವಿರುದ್ಧವೇ ಆಡಿ ಬರ್ತಾ ಇರುವಂಥದ್ದು. ಟ್ವಿಸ್ಟ್ ಅಂದ್ರೆ ಮುಂಬೈ ಇಂಡಿಯನ್ಸ್ 228 ರನ್ಗಳನ್ನ ಈಸಿಯಾಗಿ ಚೇಸ್ ಮಾಡಿ ಗೆದ್ದು ಗೆಲುವಿನ ಟ್ರ್ಯಾಕ್ನಲ್ಲಿದ್ದಾರೆ. ಆದ್ರೆ ಬೆಂಗಳೂರು ಟೀಂ 213 ರನ್ಗಳ ಚೇಸ್ನಲ್ಲಿ 9 ರನ್ಗಳಿಂದ ಸೋತಿದ್ದಾರೆ. ಹೀಗಾಗಿ ಎಂಐ ಪಡೆಯನ್ನ ಕಟ್ಟಿಹಾಕೋದು ಬೆಂಗಳೂರಿಗೆ ಅಷ್ಟು ಸುಲಭನೂ ಇಲ್ಲ. ಬಟ್ ಗೆಲ್ಲಲೇಬೇಕಾದ ಪ್ರೆಶರ್ ಇರೋದ್ರಿಂದ ಪ್ಲೇಯಿಂಗ್ 11 ತುಂಬಾನೇ ಮುಖ್ಯವಾಗುತ್ತೆ. ಌಂಡ್ 2 ಬದಲಾವಣೆಗಳನ್ನ ಮಾಡ್ಬೇಕು ಅಂತಾ ಕೆಲ ಕ್ರಿಕೆಟ್ ಎಕ್ಸ್ಪರ್ಟ್ಸ್ ಸಜೇಷನ್ ಕೊಟ್ಟಿದ್ದಾರೆ.
ಆರ್ ಸಿಬಿ ಬ್ಯಾಟಿಂಗ್ ಚಿಂತೆ ಹೆಚ್ಚಿಸಿದ ಮೂವರು!
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಆರ್ಸಿಬಿ ಕ್ಯಾಂಪ್ನಲ್ಲಿ ಕಾಡ್ತಿರೋ ಪ್ರಶ್ನೆ ಬ್ಯಾಟಿಂಗ್ ಲೈನಪ್. ಫಿಲ್ ಸಾಲ್ಟ್ ಅವ್ರ ಆಬ್ಸೆನ್ಸ್.. ಫಿಲ್ ಸಾಲ್ಟ್ ಇಂಜುರಿ ಬಳಿಕ ಓಪನರ್ ಆಗಿ ಕಣಕ್ಕಿಳಿಯುತ್ತಿರೋ ಜೇಕಬ್ ಬೆಥೆಲ್ ಕಳೆದ ನಾಲ್ಕು ಪಂದ್ಯಗಳಲ್ಲೂ ಫ್ಲ್ಯಾಪ್ ಆಗಿದ್ದಾರೆ. ಪವರ್ ಪ್ಲೇನಲ್ಲಿ ಫೈಯರ್ ಆಗ್ತಾರೆ ಅನ್ಕೊಂಡ್ರೆ ತಾವು ಫೇಲ್ಯೂರ್ ಆಗೋದೂ ಅಲ್ದೇ ಇಡೀ ತಂಡವನ್ನ ಪ್ರೆಶರ್ನಲ್ಲಿ ಇರೋ ಥರ ಮಾಡ್ತಿದ್ದಾರೆ. ಅಟ್ಲೀಸ್ಟ್ ಒಂದೆರಡು ಮ್ಯಾಚಲ್ಲಿ ಬಿಗ್ ಇನ್ನಿಂಗ್ಸ್ ಬಂದಿದ್ರೂ ಇವ್ರ ಮೇಲೆ ಹೋಪ್ಸ್ ಮಾಡ್ಬೋದಿತ್ತು. ಬಟ್ ಬಂದಿಲ್ಲ. ಕಳೆದ ನಾಲ್ಕು ಪಂದ್ಯಗಳಲ್ಲಿ 43 ರನ್ ಗಳಿಸಿದ್ದಾರೆ. ಅತ್ತ ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾರದ್ದೂ ಇದೇ ಕಥೆ. 8 ಇನ್ನಿಂಗ್ಸ್ಗಳಲ್ಲಿ 64 ರನ್ಸ್.. ಇನ್ನು ರೊಮ್ಯಾರಿಯೋ ಶೆಫರ್ಡ್ 8 ಪಂದ್ಯಗಳಲ್ಲಿ 79 ರನ್ಸ್.. ಈ ಮೂವರ ಫಾರ್ಮೇ ಅತೀಹೆಚ್ಚು ಕಾಡ್ತಿದೆ. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ಇವ್ರನ್ನ ಡ್ರಾಪ್ ಮಾಡಿ ಅನ್ನೋ ಕೂಗು ಎದ್ದಿದೆ. ಹಾಗೇ ಆ ಇಬ್ಬರು ಪ್ಲೇಯರ್ಗಳಿಗೆ ಚಾನ್ಸ್ ಕೊಡಿ ಅಂತಿದ್ದಾರೆ.
ಕೊಹ್ಲಿ ಜೊತೆ ವೆಂಕಿ ಓಪನರ್.. ಕಾಕ್ಸ್ ವಿಕೆಟ್ ಕೀಪರ್?
ಯೆಸ್.. ಕಳೆದ 4 ಮ್ಯಾಚಲ್ಲಿ ಜೇಕಬ್ ಬೆಥೆಲ್ ಪವರ್ ಪ್ಲೇ ಒಳಗೇ ಔಟ್ ಆಗಿದ್ದಾರೆ. ಬೆಥೆಲ್ ಬೇಗ ಔಟ್ ಆಗ್ತಿರೋದು ವಿರಾಟ್ ಕೊಹ್ಲಿಗೂ ಎಫೆಕ್ಟ್ ಆಗ್ತಿದೆ. ತಂಡಕ್ಕೂ ಹೊಡೆತ ಬೀಳ್ತಿದೆ. ಸಾಲ್ಟ್ ಕಡೆಯಿಂದ ಸಿಗ್ತಿದ್ದ ಸಪೋರ್ಟ್ ಸಿಗ್ತಿಲ್ಲ. ಹೀಗಾಗಿ ಮುಂಬೈ ವಿರುದ್ಧದ ಮ್ಯಾಚಲ್ಲಿ ವೆಂಕಟೇಶ್ ಅಯ್ಯರ್ರನ್ನ ಕೊಹ್ಲಿ ಜೊತೆ ಇನ್ನಿಂಗ್ಸ್ ಓಪನ್ ಮಾಡಿಸುವಂತೆ ಒತ್ತಾಯ ಇದೆ. ಹಾಗೇ ಜಿತೇಶ್ ಶರ್ಮಾ ಕೂಡ ರನ್ಸ್ ಬರ್ತಿತ್ತು. ಹೀಗಾಗಿ ಜೋರ್ಡಾನ್ ಕಾಕ್ಸ್ಗೆ ಚಾನ್ಸ್ ಕೊಟ್ರೆ ಅವ್ರು ವಿಕೆಟ್ ಕೀಪಿಂಗ್ ಕೂಡ ಮಾಡ್ತಾರೆ. ಅಲ್ದೇ ಟಿ-20 ಫಾರ್ಮೆಟ್ನಲ್ಲಿ ಸ್ಫೋಟಕ ಬ್ಯಾಟರ್ ಆಗಿರೋದ್ರಿಂದ ಹೆಲ್ಪ್ ಆಗ್ಬೋದು ಅನ್ನೋದು ಕ್ರಿಕೆಟ್ ಪಂಡಿತರ ಅಭಿಪ್ರಾಯ. ಇನ್ನು ರೊಮ್ಯಾರಿಯೋ ಶೆಫರ್ಡ್ನೂ ಒಂದೆರಡು ಮ್ಯಾಚ್ ಕೂರಿಸಿ ಎಂದಿದ್ದಾರೆ. ಅಂದ್ರೆ ಇಲ್ಲಿ ಹೊರಗಿಡೋರ ಪಟ್ಟಿಯಲ್ಲಿ ಮೂವರ ಹೆಸರಿಗೆ ಒಳಗೆ ಬರೋರ ಹೆಸರಲ್ಲಿ ಇಬ್ಬರಿದ್ದಾರೆ. ಮೂವರನ್ನ ಡ್ರಾಪ್ ಮಾಡೋಕೆ ಆಗಿಲ್ಲ ಅಂದ್ರೂ ಇಬ್ಬರನ್ನ ಡ್ರಾಪ್ ಮಾಡಿ ಎಂದಿದ್ದಾರೆ.
ಮುಂಬೈ ಬೇಟೆಗೆ ಪ್ಲೇಯಿಂಗ್ 11
ವೆಂಕಟೇಶ್ ಅಯ್ಯರ್
ವಿರಾಟ್ ಕೊಹ್ಲಿ
ದೇವದತ್ ಪಡಿಕ್ಕಲ್
ರಜತ್ ಪಾಟಿದಾರ್
ಜೋರ್ಡಾನ್ ಕಾಕ್ಸ್
ಟಿಮ್ ಡೇವಿಡ್
ಕೃನಾಲ್ ಪಾಂಡ್ಯ
ರೊಮಾರಿಯೋ ಶೆಫರ್ಡ್
ಸುಯಾಶ್ ಶರ್ಮಾ
ಜೋಶ್ ಹೇಜಲ್ ವುಡ್
ಭುವನೇಶ್ವರ್ ಕುಮಾರ್
ರಸಿಕ್ ಸಲಾಂ ದಾರ್
ಇಲ್ಲಿ ವೆಂಕಟೇಶ್ ಅಯ್ಯರ್ ಮತ್ತು ಜೋರ್ಡಾನ್ ಕಾಕ್ಸ್ ಬಂದ್ರೆ ಆರ್ಸಿಬಿಗೆ ಪ್ಲಸ್ ಆಗುತ್ತೆ ಅನ್ನೋದು ಕೆಲವರ ವಾದ. ಬಟ್ ಅವ್ರು ಪ್ಲೇಯಿಂಗ್ 11ಗೆ ಬಂದ್ರೆ ಹೇಗೆ ಪರ್ಫಾಮ್ ಮಾಡ್ತಾರೋ ಗೊತ್ತಿಲ್ಲ. ಯಾಕಂದ್ರೆ ಜೇಕಬ್ ಬೆಥೆಲ್ ವಿಚಾರದಲ್ಲೂ ಹೀಗೇ ಆಗಿತ್ತು. ಚಾನ್ಸ್ ಕೊಡಿ ಚಾನ್ಸ್ ಕೊಡಿ ಅಂತಾ. ಬಟ್ ಕೊಟ್ರೂ ಆಡ್ತಿಲ್ಲ. ಹೀಗಾಗಿ ಫ್ರಾಂಚೈಸಿ ಎಲ್ಲಾ ಌಂಗಲ್ ನಲ್ಲೂ ಗ್ರೌಂಡ್ ವರ್ಕ್ ಮಾಡಿಯೇ ಫೈನಲ್ ಟೀಂ ಸೆಟ್ ಮಾಡ್ತಾರೆ.

ನೋಡಿರಿ

