ಭೂಮಿ ಮೇಲೆ ಏಲಿಯನ್‌ಗಳು ಇರೋದು ಸುಳ್ಳಲ್ಲ! – ಸಂಸತ್‌ನಲ್ಲಿಯೇ ಅನ್ಯಗ್ರಹ ಜೀವಿಯ ಶವ ಪ್ರದರ್ಶನ!

ಭೂಮಿ ಮೇಲೆ ಏಲಿಯನ್‌ಗಳು ಇರೋದು ಸುಳ್ಳಲ್ಲ! – ಸಂಸತ್‌ನಲ್ಲಿಯೇ ಅನ್ಯಗ್ರಹ ಜೀವಿಯ ಶವ ಪ್ರದರ್ಶನ!

ಏಲಿಯನ್ಸ್‌ಗಳು ಭೂಮಿಗೆ ಆಗಾಗ ಬಂದು ಹೋಗುತ್ತಿವೆ.. ನಾವು ಏಲಿಯನ್ಸ್‌ಗಳನ್ನು ನೋಡಿದ್ದೇವೆ ಅಂತಾ ಕೆಲ ವಿಜ್ಞಾನಿಗಳು ಹಿಂದಿನಿಂದಲೂ ಪ್ರತಿಪಾದಿಸುತ್ತಾ ಬಂದಿದ್ದಾರೆ. ಆದರೆ ಈವರೆಗೂ ಇವೆ.. ಏಲಿಯನ್ಸ್‌ಗಳು ಭೂಮಿಗೆ ಬಂದಿವೆ ಎಂಬುವುದಕ್ಕೆ ಸಾಕ್ಷಿ ಸಿಕ್ಕಿರಲಿಲ್ಲ. ಆದರೆ ಇದೀಗ ಮೆಕ್ಸಿಕೋದಲ್ಲಿ ವಿಚಿತ್ರ ಬೆಳವಣಿಗೆಯೊಂದು ನಡೆದಿದೆ. ದೇಶದ ಸಂಸತ್‌ನಲ್ಲಿಯೇ ಎರಡು “ಏಲಿಯನ್‌ಗಳ ಶವಗಳನ್ನು” ಪ್ರದರ್ಶಿಸಲಾಗಿದೆ. ಇದು ಜಗತ್ತಿನಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬೇಸರದ ಸುದ್ದಿ! – ಬೈಯಪ್ಪನಹಳ್ಳಿ-ಕೆಆರ್ ಪುರ ಮಾರ್ಗದ ಸುರಕ್ಷತಾ ಪರಿಶೀಲನೆ ಮುಂದೂಡಿಕೆ

ಮೆಕ್ಸಿಕೋದ ಕಾಂಗ್ರೆಸ್ ಅಧಿಕೃತ ಕಾರ್ಯಕ್ರಮದಲ್ಲಿ ಎರಡು “ಏಲಿಯನ್‌ಗಳ ಶವಗಳನ್ನು” ಅನಾವರಣಗೊಳಿಸಲಾಗಿದೆ. ಯುಫಾಲಜಿಸ್ಟ್ ಜೈಮ್ ಮೌಸ್ಸನ್ ಈ ಏಲಿಯನ್ ಶವಗಳನ್ನು ಅನಾವರಣಗೊಳಿಸಿದ್ದಾರೆ. ಎರಡು ಸಣ್ಣ ಶವಗಳನ್ನು ಕಾರ್ಯಕ್ರಮದಲ್ಲಿ ನೆರೆದಿದ್ದ ವೀಕ್ಷಕರಿಗೆ ಪ್ರದರ್ಶಿಸಲಾಯಿತು. ಸಣ್ಣ ರಕ್ಷಿತ ಮಾದರಿಯು ಸಾವಿರ ವರ್ಷಗಳಷ್ಟು ಹಳೆಯದಾಗಿದೆ ಮತ್ತು ಪೆರುವಿನ ಕುಸ್ಕೋದಿಂದ ಇವುಗಳನ್ನು ಸಂಗ್ರಹಿಸಲಾಗಿದೆ ಎಂದು ಸಂಘಟಕರು ಹೇಳಿದ್ದಾರೆ.

ಆದರೆ ಕೆಲ ತಜ್ಞರು ಈ ವಿಚಾರವನ್ನು ಅಲ್ಲಗೆಳೆದಿದ್ದಾರೆ. ಇದೊಂದು ಕಟ್ಟು ಕಥೆ. ಈ ಶವ ಮಗುವಿನದ್ದು ಆಗಿರಬಹುದು ಅಂತಾ ಪ್ರತಿಪಾದಿಸಿದ್ದಾರೆ. “ಗಯಾ ವೀಡಿಯೋದಲ್ಲಿ ತೋರಿಸಿರುವಂತೆ ಪೆರುವಿನಲ್ಲಿ ಉದ್ದನೆಯ ತಲೆಬುರುಡೆಗಳನ್ನು ಹೊಂದಿರುವ ಮಮ್ಮಿಗಳ ಹಿಂದಿನ ಆವಿಷ್ಕಾರವು ಅನ್ಯಲೋಕದ ಪ್ರಭೇದಗಳ ಬಗ್ಗೆ ಇದೇ ರೀತಿಯ ಊಹಾಪೋಹಗಳನ್ನು ಪ್ರೇರೇಪಿಸಿದೆ. ಆದರೆ ಉದ್ದನೆಯ ತಲೆಬುರುಡೆಗಳು ಕೃತಕ ಕಪಾಲದ ವಿರೂಪತೆಯ ಪುರಾತನ ಅಭ್ಯಾಸದ ಪರಿಣಾಮವಾಗಿದೆ ಎಂದು ಮಾನವಶಾಸ್ತ್ರಜ್ಞರು ವಿವರಿಸಿದ್ದಾರೆ. ಇದರಲ್ಲಿ ಚಿಕ್ಕ ಮಕ್ಕಳು ತಮ್ಮ ತಲೆಗಳನ್ನು ಬಟ್ಟೆ, ಹಗ್ಗ ಅಥವಾ ಮರದ ಹಲಗೆಗಳಲ್ಲಿ ಬಂಧಿಸಿದ್ದರು. ಬಹುಶಃ ಧಾರ್ಮಿಕ ಆಚರಣೆಯ ಭಾಗವಾಗಿದೆ.” ಎಂದು ಸ್ಪಷ್ಟನೆ ನೀಡಲಾಗಿದೆ.

Shwetha M