RCBಗೆ ಯಾರು ಫೈನಲ್ ವಿಲನ್? -PBKSಗಿಂತ MI ಬಂದ್ರೆ ಡೇಂಜರ್?

RCBಗೆ ಯಾರು ಫೈನಲ್ ವಿಲನ್? -PBKSಗಿಂತ MI ಬಂದ್ರೆ ಡೇಂಜರ್?

18ನೇ ಸೀಸನ್ ಐಪಿಎಲ್‌ ನ ಅಸಲಿ ಆಟ ಈಗ ಶುರುವಾಗ್ತಿದೆ. ಟೈಟಲ್ ಎತ್ತಿ ಹಿಡಿಯೋಕೆ ಈಗ ಮೂರು ಟೀಮ್ಸ್ ರೇಸ್ನಲ್ಲಿವೆ. ಆಲ್ರೆಡಿ ಫೈನಲಿಸ್ಟ್ ಆಗಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರರು ಭರ್ಜರಿ ಪ್ರಾಕ್ಟೀಸ್ನಲ್ಲಿದ್ರೆ ಇತ್ತ ಇನ್ನೊಂದು ಫೈನಲ್ ಟಿಕೆಟ್ಗಾಗಿ ಪಂಜಾಬ್ ಮತ್ತು ಮುಂಬೈ ತಂಡಗಳ ನಡುವೆ ಮತ್ತೊಂದು ಹೈವೋಲ್ಟೇಜ್ ಫೈಟ್ ನಡೆಯಲಿದೆ. ಹಾಗಾದ್ರೆ ಆರ್ಸಿಬಿಗೆ ಈ ಎರಡು ಟೀಮ್ಗಳಲ್ಲಿ ಯಾವ ಟೀಂ ಫೈನಲಿಸ್ಟ್ ಆಗಬಹುದು? ಫೈಟ್ ಹೇಗಿರುತ್ತೆ? ರೆಕಾರ್ಡ್ಸ್ ಏನ್ ಹೇಳುತ್ತೆ? ಈ ಬಗೆಗಿನ ರೋಚಕ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಕೊರೊನಾ ಕರಿನೆರಳು – ಶಾಲೆಗಳಿಗೆ ಹೊಸ ಮಾರ್ಗಸೂಚಿ ಪ್ರಕಟಿಸಿದ ಆರೋಗ್ಯ ಇಲಾಖೆ

ಜಗತ್ತಿನ ಶ್ರೀಮಂತ ಲೀಗ್ ಅಂತಾನೇ ಕರೆಸಿಕೊಳ್ಳೋ ಐಪಿಎಲ್ನ 2025ರ ಸೀಸನ್ನಲ್ಲಿ ಈಗ ಕ್ಲೈಮ್ಯಾಕ್ಸ್ನಲ್ಲಿದ್ದೇವೆ. ಎರಡೇ ಎರಡು ಮ್ಯಾಚ್ಗಳು ಬಾಕಿ ಇದ್ದು ಮೂರು ದಿನದಲ್ಲೇ ಚಾಂಪಿಯನ್ ಯಾರು ಅನ್ನೋದು ಜಗಜ್ಜಾಹೀರಾಗಲಿದೆ. ಆಲ್ರೆಡಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಂ ಫೈನಲ್ ಫೈಟ್ ಆಡೋಕೆ ರೆಡಿಯಾಗಿದ್ದಾರೆ. ಮತ್ತೊಂದೆಡೆ ಮುಂಬೈ ಮತ್ತು ಪಂಜಾಬ್ ತಂಡಗಳು ಫೈನಲ್ ಟಿಕೆಟ್ಗಾಗಿ ಪೈಪೋಟಿ ನಡೆಸಲಿವೆ. ಸದ್ಯ ಈಗಿರೋ ಪ್ರಶ್ನೆ ಅಂದ್ರೆ ಬೆಂಗಳೂರು ತಂಡಕ್ಕೆ ಯಾರು ಎದುರಾಳಿ ಆಗಬಹುದು ಅನ್ನೋದು. ಹಾಗೇ ಅಭಿಮಾನಿಗಳ ಪ್ರಕಾರ ಪಂಜಾಬ್ ಮತ್ತು ಮುಂಬೈ ನಡುವೆ ಯಾರ ಮೇಲೆ ಕಾಂಪಿಟೇಷನ್ ನಡೆದ್ರೆ ಅಡ್ವಾಂಟೇಜಸ್ ಸಿಗುತ್ತೆ ಅನ್ನೋ ಲೆಕ್ಕಾಚಾರವೂ ನಡೀತಿದೆ.

ಪಂಜಾಬ್ ಗೆ ಕ್ವಾಲಿಫೈಯರ್ 1ನಲ್ಲಿನ ಸೋಲು ಪ್ಲಸ್ & ಮೈನಸ್!

ಈ ಸೀಸನ್ನಲ್ಲಿ ಪಂಜಾಬ್ ಕಿಂಗ್ಸ್ ತಂಡ ಅಲ್ಟಿಮೇಟ್ ಪ್ರದರ್ಶನಗಳನ್ನ ನೀಡಿದೆ. ಶ್ರೇಯಸ್ ಅಯ್ಯರ್ ಕ್ಯಾಪ್ಟನ್ಸಿ ಅಡಿಯಲ್ಲಿ ಬರೋಬ್ಬರಿ 14 ವರ್ಷಗಳ ಬಳಿಕ ಪ್ಲೇಆಫ್ಸ್ ತಲುಪಿದ್ದೂ ಅಲ್ದೇ ಟೇಬಲ್ ಟಾಪರ್ ಆಗಿ ಲೀಗ್ ಹಂತದ ಮ್ಯಾಚಸ್ ಮುಗ್ಸಿದ್ರು. ಆರ್ಸಿಬಿ ಜೊತೆ ಕ್ವಾಲಿಫೈಯರ್ 1ಗೆ ಸೆಲೆಕ್ಟ್ ಆಗಿದ್ದ ಪಂಜಾಬ್ನಿಂದ ನಿರೀಕ್ಷಿತ ಪ್ರದರ್ಶನ ಬಂದಿರಲಿಲ್ಲ. ಜಸ್ಟ್ 101 ರನ್ಗಳಿಗೆ ಆಲೌಟ್ ಆಗಿದ್ರು. ಬ್ಯಾಟಿಂಗ್ & ಬೌಲಿಂಗ್ ಎರಡೂ ಕಂಪ್ಲೀಟ್ ಫ್ಲ್ಯಾಪ್ ಆಗಿತ್ತು. ಸೋ ಆರ್ಸಿಬಿ ವಿರುದ್ಧ ಸೋತು ಈಗ ಮುಂಬೈ ವಿರುದ್ಧ ಕ್ವಾಲಿಫೈಯರ್ 2ನಲ್ಲಿ ಭಾನುವಾರ ಕಣಕ್ಕಿಳಿಯಲಿದೆ. ಈ ಮ್ಯಾಚಲ್ಲಿ ಗೆದ್ರೆ ಮತ್ತೆ ಫೈನಲ್ಗೆ ಬರುತ್ತೆ. ಹಾಗೇನಾದ್ರೂ ಫೈನಲ್ನಲ್ಲಿ ಪಂಜಾಬ್ ಎದುರಾಳಿಯಾದ್ರೆ ಆರ್ಸಿಬಿಗೆ ಪ್ಲಸ್ ಆಗಬಹುದು. ಈಗಾಗಲೇ ಕ್ವಾಲಿಫೈಯರ್ 1 ರಲ್ಲಿ ಆರ್ಸಿಬಿ ವಿರುದ್ಧ ಸೋತಿದೆ. ಒಂದು ತಂಡ ಒಮ್ಮೆ ಸೋತ ಮೇಲೆ, ಅದೇ ತಂಡವನ್ನು ಮತ್ತೆ ಫೈನಲ್ನಲ್ಲಿ ಎದುರಿಸೋದು ಮಾನಸಿಕವಾಗಿ ಸ್ವಲ್ಪ ಕಷ್ಟ. ಪಂಜಾಬ್ನ ಬ್ಯಾಟಿಂಗ್ ಲೈನ್ಅಪ್ ಆರ್ಸಿಬಿಗಿಂತ ಸ್ವಲ್ಪ ಕಳಪೆಯಾಗಿದೆ. ಟಾಪ್-ಆರ್ಡರ್ ಫೇಲ್ ಆದ್ರೆ, ಇಡೀ ತಂಡ ಕುಸಿಯುವ ಸಾಧ್ಯತೆ ಹೆಚ್ಚು. ಹಾಗಾಗಿ, ಪಂಜಾಬ್ ಫೈನಲ್ಗೆ ಬಂದ್ರೆ, ಆರ್ಸಿಬಿಗೆ ಕಪ್ ಗೆಲ್ಲೋದು ಸ್ವಲ್ಪ ಮಟ್ಟಿಗೆ ಸುಲಭ ಆಗಬಹುದು ಅಂತ ಅಂದಾಜಿಸಲಾಗಿದೆ. ಈ ಸೀಸನ್ನಲ್ಲಿ ಒಟ್ಟಾರೆಯಾಗಿ ಆರ್ಸಿಬಿ ಮತ್ತು ಪಂಜಾಬ್ ತಂಡಗಳು ಮೂರು ಸಲ ಮುಖಾಮುಖಿಯಾಗಿವೆ. ಈ ವೇಳೆ ಆರ್ಸಿಬಿ 2 ಸಲ ವಿನ್ ಆಗಿದೆ. ಹೀಗಾಗಿ ಕಾನ್ಫಿಡೆನ್ಸ್ ಕೂಡ ಜಾಸ್ತಿನೇ ಇರುತ್ತೆ. ಹಾಗಂತ ಪಂಜಾಬ್ ಕಂಪ್ಲೀಟ್ ವೀಕ್ ಅಂತಾ ಹೇಳೋಕಾಗಲ್ಲ. ಅವ್ರೂ ಕೂಡ ಚೊಚ್ಚಲ ಟ್ರೋಫಿ ಕನಸಿನಲ್ಲಿದ್ದು ಯಾವಾಗ ಬೇಕಿದ್ರೂ ಸಿಡೀಬಹುದು.

ಮುಂಬೈ ಫೈನಲಿಸ್ಟ್ ಆದ್ರೆ ನೆಕ್ ಟು ನೆಕ್ ಫೈಟ್!

ಇನ್ನು ಮುಂಬೈ ಇಂಡಿಯನ್ಸ್ ಬಗ್ಗೆ ಹೇಳೋದೇ ಬೇಡ. ಸ್ಟಾರ್ ಆಟಗಾರರ ದಂಡೇ ತುಂಬಿರೋ ತಂಡ ಅದು. ಅದೂ ಅಲ್ದೇ ಐದೈದು ಸಲ ಚಾಂಪಿಯನ್ ಪಟ್ಟಕ್ಕೇರಿ ಟ್ರೋಫಿ ಗೆಲುವಿನ ರುಚಿ ಕಂಡವ್ರು. ಬಿಗ್ ಡೇ ಬಿಗ್ ಮ್ಯಾಚಸ್ ಅಂತಾ ಬಂದಾಗ ಅಷ್ಟು ಈಸಿಯಾಗಿ ಬಿಟ್ಟುಕೊಡೋವ್ರೇ ಅಲ್ಲ. ಈ ಸೀಸನ್ನಲ್ಲೇ ನೋಡಿ. ಫಸ್ಟ್ ಆಫ್ನಲ್ಲಿ ಬ್ಯಾಕ್ ಟು ಬ್ಯಾಕ್ 4 ಮ್ಯಾಚಸ್ ಸೋತಿದ್ರು. ಆ ಬಳಿಕ ಫಿನಿಕ್ಸ್ನಂತೆ ಕಮ್ ಬ್ಯಾಕ್ ಮಾಡಿ ಪ್ಲೇಆಫ್ಸ್ ಟಿಕೆಟ್ ಗಿಟ್ಟಿಸಿಕೊಂಡಿದ್ರು. ಇದೀಗ ಎಲಿಮಿನೇಟರ್ ಮ್ಯಾಚಲ್ಲಿ ಗುಜರಾತ್ ಟೀಮ್ ಸೋಲಿಗೆ ಕ್ವಾಲಿಫೈಯರ್ 2ಗೆ ಸೆಲೆಕ್ಟ್ ಆಗಿದ್ದಾರೆ. ಫೈನಲ್ನಂತಹ ಹೈ-ಪ್ರೆಶರ್ ಗೇಮ್ಗಳಲ್ಲಿ ಮುಂಬೈ ತಂಡ ಕಂಪ್ಲೀಟ್ ಫಾರ್ಮ್ನಲ್ಲಿರುತ್ತೆ. ಅವರ ಬೌಲಿಂಗ್ ಕೂಡ ಪ್ಲೇಆಫ್ಗೆ ಬರುವಷ್ಟರಲ್ಲೇ ಬಲಿಷ್ಠವಾಗಿದೆ. ಆರ್ಸಿಬಿಯ ಬ್ಯಾಟಿಂಗ್ ಲೈನ್ಅಪ್ ಎಷ್ಟೇ ಬಲಿಷ್ಠವಾಗಿದ್ದರೂ, ಮುಂಬೈನ ಅನುಭವಿ ಬೌಲರ್ಗಳು ಮತ್ತು ಬ್ಯಾಟ್ಸ್ಮನ್ಗಳು ಯಾವುದೇ ಪರಿಸ್ಥಿತಿಯನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಮುಂಬೈಗೆ ಫೈನಲ್ ಆಡಿದ ಅನುಭವ ಜಾಸ್ತಿ ಇರೋದ್ರಿಂದ, ಆರ್ಸಿಬಿಗೆ ಇದು ದೊಡ್ಡ ಅಗ್ನಿಪರೀಕ್ಷೆಯಾಗಬಹುದು. ಇನ್ನು ಈ ಸೀಸನ್ನಲ್ಲಿ ಆರ್ಸಿಬಿ  ಮತ್ತು ಎಂಐ ತಂಡಗಳು 1 ಮ್ಯಾಚ್ನಲ್ಲಿ ಮುಖಾಮುಖಿಯಾಗಿದ್ದು ಆರ್ಸಿಬಿ ವಿನ್ ಆಗಿತ್ತು. ಌಕ್ಚುಲಿ ಇಲ್ಲಿ ಮುಂಬೈ, ಪಂಜಾಬ್ ಎಷ್ಟೇ ಸ್ಟ್ರಾಂಗ್ ಅನ್ನಿಸಿದ್ರೂ ಅವ್ರಿಗಿಂತ ಬೆಂಗಳೂರು ಟೀಂ ಇನ್ನೂ ಡೇಂಜರಸ್ ಆಗಿದೆ.

ಆರ್ ಸಿಬಿ ಡೇಂಜರಸ್!

ಕಳೆದ 17 ಸೀಸನ್ನಗಳಲ್ಲಿ ಆರ್ಸಿಬಿ ಕಪ್ ಗೆಲ್ಲದೆ ಇರೋದಕ್ಕೆ ಕಾರಣ ಟೀಂ ಬ್ಯಾಲೆನ್ಸ್ ಇಲ್ಲದೇ ಇದ್ದದ್ದು. ಬಟ್  18ನೇ ಸೀಸನ್ನಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗ ಸೂಪರ್ ಸ್ಟ್ರಾಂಗ್ ಆಗಿದೆ. ಕಳೆದ ಪಂದ್ಯಗಳಲ್ಲಿ ಬ್ಯಾಟಿಂಗ್ & ಬೌಲಿಂಗ್ ಸ್ಟ್ರೆಂಥ್ ಪ್ರೂವ್ ಮಾಡಿದ್ದಾರೆ. ಎಷ್ಟೇ ರನ್ ಹೊಡೆದ್ರೂ ಚೇಸಿಂಗ್ ಮಾಡ್ತೇವೆ ಅಂತಾ ಲಕ್ನೋ ವಿರುದ್ಧ ಹಾಗೇ ನಿಮ್ಮನ್ನ ಕಡಿಮೆ ಸ್ಕೋರ್ಗೆ ಕಟ್ಟಿಹಾಕೋ ತಾಕತ್ತೂ ನಮಗಿದೆ ಅಂತಾ ಪಂಜಾಬ್ ವಿರುದ್ಧ ತೋರಿಸಿಕೊಟ್ಟಿದ್ದಾರೆ. ಇನ್ನು ಫಿನಿಶಿಂಗ್ ರೋಲ್ ನಲ್ಲಿ ಪವರ್ ಹಿಟ್ಟಿಂಗ್ ಬ್ಯಾಟಿಂಗ್ ಮಾಡೋ ಆಟಗಾರರೇ ಇದ್ದಾರೆ. ಟಿಮ್ ಡೇವಿಡ್, ರೊಮ್ಯಾರಿಯೋ ಶೆಫರ್ಡ್, ಜಿತೇಶ್, ಮಯಾಂಕ್, ಹೀಗೆ ಆಪ್ಶನ್ಸ್ ಜಾಸ್ತಿ ಇದೆ. ಜೊತೆಗೆ ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್ಸ್ & ಪೇಸರ್ಸ್ ಪವರ್ ಸೂಪರ್ ಆಗಿದೆ. ಅದೆಲ್ಲಕ್ಕಿಂತ ಈ ಸೀಸನ್ನ ಸ್ಪೆಷಾಲಿಟಿ ಅಂದ್ರೆ ಆರ್ಸಿಬಿ ಟೀಂ ಅವೇ ಪಿಚ್ ಅಂದ್ರೆ ಹೊರಗಿನ ಮೈದಾನಗಳಲ್ಲಿ ಸೋತೇ ಇಲ್ಲ. ಲೀಗ್ ಹಂತದ 7ಕ್ಕೆ ಏಳೂ ಪಂದ್ಯಗಳನ್ನೂ ಗೆದ್ದಿದ್ದಾರೆ. ಹೈದ್ರಾಬಾದ್ ವಿರುದ್ಧ ಏಕನಾ ಸ್ಟೇಡಿಯಮ್ನಲ್ಲಿ ಸೋತ್ರೂ ಕೂಡ ಅದು ಅವೇ ಪಿಚ್ಗೆ ಕೌಂಟ್ ಆಗಲ್ಲ. ಯಾಕಂದ್ರೆ ಬೆಂಗಳೂರಿನ ಮ್ಯಾಚ್ನ ಮಳೆ ಕಾರಣಕ್ಕೆ ಅಲ್ಲಿಗೆ ಶಿಫ್ಟ್ ಮಾಡಿದ್ರು ಅಷ್ಟೇ. ಹೀಗೆ ಲೀಗ್ ಹಂತದಲ್ಲಿ ಅಲ್ದೇ ಕ್ವಾಲಿಫೈಯರ್ 1ನಲ್ಲೂ ಗೆದ್ದು ತೋರಿಸಿದ್ದಾರೆ. ಈಗ ಫೈನಲ್ ಪಂದ್ಯ ನಡೆಯುತ್ತಾ ಇರೋದು ಕೂಡ ಅಹಮದಾಬಾದ್ನಲ್ಲಿ. ಸೋ ಚೊಚ್ಚಲ ಟ್ರೋಫಿ ಟಾರ್ಗೆಟ್ ಇಟ್ಟುಕೊಂಡು ಮೊದಲ ಫೈನಲಿಸ್ಟ್ ಆಗಿರೋ ಆರ್ಸಿಬಿ ಚಾಂಪಿಯನ್ ಪಟ್ಟಕ್ಕೇರೋದಷ್ಟೇ ಬಾಕಿ.

ಒಟ್ನಲ್ಲಿ ಯುದ್ಧಕ್ಕೆ ಅಂತಾ ನಿಂತ್ಮೇಲೆ ಸೈನ್ಯ ಲೆಕ್ಕ ಹಾಕಬಾರದು ಅಂತಾ ಬೇಟೆಗಾರರನ್ನೇ ಬೇಟೆಯಾಡಿ ಫಿನಾಲೆಗೆ ಬಂದಿರೋ ಆರ್ಸಿಬಿಗೆ ಯಾರೇ ಎದುರಾಳಿ ಆದ್ರೂ ಡೋಂಟ್ಕೇರ್. ಇದೇ ಮೊಮೆಂಟಮ್ ಕಂಟಿನ್ಯೂ ಆಯ್ತಂದ್ರೆ ಈ ಸಲ ಕಪ್ ನಮ್ದು ಅಂತಾ ಹೇಳೋದನ್ನ ತಪ್ಸೋಕೆ ಯಾರಿಂದಲೂ ಸಾಧ್ಯನೇ ಇಲ್ಲ.

Shwetha M

Leave a Reply

Your email address will not be published. Required fields are marked *