ಬಂಕ್ ನಲ್ಲಿ ಹಣ ಎಸೆದುಹೋದ ಮರ್ಸಿಡಿಸ್ ಕಾರು ಮಾಲೀಕ – ಮಹಿಳಾ ಸಿಬ್ಬಂದಿ ಕಣ್ಣೀರಾಕಿದ್ದೇಕೆ..!?

ಬಂಕ್ ನಲ್ಲಿ ಹಣ ಎಸೆದುಹೋದ ಮರ್ಸಿಡಿಸ್ ಕಾರು ಮಾಲೀಕ – ಮಹಿಳಾ ಸಿಬ್ಬಂದಿ ಕಣ್ಣೀರಾಕಿದ್ದೇಕೆ..!?

ಹಣದ ಮದವೇರಿದ್ರೆ ಕೆಲವರು ಮನುಷ್ಯತ್ವವನ್ನೇ ಮರೆತು ಬಿಡ್ತಾರೆ. ತಾವು ತಿನ್ನೋದೂ ಕೂಡ ಅನ್ನ ಅನ್ನೋದೇ ಅಂಥವ್ರಿಗೆ ನೆನಪಿಗೆ ಬರಲ್ಲ. ಹೀಗೆಯೇ ದುಡ್ಡಿನ ದರ್ಪದಲ್ಲಿ ಇಲ್ಲೊಬ್ಬ ಹೀನ ಕೃತ್ಯ ಮಾಡಿದ್ದಾನೆ.

ಇದನ್ನೂ ಓದಿ : ರಿಕ್ಕಿ ಕೇಜ್‌ಗೆ ಪ್ರತಿಷ್ಠಿತ ಗ್ರ್ಯಾಮಿ ಅವಾರ್ಡ್ – ಮೂರನೇ ಬಾರಿಗೆ ಪ್ರಶಸ್ತಿ ಪಡೆದ ಹೆಗ್ಗಳಿಕೆ

ಚೀನಾದಲ್ಲಿ ನಡೆದಿರೋ ಈ ಘಟನೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಪೆಟ್ರೋಲ್ ಬಂಕ್ ನಲ್ಲಿ ಕಾರಿಗೆ ಪೆಟ್ರೋಲ್ ಹಾಕಿಸಿಕೊಂಡ ಐಷಾರಾಮಿ ಕಾರಿನ ಮಾಲೀಕ ಮನುಷ್ಯತ್ವವೇ ಇಲ್ಲದಂತೆ ವರ್ತಿಸಿದ್ದಾನೆ. ಬಂಕ್ ಸಿಬ್ಬಂದಿ ಹಣ ಕೇಳಿದ್ರೆ ನೋಟುಗಳನ್ನ ಕೆಳಗೆ ಎರಚಿ ಹೋಗಿದ್ದಾನೆ.

ಮರ್ಸಿಡಿಸ್ ಕಾರಿನ ಮಾಲೀಕ ಗ್ಯಾಸ್ ಸ್ಟೇಷನ್ ನಲ್ಲಿ ಪೆಟ್ರೋಲ್ ಹಾಕಿಸಿಕೊಂಡು ಹಣವನ್ನ ನೆಲಕ್ಕೆ ಬಿಸಾಡಿ ಹೋಗಿರುವ ಅಮಾನವೀಯ ಘಟನೆ ಚೀನಾದಲ್ಲಿ ನಡೆದಿದೆ. ಮಹಿಳಾ ಸಿಬ್ಬಂದಿ ಜೊತೆಗೆ ಕಾರು ಮಾಲೀಕನ ದರ್ಪದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

50 ಸೆಕೆಂಡ್​ಗಳ ಈ ವಿಡಿಯೋದಲ್ಲಿ ಬ್ಲ್ಯಾಕ್ ಮರ್ಸಿಡಿಸ್ ಕಾರು ಇಂಧನಕ್ಕಾಗಿ ಗ್ಯಾಸ್ ಸ್ಟೇಷನ್ ಒಳಗೆ ಬರುತ್ತೆ. ಈ ವೇಳೆ ಮಹಿಳಾ ಸಿಬ್ಬಂದಿ ಕಾರಿಗೆ ಪೆಟ್ರೋಲ್ ಹಾಕಿದ್ದಾರೆ. ಬಳಿಕ ಕಾರು ಮಾಲೀಕನ ಬಳಿ ತೆರಳಿ ಪೇಮೆಂಟ್ ಮಾಡುವಂತೆ ಕೇಳಿ ಕೈ ಮುಂದೆ ಚಾಚಿದ್ದಾರೆ. ಆದ್ರೆ ಸಿಬ್ಬಂದಿ ಕೈಗೆ ಹಣ ಕೊಡದ ಕಾರು ಮಾಲೀಕ ಕೆಲ ನೋಟುಗಳನ್ನ ನೆಲದ ಮೇಲೆ ಎರಚಿದ್ದಾನೆ. ಈ ವೇಳೆ ಮಹಿಳಾ ಸಿಬ್ಬಂದಿ ನೆಲದ ಮೇಲೆ ಬಿದ್ದಿದ್ದ ನೋಟುಗಳನ್ನ ಆಯ್ದುಕೊಂಡಿದ್ದಾರೆ. ಸಿಬ್ಬಂದಿ ನೋಟು ಎತ್ತಿಕೊಳ್ಳೋವರೆಗೂ ಅಲ್ಲೇ ಇದ್ದ ಕಾರು ಮಾಲೀಕ ಬಳಿಕ ಗ್ಯಾಸ್ ಸ್ಟೇಷನ್ ನಿಂದ ಹೊರಟಿದ್ದಾನೆ. ನೋಟುಗಳನ್ನ ಆಯ್ದುಕೊಂಡ ಮಹಿಳಾ ಸಿಬ್ಬಂದಿ ಅವಮಾನದಿಂದ ಕಣ್ಣೀರು ಹಾಕಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು ಹಲವರು ಆಕ್ರೋಶ ಹೊರ ಹಾಕಿದ್ದಾರೆ. ಕೆಲವ್ರು ಕಾರುಗಳನ್ನ ಬಂಕ್ ಒಳಗೆ ಬರದಂತೆ ನಿಷೇಧ ಹೇರಬೇಕು ಅಂದಿದ್ರೆ ಇನ್ನೂ ಕೆಲವ್ರು ಸಿಬ್ಬಂದಿ ಕಣ್ಣೀರು ಕಂಡು ಮರುಗಿದ್ದಾರೆ.

suddiyaana