ಮುಂಬೈ ವಿರುದ್ಧ ಲಕ್ನೋಗೆ ಗೆಲುವು – ಕೊನೆ ಪಂದ್ಯ ಗೆದ್ದರೂ ಎಲ್‌ಎಸ್‌ಜಿಗಿಲ್ಲ ಪ್ಲೇಆಫ್ ಅವಕಾಶ

ಮುಂಬೈ ಇಂಡಿಯನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ನಡುವೆ ನಡೆದ ಪಂದ್ಯದಲ್ಲಿ ಲಕ್ನೋ ಜಯ ಸಾಧಿಸಿದೆ. ಲಕ್ನೋ ಸೂಪರ್ ಜೈಂಟ್ಸ್ 18 ರನ್‌ಗಳ ಜಯ ಸಾಧಿಸಿದೆ. ಈ ಪಂದ್ಯವನ್ನು ಗೆದ್ದರೂ ನೆಟ್ ರನ್ ರೆಟ್ ಕಡಿಮೆ ಇರುವ ಕಾರಣ ಲಕ್ನೋಗೆ ಪ್ಲೇಆಫ್ ಪ್ರವೇಶಿಸುವ ಅವಕಾಶ ತಪ್ಪಿದೆ.
ಇದನ್ನೂ ಓದಿ: RCB ಸೇಡಿಗೆ ಸೋಲುತ್ತಾ CSK? – ಮಳೆ ಬಂದ್ರೂ ನಿಲ್ಲಲ್ಲ ಮ್ಯಾಚ್
ವಾಂಖೇಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ 6 ವಿಕೆಟ್ ನಷ್ಟಕ್ಕೆ 214 ರನ್ ಗಳಿಸಿತು. ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಮುಂಬೈ 6 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಮುಂಬೈ ಪರ ರೋಹಿತ್ ಶರ್ಮಾ 68 ರನ್ (38 ಎಸೆತ, 10 ಬೌಂಡರಿ, 3 ಸಿಕ್ಸರ್) ಕೊನೆಯಲ್ಲಿ ನಮನ್ ಧಿರ್ ಔಟಾಗದೇ 62 ರನ್(28 ಎಸೆತ, 4 ಬೌಂಡರಿ, 5 ಸಿಕ್ಸರ್) ಹೊಡೆದರು.
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ 6 ವಿಕೆಟ್ ನಷ್ಟಕ್ಕೆ 214 ರನ್ ಗಳಿಸಿತ್ತು. ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಗಿದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ನಿಕೋಲಸ್ ಪೂರನ್ ಹಾಗೂ ಕೆ.ಎಲ್ ರಾಹುಲ್ ಬ್ಯಾಟಿಂಗ್ ಬಲ ತುಂಬಿದರು. ನಿಕೋಲಸ್ ಪೂರನ್ ಕೇವಲ 29 ಎಸೆತಗಳಲ್ಲಿ 75 ರನ್ (8 ಸಿಕ್ಸರ್, 5 ಬೌಂಡರಿ) ಚಚ್ಚಿದರು. ಇದರೊಂದಿಗೆ ಸುಧಾರಿತ ಬ್ಯಾಟಿಂಗ್ ಪ್ರದರ್ಶನ ನೀಡಿದ ಕೆ.ಎಲ್ ರಾಹುಲ್ 41 ಎಸೆತಗಳಲ್ಲಿ 55 ರನ್ (3 ಸಿಕ್ಸರ್, 3 ಬೌಂಡರಿ) ಬಾರಿಸಿದರು. 4ನೇ ವಿಕೆಟ್‌ಗೆ ಸ್ಫೋಟಕ ಪ್ರದರ್ಶನ ನೀಡಿದ ಈ ಜೋಡಿ 44 ಎಸೆತಗಳಲ್ಲಿ ಬರೋಬ್ಬರಿ 109 ರನ್‌ಗಳ ಜೊತೆಯಾಟ ನೀಡಿತ್ತು.
ಇದರೊಂದಿಗೆ ಮಾರ್ಕಸ್ ಸ್ಟೋಯ್ನಿಸ್ 28 ರನ್, ದೀಪಕ್ ಹೂಡ 11 ರನ್, ಆಯುಷ್ ಬದೋನಿ 22 ರನ್ ಹಾಗೂ ಕೃನಾಲ್ ಪಾಂಡ್ಯ 12 ರನ್‌ಗಳ ಕೊಡುಗೆ ನೀಡಿದ ಪರಿಣಾಮ ಲಕ್ನೋ ತಂಡ 200 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು.
ಲಕ್ನೀ ಸೂಪರ್ ಜೈಂಟ್ಸ್ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ನುವಾನ್ ತುಷಾರ ಹಾಗೂ ಪಿಯೂಷ್ ಚಾವ್ಲಾ ತಲಾ 3 ವಿಕೆಟ್ ಕಿತ್ತರು. ಚೆನ್ನೈ ತಂಡ 14 ಅಂಕ ಗಳಿಸಿದ್ದರೆ ಆರ್‌ಸಿಬಿ 12 ಅಂಕ ಗಳಿಸಿದೆ. ಹೀಗಿದ್ದರೂ ಈ ಎರಡು ತಂಡಗಳ ರನ್ ರೇಟ್ ಲಕ್ನೋ ಮತ್ತು ಡೆಲ್ಲಿ ತಂಡಕ್ಕಿಂತ ಉತ್ತಮವಾಗಿದೆ.