ಮೆಟಾ ಕಂಪನಿಯಲ್ಲಿ ಉದ್ಯೋಗಿಗಳಿಗೆ ಮತ್ತೆ ಗೇಟ್‌ಪಾಸ್‌!

ಮೆಟಾ ಕಂಪನಿಯಲ್ಲಿ ಉದ್ಯೋಗಿಗಳಿಗೆ ಮತ್ತೆ ಗೇಟ್‌ಪಾಸ್‌!

ವಾಟ್ಸಾಪ್​, ಇನ್​ಸ್ಟಾಗ್ರಾಮ್​ ನ ಮಾತೃಸಂಸ್ಥೆ ಮೆಟಾ ಕಂಪನಿಯಲ್ಲಿ ಉದ್ಯೋಗಿಗಳಿಗೆ ಮತ್ತೆ ಗೇಟ್‌ಪಾಸ್‌ ನೀಡಲಾಗುತ್ತಿದೆ. ಈಗ ಕಂಪನಿಯು ರಿಯಾಲಿಟಿ ಲ್ಯಾಬ್ಸ್ ವಿಭಾಗದಲ್ಲಿ ಉದ್ಯೋಗ ಕಡಿತಕ್ಕೆ ತಯಾರಿ ನಡೆಸುತ್ತಿದೆ ಎಂದು ವರದಿಗಳು ತಿಳಿಸಿವೆ.

ಕಳೆದ ನವೆಂಬರ್​ನಿಂದ 21ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿರುವ ಮೆಟಾ, ಈ ಬಾರಿ ತನ್ನ ಮೆಟಾವೆರ್ಸ್​ ಆಧಾರಿತ ರಿಯಾಲಿಟಿ ಲ್ಯಾಬ್ಸ್ ವಿಭಾಗದ ಘಟಕದಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಲು ಯೋಜಿಸುತ್ತಿದೆ. ಕಸ್ಟಮ್ ಸೆಮಿಕಾನ್ ರಚಿಸುವುದರ ಮೇಲೆ ಕೇಂದ್ರೀಕರಿಸಿದೆ. ಕನಿಷ್ಠ 600ಮಂದಿ ಉದ್ಯೋಗಿಗಳು ವಜಾ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಆದರೆ ಮೆಟಾ ವಕ್ತಾರರು ಯೋಜನೆಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ಇದನ್ನೂ ಓದಿ: ಸಿಕ್ಕಿಂನಲ್ಲಿ ಮೇಘಸ್ಪೋಟದಿಂದ 14 ಮಂದಿ ಸಾವು- ಪಶ್ಚಿಮ ಬಂಗಾಳದಲ್ಲಿಯೂ ಪ್ರವಾಹ

ಮೆಟಾದ ಆಂತರಿಕ ಚರ್ಚಾ ವೇದಿಕೆ ಪೋಸ್ಟ್‌ನಲ್ಲಿ ವಜಾಗೊಳಿಸುವಿಕೆಯ ಕುರಿತು ಉದ್ಯೋಗಿಗಳಿಗೆ ತಿಳಿಸಲಾಗಿದೆ. ಫೇಸ್‌ಬುಕ್ ಎಜೈಲ್ ಸಿಲಿಕಾನ್ ಟೀಮ್ ಅಥವಾ ಫಾಸ್ಟ್ ಎಂದು ಕರೆಯಲ್ಪಡುವ ಸೆಮಿಕಾನ್ ಘಟಕಕ್ಕೆ ಕಡಿತದ ವ್ಯಾಪ್ತಿ ವಿಸ್ತರಣೆಯಾಗಲಿದೆ. ಇದು ಸಿಇಒ ಮಾರ್ಕ್​ ಜುಕರ್ ಬರ್ಗ್​ ಅವರ ಪ್ರತಿಷ್ಠಿತ ವರ್ಚುಯೆಲ್​ ರಿಯಾಲಿಟಿ ಪ್ರೊಡಕ್ಷನ್​ ಯೋಜನೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ವಿಶ್ವ ಆರ್ಥಿಕ ಸ್ಥಿತಿ ಮಂದಗತಿಯಲ್ಲಿ ಸಾಗುತ್ತಿರುವುದು, ಆದಾಯ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಐಟಿ ಮತ್ತು ಜಾಲತಾಣ ಸಂಸ್ಥೆಗಳು ಖರ್ಚು ತಗ್ಗಿಸಿಕೊಳ್ಳುವ ನಿಟ್ಟಿನಲ್ಲಿವೆ. ಇದರ ಭಾಗವಾಗಿ ಫೇಸ್​ಬುಕ್​, ಟ್ವಿಟರ್​, ಗೂಗಲ್​ನಂತಹ ದಿಗ್ಗಜ ಸಂಸ್ಥೆಗಳು ಸಹಸ್ರಾರು ಮಂದಿ ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾಗಿವೆ.

Shwetha M