ಸಿಲಿಕಾನ್‌ ಸಿಟಿ ಮಂದಿಗೆ ಬಿಗ್‌ಶಾಕ್!‌ – ನಮ್ಮ ಮೆಟ್ರೋ ಪಿಂಕ್‌ ಲೈನ್‌ ಸಂಚಾರ ಮತ್ತಷ್ಟು ವಿಳಂಬ!

ಸಿಲಿಕಾನ್‌ ಸಿಟಿ ಮಂದಿಗೆ ಬಿಗ್‌ಶಾಕ್!‌ – ನಮ್ಮ ಮೆಟ್ರೋ ಪಿಂಕ್‌ ಲೈನ್‌ ಸಂಚಾರ ಮತ್ತಷ್ಟು ವಿಳಂಬ!

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ನಿತ್ಯ ಲಕ್ಷಾಂತರ ಮಂದಿ ಪ್ರಯಾಣಿಸುತ್ತಿದ್ದಾರೆ. ಮೆಟ್ರೋ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದ್ದಂತೆ ಬಿಎಂಆರ್‌ಸಿಎಲ್‌ ನಮ್ಮ ಮೆಟ್ರೋ ಮಾರ್ಗವನ್ನು ವಿಸ್ತರಿಸುತ್ತಲೇ ಇದೆ. ಇದೀಗ ಬಹುನೀಕ್ಷಿತ ಪಿಂಕ್‌ ಲೈನ್‌ ಮೆಟ್ರೋ ಆರಂಭವಾಗಲಿದೆ ಎಂದು ಸಂತಸದಿಂದ ಕಾಯ್ತಿದ್ದವರಿಗೆ ಶಾಕಿಂಗ್‌ ಸುದ್ದಿಯಿದೆ. ಪಿಂಕ್‌ ಲೈನ್‌ ಮೆಟ್ರೋ ಸಂಚಾರ ಮತ್ತಷ್ಟು ವಿಳಂಬವಾಗಲಿದೆ.

ಇದನ್ನೂ ಓದಿ: RCBಗೆ ಬಾಸ್ ಬೇಬಿಯೇ ಟಾರ್ಗೆಟ್ – ಪವರ್ ಪ್ಲೇ ವಿಕೆಟ್ ಬಿದ್ರಷ್ಟೇ ಬಚಾವ್

ಬೆಂಗಳೂರಿನ ಕಾಳೇನ ಅಗ್ರಹಾರದಿಂದ ನಾಗವಾರದವರೆಗಿನ ನಮ್ಮ ಮೆಟ್ರೋ ಪಿಂಕ್ ಲೈನ್ ಮೇ ತಿಂಗಳಲ್ಲಿ ಪ್ರಯಾಣಿಕರ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಹೇಳಲಾಗ್ತಿತ್ತು. ಆದ್ರೀಗ ಈ ಮಾರ್ಗದಲ್ಲಿ ಸಂಚಾರಕ್ಕೆ ಪ್ರಯಾಣಿಕರು ಇನ್ನೂ ಎರಡ್ಮೂರು ತಿಂಗಳ ಕಾಲ ಕಾಯುವಂತಹ ಸ್ಥಿತಿ ಬಂದಿದೆ. ಪಿಂಕ್‌ ಲೈಮ್‌ ಮಾರ್ಗ ಉದ್ಘಾಟನೆ ಜೂನ್ ಅಥವಾ ಜುಲೈ ತಿಂಗಳಲ್ಲಿ ಆಗಲಿದೆ ಎಂದು ಹೇಳಲಾಗುತ್ತಿದೆ.

ಕಾಳೇನಅಗ್ರಹಾರದಿಂದ ನಾಗವಾರದವರೆಗಿನ ಈ ರೈಲು ಮಾರ್ಗವು ಮೊದಲ ಹಂತದ 6 ನಿಲ್ದಾಣಗಳನ್ನು ಹೊಂದಿದೆ. ಆದರೆ, ಬಹುಮುಖ್ಯವಾಗಿರುವ ತಾಂತ್ರಿಕ ಪರೀಕ್ಷೆಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಈ ಮಾರ್ಗದ ಉದ್ಘಾಟನೆ ಮುಂದೂಡುವ ಸಾಧ್ಯತೆಗಳಿವೆ. ಇದು ಜೂನ್ ಅಥವಾ ಜುಲೈ ತಿಂಗಳಲ್ಲಿ ಉದ್ಘಾಟನೆಯಾಗುವ ಸಾಧ್ಯಚೆಗಳು ಹೆಚ್ಚಾಗಿವೆ.

ಬೆಂಗಳೂರು ನಗರದಲ್ಲಿ ಇದುವರೆಗೂ ಹೊಸ ಮೆಟ್ರೋ ರೈಲುಗಳ ಕೊರತೆಯಿಂದಾಗಿ ಉದ್ಘಾಟನೆ ಮುಂದೂಡಲಾಗುತ್ತಿತ್ತು. ಇದು ಹಳದಿ ರೈಲು ಮಾರ್ಗದಲ್ಲಿ ಕಂಡುಬಂದಿತ್ತು. ಈಗಲೂ ಸಹ ರೈಲುಗಳ ಕೊರತೆ ಇದೆ. ಆದರೆ, ಪಿಂಕ್ ಲೈನ್ ನಲ್ಲಿ ಈ ಸಮಸ್ಯೆಯಾಗಿಲ್ಲ. ಈಗಾಗಲೇ ಬಿಎಂಆರ್ ಸಿಎಲ್ ಗೆ ಒಟ್ಟು 23 ರೈಲುಗಳಲ್ಲಿ 5 ರೈಲುಗಳು ಬಂದಿದ್ದು, ಇನ್ನುಳಿದ ರೈಲುಗಳನ್ನು ಹಂತಹಂತವಾಗಿ ಪೂರೈಕೆ ಮಾಡಲಿದೆ. ಸುರಕ್ಷತಾ ಪರೀಕ್ಷೆ ಮತ್ತು ಸಿಗ್ನಲಿಂಗ್ ಟೆಸ್ಟಿಂಗ್ ಕೆಲಸಗಳು ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಪ್ರಯಾಣಿಕರು ಮತ್ತಷ್ಟು ದಿನ ಕಾಯುವ ಅನಿವಾರ್ಯತೆ ಬಂದೋದಗಿದೆ.

ಪಿಂಕ್ ಮೆಟ್ರೋ ರೈಲು ಒಟ್ಟು ಉದ್ದ 21.25 ಕಿಲೋ ಮೀಟರ್ ಹೊಂದಿದೆ. ಈ ಮಾರ್ಗದಲ್ಲಿ ಒಟ್ಟು 18 ನಿಲ್ದಾಣಗಳು ಬರಲಿವೆ. 12 ಅಂಡರ್ ಗ್ರೌಂಡ್ ರೈಲು ನಿಲ್ದಾಣಗಳು ಮತ್ತು 6 ಎಲಿವೇಟೆಡ್ ರೈಲು ನಿಲ್ದಾಣಗಳನ್ನು ಹೊಂದಿದೆ. ಮೊದಲ ಹಂತದ ರೈಲು ಮಾರ್ಗವು ಕಾಳೇನ ಅಗ್ರಹಾರದಿಂದ ತಾವರಕೆರೆಯವರೆಗೆ ಇರಲಿದೆ.

ಬೆಂಗಳೂರು ನಗರದಲ್ಲಿ ಬಿಎಂಆರ್ ಸಿಎಲ್ ಕೈಗೆತ್ತಿಕೊಳ್ಳುವ ಪ್ರತಿಯೊಂದು ರೈಲು ಮಾರ್ಗವು ಸಮಯಕ್ಕೆ ಸರಿಯಾಗಿ ಮುಗಿಸದೇ ಇರುವುದಕ್ಕೆ ಸಾರ್ವಜನಿಕರು ಮತ್ತು ಪ್ರಯಾಣಿಕರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈಗಾಗಲೇ ಚಾಲ್ತಿಯಲ್ಲಿರುವ ನೇರಳೆ, ಹಸಿರು ಮತ್ತು ಹಳದಿ ಮಾರ್ಗದಲ್ಲಿ ಪ್ರಯಾಣಿಕರು ತುಂಬಿ ತುಳುಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಮೆಟ್ರೋ ರೈಲಿಗಾಗಿ ಪ್ರಯಾಣಿಕರು ಆಗ್ರಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹಸಿರು ಮತ್ತು ನೇರಳೆ ಮೆಟ್ರೋ ಮಾರ್ಗದಲ್ಲಿ ಹೆಚ್ಚುವರಿ ರೈಲುಗಳನ್ನು ಓಡಿಸಲು ಬಿಎಂಆರ್ ಸಿಎಲ್ ಮುಂದಾಗಿದೆ.

Shwetha M