ಮಾರ್ಕ್ ಜುಕರ್‌ಬರ್ಗ್ ಗಿದ್ಯಾ ಜೀವ ಬೆದರಿಕೆ? – 82 ಕೋಟಿ ರೂಪಾಯಿ  ಭದ್ರತೆಗೆ ಇಟ್ಟಿದ್ದೇಕೆ?

ಮಾರ್ಕ್ ಜುಕರ್‌ಬರ್ಗ್ ಗಿದ್ಯಾ ಜೀವ ಬೆದರಿಕೆ? – 82 ಕೋಟಿ ರೂಪಾಯಿ  ಭದ್ರತೆಗೆ ಇಟ್ಟಿದ್ದೇಕೆ?

ಕಳೆದ ವರ್ಷದ ಅಂತ್ಯದ ವೇಳೆ ಮೆಟಾ ಪ್ಲಾಟ್‌ಫಾರ್ಮ್‌ಗಳು ಮೆಟಾ ಸಿಇಒ ಮತ್ತು ಸಹ-ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಬರೋಬ್ಬರಿ 11 ಸಾವಿರ ಉದ್ಯೋಗಿಗಳನ್ನು ವಜಾ ಮಾಡಿ ಸುದ್ದಿಯಾಗಿದ್ದರು. ಇದೀಗ ಜುಕರ್‌ಬರ್ಗ್ ಗೆ ಭದ್ರತಾ ಆತಂಕ ಎದುರಾಗಿದೆಯಂತೆ. ಹಾಗಾಗಿ ಕಂಪನಿ ಭದ್ರತಾ ವೆಚ್ಚವನ್ನು ದೊಡ್ಡ ಮಟ್ಟಕ್ಕೆ ಏರಿಕೆ ಮಾಡಿದೆ.

ಹೌದು, ಕಳೆದ ವರ್ಷ ಜುಕರ್‌ಬರ್ಗ್ ತನ್ನ ಸಂಸ್ಥೆಯಿಂದ ಸುಮಾರು 11 ಸಾವಿರ ಉದ್ಯೋಗಿಗಳನ್ನು ವಜಾ ಮಾಡಿದ್ದರು. ಇದಾದ ಬಳಿಕ ಅವರಿಗೆ ಭದ್ರತಾ ಆತಂಕ ಎದುರಾಗಿದೆಯಂತೆ. ವಜಾಗೊಂಡಿರುವ ಉದ್ಯೋಗಿಗಳಿಂದ ಜೀವ ಬೆದರಿಕೆ ಇರೋ ಹಿನ್ನೆಲೆಯಲ್ಲಿ  ಜುಕರ್‌ಬರ್ಗ್‌ ಅವರ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ.

ಇದನ್ನೂ ಓದಿ: “ನಿಮ್ಮ ಕೆಲಸದ ಅವಧಿ ಮುಗಿದಿದೆ, ದಯವಿಟ್ಟು ಮನೆಗೆ ಹೋಗಿ” – ಉದ್ಯೋಗಿಗಳಿಗೆ ಕಂಪನಿ ಹೀಗೇಕೆ ಹೇಳಿದ್ದು?

ಜುಕರ್‌ಬರ್ಗ್‌ ಅವರ ಭದ್ರತೆಗೆ ಮೆಟಾ ಈವರೆಗೂ 4 ಮಿಲಿಯನ್‌ ಯುಎಸ್‌ ಡಾಲರ್‌ (33 ಕೋಟಿ ರೂಪಾಯಿ) ಖರ್ಚು ಮಾಡುತ್ತಿತ್ತು. ವಜಾಗೊಂಡಿರುವ ಉದ್ಯೋಗಿಗಳಿಂದ ಬೆದರಿಕೆ ಬರುತ್ತಿರುವ ಹಿನ್ನೆಲೆ ಕಂಪನಿ ಇನ್ನು 10 ಮಿಲಿಯನ್‌ ಯುಎಸ್‌ ಡಾಲರ್‌ (82 ಕೋಟಿ ರೂಪಾಯಿ) ಏರಿಕೆ ಮಾಡಿದೆ. ಇದರಿಂದಾಗಿ ಮಾರ್ಕ್‌ ಜುಕರ್‌ಬರ್ಗ್‌ ಅವರ ಭದ್ರತೆಗೆ ಮೆಟಾ ಕಂಪನಿ 14 ಮಿಲಿಯನ್‌ (115 ಕೋಟಿ ರೂಪಾಯಿ) ಖರ್ಚು ಮಾಡಲಿದೆ. ಇಷ್ಟು ವೆಚ್ಚ ಖರ್ಚು ಮಾಡುವುದು ಈಗಿನ ತುರ್ತು ಅಗತ್ಯ ಅಂತಾ ಕಂಪನಿ ಹೇಳಿದೆ.

ಫೇಸ್‌ಬುಕ್‌ ಕಳೆದ ವರ್ಷದ ನವೆಂಬರ್‌ನಲ್ಲಿ 11 ಸಾವಿರ ಉದ್ಯೋಗಿಗಳನ್ನು ವಜಾ ಮಾಡಿತ್ತು. ಮುಂಬರುವ ತಿಂಗಳಲ್ಲಿ ಮತ್ತಷ್ಟು ಉದ್ಯೋಗಿಗಳಿಗೆ ಪಿಂಕ್‌ಸ್ಲಿಪ್‌ ನೀಡಲು ಸಿದ್ಧತೆ ಮಾಡುತ್ತಿದೆ. ಆ ನಿಟ್ಟಿನಲ್ಲಿ ಜುಕರ್‌ಬರ್ಗ್‌ ಅವರ ಭದ್ರತೆಯನ್ನು ಇನ್ನಷ್ಟು ಹೆಚ್ಚಳ ಮಾಡಲಾಗಿದೆ. ಕಂಪನಿ ಆರಂಭವಾದ 18 ವರ್ಷಗಳ ಬಳಿಕ ಇಷ್ಟು ಪ್ರಮಾಣದ ಉದ್ಯೋಗಿಗಳನ್ನು ಹೊರಹಾಕಿದ್ದು ಇದೇ ಮೊದಲನೆಯದಾಗಿದೆ.

suddiyaana