ಮ್ಯಾರಥಾನ್‌ನಲ್ಲಿ ಭಾರತಕ್ಕೆ ಬೆಳ್ಳಿ!- ಏಷ್ಯನ್ ಗೇಮ್ಸ್‌ನ ಅಥ್ಲೆಟಿಕ್ಸ್ ವಿಭಾಗದಲ್ಲಿ ಸಾವನ್ ಬರ್ವಾಲ್ ಭರ್ಜರಿ ಸಾಧನೆ

ಮ್ಯಾರಥಾನ್‌ನಲ್ಲಿ ಭಾರತಕ್ಕೆ ಬೆಳ್ಳಿ!- ಏಷ್ಯನ್ ಗೇಮ್ಸ್‌ನ ಅಥ್ಲೆಟಿಕ್ಸ್ ವಿಭಾಗದಲ್ಲಿ ಸಾವನ್ ಬರ್ವಾಲ್ ಭರ್ಜರಿ ಸಾಧನೆ

ಏಷ್ಯನ್ ಗೇಮ್ಸ್‌ನ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತಕ್ಕೆ ಮತ್ತೊಂದು ಹೆಮ್ಮೆಯ ಕ್ಷಣ ಸಿಕ್ಕಿದೆ. ಪುರುಷರ ಮ್ಯಾರಥಾನ್‌ನಲ್ಲಿ ಭಾರತದ ಅಥ್ಲೀಟ್ ಸಾವನ್ ಬರ್ವಾಲ್ ಬೆಳ್ಳಿ ಪದಕ ಗೆದ್ದು ಗಮನ ಸೆಳೆದಿದ್ದಾರೆ.

ಸಾವನ್ ಬರ್ವಾಲ್ ಅವರು 42.195 ಕಿಲೋಮೀಟರ್‌ಗಳ ಮ್ಯಾರಥಾನ್‌ ಓಟವನ್ನು 2 ಗಂಟೆ 11 ನಿಮಿಷ 37 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಆರಂಭದಿಂದಲೇ ಆತ್ಮವಿಶ್ವಾಸದಿಂದ ಓಟ ಮುಂದುವರಿಸಿದ ಸಾವನ್, ಕೊನೆಯ ಹಂತದಲ್ಲೂ ತಮ್ಮ ವೇಗವನ್ನು ಕಾಯ್ದುಕೊಂಡು ಗುರಿ ತಲುಪಿದರು.

ಇದನ್ನೂಓದಿ: RO-KO ಪವರ್.. KL ಖದರ್ – ವಿಂಡೀಸ್ ಬೇಟೆಗೆ ಬಲೆ ಬೀಸಿದ ಭಾರತ

ಮ್ಯಾರಥಾನ್‌ನಂತಹ ಕಠಿಣ ಸ್ಪರ್ಧೆಯಲ್ಲಿ ಕೇವಲ ವೇಗ ಮಾತ್ರವಲ್ಲ, ದೈಹಿಕ ಸಾಮರ್ಥ್ಯ, ಸಹನೆ, ತಂತ್ರ ಮತ್ತು ಮಾನಸಿಕ ದೃಢತೆ ಕೂಡ ಅತ್ಯಂತ ಮುಖ್ಯ. ಈ ಎಲ್ಲಾ ಅಂಶಗಳನ್ನು ಪ್ರದರ್ಶಿಸಿದ ಸಾವನ್ ಬರ್ವಾಲ್, ಭಾರತದ ಪದಕ ಪಟ್ಟಿಗೆ ಮತ್ತೊಂದು ಬೆಳ್ಳಿ ಪದಕ ಸೇರಿಸಿದ್ದಾರೆ.

ದೀರ್ಘ ಓಟದಲ್ಲಿ ಭಾರತದ ಪರ ಅದ್ಭುತ ಪ್ರದರ್ಶನ ನೀಡಿದ ಸಾವನ್ ಬರ್ವಾಲ್ ಅವರಿಗೆ ದೇಶಾದ್ಯಂತ ಅಭಿನಂದನೆಗಳು ವ್ಯಕ್ತವಾಗುತ್ತಿವೆ. ಅಥ್ಲೆಟಿಕ್ಸ್‌ನಲ್ಲಿ ಭಾರತ ಮತ್ತಷ್ಟು ಎತ್ತರಕ್ಕೆ ಏರಲು ಇಂತಹ ಸಾಧನೆಗಳು ದೊಡ್ಡ ಉತ್ತೇಜನ ನೀಡಲಿವೆ.

ತವರಿನ ಪ್ರೇಕ್ಷಕರ ಸಮ್ಮುಖದಲ್ಲಿ ಜಪಾನ್ನ ಇಚಿತಾಕಾ ಯಮಶಿತಾ 2 ಗಂಟೆ 10 ನಿಮಿಷ 49 ಸೆಕೆಂಡುಗಳಲ್ಲಿ ಓಟ ಪೂರ್ಣಗೊಳಿಸಿ ಚಿನ್ನದ ಪದಕ ಗೆದ್ದರು. ಅವರು ಬರ್ವಾಲ್ ಗಿಂತ 48 ಸೆಕೆಂಡುಗಳ ಮನ್ನಡ ಸಾಧಿಸಿದ್ರು.

Kishor KV

Leave a Reply

Your email address will not be published. Required fields are marked *