ಮೆಟ್ರೋ ಪ್ರಯಾಣಿಕರಿಗೆ ಗುಡ್‌ ನ್ಯೂಸ್‌! – ಸೆ. 6 ರಿಂದ ʼಮೆಟ್ರೋ ಮಿತ್ರʼ ಆಟೋ ಸೇವೆ ಆರಂಭ

ಮೆಟ್ರೋ ಪ್ರಯಾಣಿಕರಿಗೆ ಗುಡ್‌ ನ್ಯೂಸ್‌! – ಸೆ. 6 ರಿಂದ ʼಮೆಟ್ರೋ ಮಿತ್ರʼ ಆಟೋ ಸೇವೆ ಆರಂಭ

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನ ಜನರಿಗೆ ಖುಷಿ ಸುದ್ದಿಯೊಂದಿದೆ. ನಮ್ಮ ಯಾತ್ರಿ ಅಪ್ಲಿಕೇಶನ್‌ ನ ಯಶಸ್ಸಿನ ಬೆನ್ನಲ್ಲೇ, ನಗರದ ಆಟೋ ಚಾಲಕರು ಮೆಟ್ರೋ ಮಿತ್ರ ಅನ್ನೋ ಮತ್ತೊಂದು ಮೊಬಿಲಿಟಿ ಅಪ್ಲಿಕೇಷನ್‌ ಒಂದನ್ನು ಜನರಿಗೆ ಪರಿಚಯಿಸಿದ್ದಾರೆ. ಈ ಅಪ್ಲಿಕೇಷನ್‌ ಬಿಡುಗಡೆಗೆ ದಿನಾಂಕ ನಿಗದಿಯಾಗಲಿದೆ.

ಮೆಟ್ರೋ ಮಿತ್ರವನ್ನು ಸೆಪ್ಟೆಂಬರ್ 6 ರಿಂದ ಪ್ರಾರಂಭಿಸಲು ಆಟೋ ರಿಕ್ಷಾ ಚಾಲಕರ ಒಕ್ಕೂಟ ನಿರ್ಧರಿಸಿದೆ. ಇದು ಮೆಟ್ರೋ ನಿಲ್ದಾಣಗಳಿಂದ ಪ್ರಮುಖ ಪ್ರದೇಶಗಳಿಗೆ ಪ್ರಯಾಣಿಕರನ್ನು ಕರೆದೊಯ್ಯುವ ಗುರಿಯನ್ನು ಹೊಂದಿದೆ. ಈ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಗ್ರಾಹಕರು ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವ ಅಗತ್ಯವಿಲ್ಲ. ಬದಲಿಗೆ, ಅವರು ಕೇವಲ ಕ್ಯುಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಸೇವೆಯನ್ನು ಪಡೆಯಬಹುದಾಗಿದೆ.

ಇದನ್ನೂ ಓದಿ: ಇಂದಿನಿಂದ ಈ ಮಾರ್ಗದಲ್ಲಿ ವಾರದ ಐದು ದಿನ ಹೆಚ್ಚುವರಿ ಮೆಟ್ರೋ ಸೇವೆ!  

ಮೆಟ್ರೋ ಮಿತ್ರ ನಗರದಾದ್ಯಂತ ಮೆಟ್ರೋ ನಿಲ್ದಾಣಗಳಿಂದ ಪ್ರಮುಖ ಪ್ರದೇಶಗಳಿಗೆ ಪ್ರಯಾಣಿಕರನ್ನು ಕರೆದೊಯ್ಯುವ ಗುರಿಯೊಂದಿಗೆ ಆಟೋ ರಿಕ್ಷಾ ಚಾಲಕರ ಒಕ್ಕೂಟ ಅಭಿವೃದ್ಧಿಪಡಿಸಿದ ಅಪ್ಲಿಕೇಶನ್ ಆಗಿದೆ. ಹಲವಾರು ಆಟೋ ಚಾಲಕರು ಕಡಿಮೆ ದೂರದ ಪ್ರಯಾಣದ ಬೇಡಿಕೆಯನ್ನು ನಿರಾಕರಿಸುತ್ತಾರೆ. ಇದರಿಂದ ಗ್ರಾಹಕರಿಗೆ ಮೆಟ್ರೋ ನಿಲ್ದಾಣವನ್ನು ತಲುಪುದು ಅಥವಾ ಮೆಟ್ರೋ ನಿಲ್ದಾಣದಿಂದ ಬೇರೆಡೆಗೆ ತೆರಳುವುದು ಸಮಸ್ಯೆಯಾಗುತ್ತಿದೆ. ಇದೀಗ ಮೆಟ್ರೋ ಮಿತ್ರ ತಂತ್ರಜ್ಞಾನವು ಸಮಸ್ಯೆಯನ್ನು ಪರಿಹರಿಸುವ ಗುರಿಯನ್ನು ಹೊಂದಿದೆ.

ಮೆಟ್ರೋ ಮಿತ್ರದಲ್ಲಿ ಬಳಸಲಾದ ತಂತ್ರಜ್ಞಾನದ ಕಾರಣ ಗ್ರಾಹಕರು ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವ ಅಗತ್ಯವಿಲ್ಲ. ಬದಲಾಗಿ, ಪ್ರಯಾಣಿಕರು ಆಟೋವನ್ನು ಬುಕ್ ಮಾಡಲು ಮೆಟ್ರೋ ನಿಲ್ದಾಣಗಳ ಹೊರಗೆ ಪ್ರದರ್ಶಿಸಲಾದ ಕ್ಯುಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಬೇಕು. ಬಳಿಕ ಅದರಲ್ಲಿ ಇರುವ ಅಪ್ಲಿಕೇಷನ್‌ ಅನ್ನು ಭರ್ತಿ ಮಾಡಿ ಆಟೋ ಬುಕ್‌ ಮಾಡಬೇಕು. ಪ್ರಯಾಣಿಕರು ಒಮ್ಮೆ ಕ್ಯುಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದರೆ, ಅದು ಅವರನ್ನು ನಿಲ್ದಾಣದ 5 ​​ಕಿಮೀ ವ್ಯಾಪ್ತಿಯಲ್ಲಿರು ಪ್ರಮುಖ ಪ್ರದೇಶಗಳನ್ನು ಪಟ್ಟಿ ಮಾಡಲಾದ ಲಿಂಕ್‌ಗೆ ಕರೆದೊಯ್ಯುತ್ತದೆ. ಪ್ರಯಾಣಿಕರು ನಿರ್ದಿಷ್ಟ ಸ್ಥಳವನ್ನು ಆಯ್ಕೆ ಮಾಡಿದ ನಂತರ, ರೈಡ್ ಅನ್ನು ಬುಕ್ ಮಾಡಲು ಒಂದು-ಬಾರಿಯ ಪಾಸ್‌ವರ್ಡ್ ಅಥವಾ ಒಟಿಪಿಯನ್ನು ಕಳುಹಿಸಲಾಗುತ್ತದೆ. ಅಪ್ಲಿಕೇಶನ್ ಅನ್ನು ಸ್ಥಾಪಿಸಿದ ಆಟೋ ಚಾಲಕರಿಗೆ ಸಂದೇಶ ರವಾನೆಯಾಗುತ್ತದೆ. ನಂತರ ಅವರು ಪ್ರಯಾಣಿಕರನ್ನು ಕರೆದೊಯ್ಯಲು ಸ್ಥಳಕ್ಕೆ ಆಗಮಿಸುತ್ತಾರೆ. ಸರ್ಕಾರ ನಿಗದಿಪಡಿಸಿದ ಮೀಟರ್ ದರದ ಪ್ರಕಾರ ಪ್ರಯಾಣಿಕರಿಗೆ ಶುಲ್ಕ ವಿಧಿಸಲಾಗುತ್ತದೆ. ತಂತ್ರಜ್ಞಾನದ ನಿರ್ವಹಣೆಗೆ ಹೆಚ್ಚುವರಿಯಾಗಿ 10 ರೂ. ವಿಧಿಸಲಾಗುತ್ತದೆ ಎಂದು ಹೇಳಲಾಗಿದೆ.

ಆರಂಭದಲ್ಲಿ, ಈ ಸೇವೆಯು ಮೆಟ್ರೋ ನಿಲ್ದಾಣಗಳಿಂದ ವಿವಿಧ ಸ್ಥಳಗಳಿಗೆ ಪ್ರಯಾಣಿಸಲು ಲಭ್ಯವಿರುತ್ತದೆ. ಮುಂದಿನ ಕೆಲವು ತಿಂಗಳುಗಳಲ್ಲಿ ಪ್ರಮುಖ ಸ್ಥಳಗಳಿಂದ ಮೆಟ್ರೋ ನಿಲ್ದಾಣಗಳಿಗೆ ಸೇವೆಯನ್ನು ಒದಗಿಸಲಾಗುವುದು ಎಂದು ಎಆರ್​ಡಿಯು ತಿಳಿಸಿದೆ.

‘ಮೆಟ್ರೋ ಮಿತ್ರ’ ಸೇವೆಗಳನ್ನು ತನ್ನ ವಾಟ್ಸಾಪ್ ಚಾಟ್‌ಬಾಕ್ಸ್‌ನೊಂದಿಗೆ ಸಂಯೋಜಿಸಲು ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ ಜೊತೆಗೆ ಎಆರ್​ಡಿಯು ಮಾತುಕತೆ ನಡೆಸುತ್ತಿದೆ. ಇದನ್ನು ಟಿಕೆಟ್‌ ಬುಕ್ ಮಾಡಲು ಬಳಸಲಾಗುತ್ತದೆ. ಬೆಂಗಳೂರಿನ ಮೆಟ್ರೋ ರೈಲು ನಿಲ್ದಾಣಗಳ ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಪ್ರಯಾಣಿಕರಿಗೆ ನೆರವಾಗುವ ಉದ್ದೇಶದೊಂದಿಗೆ ಈ ಯೋಜನೆ ಜಾರಿಗೆ ಎಆರ್​ಡಿಯು ಮುಂದಾಗಿದೆ.

suddiyaana