ಸುರತ್ಕಲ್ ಟೋಲ್‌ಗೇಟ್‌ ಜೊತೆ ಹೆಜಮಾಡಿ ಟೋಲ್‌ಗೇಟ್ ವಿಲೀನ-ನೂರೆಂಟು ಅನುಮಾನ
ಟೋಲ್‌ಗೇಟ್‌ ರದ್ದಾದರೂ ಸವಾರರಿಗೆ ಹೆಚ್ಚುವರಿ ಹೊರೆ ತಪ್ಪಿದ್ದಲ್ಲ..!

ಸುರತ್ಕಲ್ ಟೋಲ್‌ಗೇಟ್‌ ಜೊತೆ ಹೆಜಮಾಡಿ ಟೋಲ್‌ಗೇಟ್ ವಿಲೀನ-ನೂರೆಂಟು ಅನುಮಾನಟೋಲ್‌ಗೇಟ್‌ ರದ್ದಾದರೂ ಸವಾರರಿಗೆ ಹೆಚ್ಚುವರಿ ಹೊರೆ ತಪ್ಪಿದ್ದಲ್ಲ..!

ಮಂಗಳೂರು: ಸಾಕಷ್ಟು ಹೋರಾಟ, ಪ್ರತಿಭಟನೆಗಳ ನಂತರ ಸುರತ್ಕಲ್ ಟೋಲ್ ಪ್ಲಾಜಾವನ್ನು ಕೇಂದ್ರಸರ್ಕಾರ ರದ್ದು ಮಾಡಿದೆ. ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್‌ನಲ್ಲಿ 2015ರಲ್ಲಿ ಟೋಲ್ ಪ್ಲಾಜಾ ಆರಂಭಗೊಂಡಿತ್ತು. ಟೋಲ್‌ಗೇಟ್ ವಿರುದ್ಧ ನಿರಂತರ ಹೋರಾಟಕ್ಕೆ ಮಣಿದ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಿ ಟೋಲ್‌‌ಗೇಟನ್ನು ರದ್ದುಗೊಳಿಸಿದೆ. ಹೀಗಿದ್ದರೂ ಕೂಡಾ ವಾಹನಸವಾರರಿಗೆ ಮತ್ತೊಂದು ತಲೆನೋವು ಶುರುವಾಗಿದೆ.

ಇದನ್ನೂ ಓದಿ:  ಗುಜರಾತ್ ಚುನಾವಣೆ- ನಾಪತ್ತೆಯಾಗಿದ್ದ ಆಪ್ ಆಭ್ಯರ್ಥಿ ಪತ್ತೆ, ನಾಮಪತ್ರ ವಾಪಸ್

ಕೇಂದ್ರಸರ್ಕಾರವೇನೋ ಸುರತ್ಕಲ್ ಟೋಲ್‌ಗೇಟ್‌ನ್ನು ರದ್ದುಗೊಳಿಸಿದೆ. ಆದರೆ, ರದ್ದುಗೊಳಿಸಿರುವ ಟೋಲ್‌ಗೇಟ್‌ನ್ನು ಪಕ್ಕದ ಹೆಜಮಾಡಿ ಟೋಲ್‌ಗೇಟ್ ಜೊತೆ ವಿಲೀನ ಮಾಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಇನ್ನು ಮುಂದೆ ಹೆಜಮಾಡಿ ಟೋಲ್‌ಗೇಟ್‌ ನಲ್ಲಿ ವಾಹನ ಸವಾರರು ಸುರತ್ಕಲ್ ಟೋಲ್‌ಪ್ಲಾಜಾದ ಹಣವನ್ನು ಸೇರಿಸಿ ಕಟ್ಟಿ ಪ್ರಯಾಣಿಸಬೇಕಾಗಿದೆ. ಸದ್ಯ ವಿಲೀನ ಪ್ರಕ್ರಿಯೆ ಮುಗಿದಿದ್ದು ಹೆಜಮಾಡಿ ಟೋಲ್‌ಪ್ಲಾಜಾದಲ್ಲಿ ಹೆಚ್ಚಿನ ದರ ನಿಗದಿಯ ನೋಟಿಫೀಕೆಶನ್ ಇನ್ನಷ್ಟೇ ಆಗಬೇಕಾಗಿದೆ.

ಸುರತ್ಕಲ್ ಟೋಲ್‌ಗೇಟ್‌ನಲ್ಲಿ ಕೆ.ಎ 19 ನೋಂದಣಿ ಹೊಂದಿರುವ ಖಾಸಗಿ ವಾಹನ ಸವಾರರಿಗೆ ಟೋಲ್‌ನಿಂದ ವಿನಾಯಿತಿ ನೀಡಲಾಗಿತ್ತು. ಆದರೆ ಇನ್ನು ಮುಂದೆ ಮಂಗಳೂರಿನಿಂದ ಉಡುಪಿ ಕಡೆ ಪ್ರಯಾಣಿಸುವ ಎಲ್ಲಾ ವಾಹನಗಳು ಸುರತ್ಕಲ್ ಟೋಲ್‌ಪ್ಲಾಜಾದ ಹೆಚ್ಚುವರಿ ಹಣವನ್ನು ಹೆಜಮಾಡಿ ಟೋಲ್‌ಗೇಟ್‌ನಲ್ಲಿ ಪಾವತಿ ಮಾಡಿಯೇ ಹೋಗಬೇಕಾಗಿದೆ. ಇದರಿಂದಾಗಿ ವಾಹನ ಸವಾರರಿಗೆ ಲಾಭಕ್ಕಿಂತ ನಷ್ಟವೇ ಉಂಟಾಗಲಿದೆ.

suddiyaana