ಶ್ರೀಮಂತ ಉದ್ಯಮಿಗಳ ಮಧ್ಯೆ ಹೊಸ ರೇಸ್! – ಟ್ವಿಟರ್ಗೆ ಟಕ್ಕರ್ ಕೊಡಲು ಮೆಟಾದಿಂದ ʼಥ್ರೆಡ್ಸ್ʼ ಬಿಡುಗಡೆ
ಟ್ವಿಟರ್ ದೊರೆ ಎಲಾನ್ ಮಸ್ಕ್ ಮತ್ತು ಫೇಸ್ಬುಕ್ ಮಾಲೀಕ ಮಾರ್ಕ್ ಝುಕೆರ್ಬರ್ಗ್ ಕೇಜ್ ಫೈಟ್ಗೆ ಸಿದ್ಧವಾಗಿರುವ ಬೆನ್ನಲ್ಲೇ ಇಬ್ಬರು ಶ್ರೀಮಂತ ಉದ್ಯಮಿಗಳ ಮಧ್ಯೆ ಈಗ ಹೊಸ ರೇಸ್ ಶುರುವಾಗಿದೆ.ಟ್ವಿಟರ್ಗೆ ಕೌಂಟರ್ ಆಗಿ ಮಾರ್ಕ್ ಝುಕೆರ್ಬರ್ಗ್ ಥ್ರೆಡ್ಸ್ ಅನ್ನೋ ಸಾಮಾಜಿಕ ಜಾಲತಾಣವನ್ನು ಲಾಂಚ್ ಮಾಡಿದ್ದು, ಕೇವಲ 7 ಗಂಟೆಗಳ ಅವಧಿಯಲ್ಲಿ 1 ಕೋಟಿ ಮಂದಿ ಸೈನ್ಇನ್ ಆಗಿದ್ದಾರೆ.
ಇದನ್ನೂ ಓದಿ: ಜುಲೈ 7 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡನೆ – ಬಜೆಟ್ ಮೇಲೆ ಹೆಚ್ಚಿದ ಜನರ ನಿರೀಕ್ಷೆ
ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಟೆಕ್ ಉದ್ಯಮದಲ್ಲಿ ಥ್ರೆಡ್ಸ್ ಬಗ್ಗೆ ಬಿಸಿಬಿಸಿ ಚರ್ಚೆಯಾಗುತ್ತಿದೆ. ಬಹುತೇಕ ಮಂದಿ ಟ್ವಿಟರ್ ನ್ನ ಮೀರಿಸೋಕೆ ಸಾಧ್ಯವಿಲ್ಲ ಅಂತಾ ಅಭಿಪ್ರಾಯ ವ್ಯಕ್ತಪಡಿಸಿದ್ದರೆ, ಇನ್ನೂ ಕೆಲವರು ಟ್ವಿಟರ್ಗೆ ಥ್ರೆಡ್ ಟಕ್ಕರ್ ಕೊಡಲಿದೆ ಅಂತಾ ಹೇಳುತ್ತಿದ್ದಾರೆ. ಥ್ರೆಡ್ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ನ ಪ್ಲಸ್ ಪಾಯಿಂಟ್ ಏನಂದ್ರೆ ಇದು ನೇರವಾಗಿ ಇನ್ಸ್ಟಾಗ್ರಾಂ ಮತ್ತು ಫೇಸ್ಬುಕ್ ಜೊತೆಗೂ ಲಿಂಕ್ ಹೊಂದಿದೆ. ಹೀಗಾಗಿ ಥ್ರೆಡ್ ಹೆಚ್ಚು ವೇಗವಾಗಿ ಸ್ಪ್ರೆಡ್ ಆಗೋಕೆ ಇದು ಸಹಕಾರಿಯಾಗಬಹುದು ಎನ್ನಲಾಗುತ್ತಿದೆ.
ಆ್ಯಂಡ್ರಾಯ್ಡ್ ಮೊಬೈಲ್ ಬಳಕೆದಾರರು ಗೂಗಲ್ ಸ್ಟೋರ್ ಮೂಲಕ ಮತ್ತು ಐಫೋನ್ ಬಳಸುವವರು ಆ್ಯಪ್ ಸ್ಟೋರ್ ಮೂಲಕ ಥ್ರೆಡ್ ಆ್ಯಪ್ನ್ನ ಡೌನ್ಲೋಡ್ ಮಾಡಿಕೊಳ್ಳಬಹುದು. ಟ್ವಿಟರ್ ಮಾದರಿಯಲ್ಲೇ ನಿಮ್ಮ ಅಕೌಂಟ್ ನೇಮ್, ಪ್ರೊಫೈಲ್ ಪಿಕ್ಚರ್ ಸೇರಿದಂತೆ ಕೆಲ ಡಿಟೇಲ್ಸ್ಗಳನ್ನ ಭರ್ತಿ ಮಾಡಿ ಅಕೌಂಟ್ ಓಪನ್ ಮಾಡಬಹುದು. ಇನ್ನು ಇನ್ಸ್ಟಾಗ್ರಾಂನಿಂದಲೂ ಥ್ರೆಡ್ ಲಿಂಕ್ನ್ನ ಒತ್ತಿ ನೇರವಾಗಿ ನಿಮ್ಮ ಥ್ರೆಡ್ ಅಕೌಂಟ್ ಓಪನ್ ಮಾಡಿಕೊಳ್ಳಬಹುದು.
ಝುಕೆರ್ಬರ್ಗ್ ಹೊಸ ಆ್ಯಪ್ ಲಾಂಚ್ ಮಾಡಿ ತಮಗೆ ಕೌಂಟರ್ ಕೊಡೋಕೆ ಮುಂದಾಗಿರುವ ಬಗ್ಗೆ ಎಲಾನ್ ಮಸ್ಕ್ ಯಾವ ರೀತಿ ಪ್ರತಿಕ್ರಿಸಬಹುದು ಅನ್ನೋ ಬಗ್ಗೆ ಭಾರಿ ಕುತೂಹಲ ಇತ್ತು. ತಮಾಷೆ ಏನಂದ್ರೆ, ಥ್ರೆಡ್ನಲ್ಲಿ ಅಕೌಂಟ್ ಓಪನ್ ಮಾಡಿದ ಬಳಿಕ ವ್ಯಕ್ತಿಯೊಬ್ಬರು ತಮ್ಮ ಟ್ವಿಟರ್ ಖಾತೆಯಲ್ಲಿ ಇಂಟ್ರೆಸ್ಟಿಂಗ್ ಪೋಸ್ಟ್ ಒಂದನ್ನು ಮಾಡಿದ್ದರು. ಮಾರ್ಕ್ ಝುಕೆರ್ಬರ್ಗ್ ಹೊಸ ಆ್ಯಪ್ನ್ನ ಕಂಪ್ಯೂಟರ್ ಕೀ ಬೋರ್ಡ್ನ ಕೇವಲ ಮೂರು ಬಟನ್ಗಳಿಂದ ಸಿದ್ಧಪಡಿಸಿದ್ದಾರೆ ಅಂತಾ ಕಂಟ್ರೋಲ್, ಸಿ ಮತ್ತು ವಿ ವರ್ಡ್ನ ಫೋಟೋ ಫೋಸ್ಟ್ ಮಾಡಿದ್ದರು. ಅಂದ್ರೆ ಝುಕೆರ್ಬರ್ಗ್ ಟ್ವಿಟರ್ನ್ನೇ ಕಾಪಿ ಪೇಸ್ಟ್ ಮಾಡಿ ಥ್ರೆಡ್ ನಿರ್ಮಿಸಿದ್ದಾರೆ ಅಂತಾ ವ್ಯಂಗ್ಯವಾಡಿದ್ದಾರೆ. ಇದನ್ನು ನೋಡಿ ಎಲಾನ್ ಮಸ್ಕ್ ನಗುವಿನ ಇಮೋಜಿ ಹಾಕಿ ಕಾಮಿಡಿ ಮಾಡಿದ್ದಾರೆ.