ಪಂಜಾಬ್‌ ವಿರುದ್ಧ ಗೆದ್ದು ಬೀಗಿದ ಮುಂಬೈ ಇಂಡಿಯನ್ಸ್‌ – ಪಂಜಾಬ್​ಗೆ ವೀರೋಚಿತ ಸೋಲು

ಪಂಜಾಬ್‌ ವಿರುದ್ಧ ಗೆದ್ದು ಬೀಗಿದ ಮುಂಬೈ ಇಂಡಿಯನ್ಸ್‌ – ಪಂಜಾಬ್​ಗೆ ವೀರೋಚಿತ ಸೋಲು

ಪಂಜಾಬ್​​​ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ನಡೆದ ಹೈವೋಲ್ಟೇಜ್‌ ಪಂದ್ಯದಲ್ಲಿ ಮುಂಬೈ ಭರ್ಜರಿ ಜಯಗಳಿಸಿದೆ.  ಮುಂಬೈ 9 ರನ್‌ಗಳ ಅಂತರದಲ್ಲಿ ಗೆದ್ದು ಬೀಗಿದೆ ಮುಂಬೈ.

ಚಂಡೀಗಡ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹೈವೋಲ್ಟೇಜ್​ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್ ಬೀಸಿದ ಮುಂಬೈ ಇಂಡಿಯನ್ಸ್‌‌ ನಿಗದಿತ ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 192 ರನ್‌ ಕಲೆಹಾಕಿ, ಎದುರಾಳಿ ತಂಡಕ್ಕೆ 193 ರನ್‌ಗಳ ಗುರಿ ನೀಡಿತು. ಗುರಿಯನ್ನು ಬೆನ್ನಟ್ಟಿದ ಪಂಜಾಬ್‌ ಕಿಂಗ್ಸ್‌ 19.1 ಓವರ್‌ಗಳಲ್ಲಿ 183 ರನ್‌ಗಳನ್ನು ಕಲೆ ಹಾಕಿ ಆಲೌಟ್‌ ಆಯಿತು.

ಇದನ್ನೂ ಓದಿ: ಕಾಂಗ್ರೆಸ್ ಪರ ದಚ್ಚು ಪ್ರಚಾರ ಮಾಡಿದ್ದು ಯಾಕೆ? – ದರ್ಶನ್ ನಡೆ ಹಿಂದೆ ಸುಮಲತಾ ಗೇಮ್ ಪ್ಲ್ಯಾನ್?

ಮುಂಬೈ ಇಂಡಿಯನ್ಸ್​ ಪರ ಸೂರ್ಯಕುಮಾರ್​ ಯಾದವ್​ ಭರ್ಜರಿ ಬ್ಯಾಟಿಂಗ್​ ಮಾಡಿದ್ರು. ತಾನು ಆಡಿದ 53 ಬಾಲ್​ನಲ್ಲಿ 3 ಸಿಕ್ಸರ್​​, 7 ಫೋರ್​ ಸಮೇತ 78 ರನ್​ ಚಚ್ಚಿದ್ರು. ಇವರಿಗೆ ಸಾಥ್​ ನೀಡಿದ ಮಾಜಿ ಕ್ಯಾಪ್ಟನ್​ ರೋಹಿತ್​ ಶರ್ಮಾ 36, ತಿಲಕ್​ ವರ್ಮಾ 34, ಹಾರ್ದಿಕ್​ ಪಾಂಡ್ಯ 10, ಟೀಮ್​ ಡೇವಿಡ್​ 14 ರನ್​ ಗಳಿಸಿದ್ರು. ಇವರ ಸಹಾಯದಿಂದ ಮುಂಬೈ ಇಂಡಿಯನ್ಸ್​​ 192 ರನ್​​ ಗಳಿಸಿ ಬಿಗ್​ ಟಾರ್ಗೆಟ್​ ನೀಡಿತ್ತು.

ಮುಂಬೈ ಇಂಡಿಯನ್ಸ್​ ನೀಡಿದ ಬಿಗ್​ ಟಾರ್ಗೆಟ್​ ಬೆನ್ನತ್ತಿದ ಪಂಜಾಬ್​ ಕಿಂಗ್ಸ್​ ಮೊದಲ 4 ಓವರ್​ಗಳಲ್ಲೇ 4 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ನಂತರ ಕ್ರೀಸ್​ಗೆ ಬಂದ ಶಂಶಾಕ್​ ಸಿಂಗ್​​ ​​ಕೇವಲ 25 ಬಾಲ್​​ನಲ್ಲಿ 41 ರನ್​​ ಸಿಡಿಸಿದ್ರು. ಇವರಿಗೆ ಸಾಥ್​ ನೀಡಿದ ಆಶುತೋಷ್​​ ​ಶರ್ಮಾ ಕೇವಲ 28 ಬಾಲ್​ನಲ್ಲಿ 7 ಸಿಕ್ಸರ್​​, 2 ಫೋರ್​ ಸಮೇತ 61 ರನ್​ ಚಚ್ಚಿದ. ಹರ್​ಪ್ರೀತ್​ 17 ರನ್​ ಗಳಿಸಿದ್ರೂ 9 ರನ್​ನಿಂದ ಸೋತರು.

Shwetha M