ಧೋನಿ ಮಗಳಿಗೆ ಮೆಸ್ಸಿ ಸ್ಪೆಷಲ್ ಗಿಫ್ಟ್ – ಫುಟ್ಬಾಲ್ ತಾರೆಯಿಂದ ಉಡುಗೊರೆ ಪಡೆದ ಜೀವಾ
ಭಾರತ ತಂಡದ ಮಾಜಿ ನಾಯಕ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಗೆ ಫುಟ್‌ಬಾಲ್ ಮೇಲೆ ಪ್ರೀತಿ ಇರುವುದು ಅಭಿಮಾನಿಗಳಿಗೆ ಗೊತ್ತೇ ಇದೆ. ಧೋನಿಗೆ ಕ್ರಿಕೆಟ್ ಎಷ್ಟು ಇಷ್ಟವೋ.. ಫುಟ್‌ಬಾಲ್ ಕ್ರೀಡೆ ಮೇಲೆ ಅಷ್ಟೇ ಒಲವು ಇದೆ. ತಂದೆಯಂತೆ ಮಗಳು ಕೂಡಾ ಜೀವಾ ಕೂಡಾ ಫುಟ್‌ಬಾಲ್ ಇಷ್ಟಪಡುತ್ತಾಳೆ. ಇದೀಗ ಧೋನಿ ಮಗಳಿಗೆ ಫುಟ್‌ಬಾಲ್ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ ಸರ್‌ಪ್ರೈಸ್ ನೀಡಿದ್ದಾರೆ. ಅರ್ಜೆಂಟೀನಾ ಫುಟ್ ಬಾಲ್ ಟೀಮ್ ಕ್ಯಾಪ್ಟನ್ ಲಿಯೊನೆಲ್ ಮೆಸ್ಸಿ ತಮ್ಮ ಜೆರ್ಸಿಯನ್ನು ಜೀವಾಗೆ ಗಿಫ್ಟ್ ಆಗಿ ನೀಡಿದ್ದಾರೆ.
ಇದನ್ನೂ ಓದಿ: 100ನೇ ಟೆಸ್ಟ್ ಪಂದ್ಯದಲ್ಲಿ 200 ರನ್ ಬಾರಿಸಿದ ವಾರ್ನರ್ – ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ
ಇತ್ತೀಚೆಗಷ್ಟೇ ಮುಕ್ತಾಯಗೊಂಡ ಫಿಫಾ ಫುಟ್ಬಾಲ್ ವಿಶ್ವಕಪ್ ನೋಡಲು ಮಹೇಂದ್ರ ಸಿಂಗ್ ಧೋನಿ ಕತಾರ್‌ಗೆ ತೆರಳಿದ್ದರು. ಈ ವೇಳೆ ಮೆಸ್ಸಿಯಿಂದ ಜೀವಾ ವಿಶೇಷ ಉಡುಗೊರೆ ಪಡೆದಿದ್ದಾರೆ. ಮೆಸ್ಸಿ ತನ್ನ ಅರ್ಜೆಂಟೀನಾ ಜೆರ್ಸಿಗೆ ಪಾರಾ ಜಿವಾ ಎಂದು ಬರೆದು ಸಹಿ ಹಾಕಿ ಗಿಫ್ಟ್ ನೀಡಿದ್ದಾರೆ. ಮೆಸ್ಸಿ ಉಡುಗೊರೆಯಾಗಿ ನೀಡಿದ ಜೆರ್ಸಿಯನ್ನು ಹಾಕಿಕೊಂಡು ಜೀವಾ ಪೋಸ್ ಕೊಟ್ಟಿರುವ ಫೋಟೋಸ್ ಅನ್ನ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಅರ್ಜೆಂಟೀನಾ ಫುಟ್ ಬಾಲ್ ಟೀಮ್ ಕ್ಯಾಪ್ಟನ್ ಲಿಯೊನೆಲ್ ಮೆಸ್ಸಿ , ಫಿಫಾ ವಿಶ್ವಕಪ್ 2022ರ ಪಂದ್ಯದಲ್ಲಿ ತಾವು ಧರಿಸಿದ್ದ ಶರ್ಟ್‌ನ್ನೇ ಸಹಿ ಹಾಕಿ ಕೊಟ್ಟಿರುವುದು ಕೂಡಾ ವಿಶೇಷವಾಗಿತ್ತು.
ಧೋನಿ ಪುತ್ರಿ ಜೀವಾಗೆ ಮೆಸ್ಸಿ ಅಂದ್ರೆ ತುಂಬಾ ಇಷ್ಟ. ಮೆಸ್ಸಿಯ ಪುಟಾಣಿ ಅಭಿಮಾನಿಗೆ ಈಗ ಅಪರೂಪ ಉಡುಗೊರೆ ಸಿಕ್ಕಿದ್ದು, ಅದನ್ನ ಧರಿಸಿದ ಜೀವಾ ಸಂಭ್ರಮಿಸಿದ್ದಾಳೆ. ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಬ್ಯಾಟ್ ಹಿಡಿಯುವ ಮೊದಲು ಫುಟ್‌ಬಾಲ್ ತರಬೇತಿ ಪಡೆದಿದ್ದರು. ಅವರಿಗೆ ಗೋಲ್ ಕೀಪರ್ ಆಗ್ಬೇಕು ಅಂತ ದೊಡ್ಡ ಆಸೆ ಇತ್ತು. ಕ್ರಿಕೆಟಿಗರಾದ ನಂತರವೂ, ಧೋನಿ ಫುಟ್ಬಾಲ್ ಪಂದ್ಯಗಳನ್ನ ನೋಡಲು ವಿದೇಶಕ್ಕೆ ಹಾರುತ್ತಿದ್ದರು. ಹಿಂದೊಮ್ಮೆ ಸಂದರ್ಶನವೊಂದರಲ್ಲಿ ಧೋನಿಗೆ ತಮ್ಮ ನೆಚ್ಚಿನ ಫುಟ್ಬಾಲ್ ಆಟಗಾರ ಯಾರು? ಎಂದು ಪ್ರಶ್ನೆ ಕೇಳಲಾಗಿತ್ತು. ಆಗ ಕ್ಯಾಪ್ಟನ್ ಕೂಲ್, ಮೆಸ್ಸಿ ಎಂದು ತಮ್ಮ ಅಭಿಮಾನ ಮೆರೆದಿದ್ದರು.