‘ನನ್ನ ನಿನ್ನೆ, ಇಂದು ಹಾಗೂ ನಾಳೆಗಳು ನೀನೆ’ – ಚಿರು ನೆನಪಲ್ಲಿ ಮೇಘನಾ ರಾಜ್ ಭಾವುಕ

‘ನನ್ನ ನಿನ್ನೆ, ಇಂದು ಹಾಗೂ ನಾಳೆಗಳು ನೀನೆ’ – ಚಿರು ನೆನಪಲ್ಲಿ ಮೇಘನಾ ರಾಜ್ ಭಾವುಕ

ಜೂನ್ 7ಕ್ಕೆ ಚಿರಂಜೀವಿ ಸರ್ಜಾ ಇಲ್ಲದೇ ಮೂರು ವರ್ಷಗಳು ಕಳೆಯಿತು. ಚಿರಂಜೀವಿ ಸರ್ಜಾ ಅವರ ಸಹೋದ ಧ್ರುವ ಸರ್ಜಾ, ಫಾರ್ಮ್‌ಹೌಸ್‌ನಲ್ಲಿರುವ ಚಿರು ಸಮಾಧಿಗೆ ಪೂಜೆ ಸಲ್ಲಿಸಿದರು. ಈ ವೇಳೆ ಚಿರು ಕುಟುಂಬದ ಸದಸ್ಯರು ಕೂಡಾ ಪಾಲ್ಗೊಂಡಿದ್ದರು. ಮೇಘನಾರಾಜ್ ಮತ್ತು ರಾಯನ್ ಕೂಡಾ ಸಮಾಧಿಗೆ ಪೂಜೆ ಸಲ್ಲಿಸಿದರು. ಸೋಶಿಯಲ್ ಮೀಡಿಯಾದಲ್ಲಿ ಮೇಘನಾರಾಜ್ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಕೂಡಾ ಭಾವುಕಾರಾಗಿದ್ದಾರೆ.

ಇದನ್ನೂ ಓದಿ: ಆದಿಪುರುಷ್‌ ಚಿತ್ರ ಪ್ರದರ್ಶನದ ವೇಳೆ ಒಂದು ಸೀಟು ಹನುಮಾನ್‌ ದೇವರಿಗೆ ಮೀಸಲು!

2020ರ ಜೂನ್7 ರಂದು ಚಿರಂಜೀವಿ ಸರ್ಜಾ ನಿಧನರಾಗಿದ್ದರು. ಚಿರು ಮೃತಪಟ್ಟಾಗ ಮೇಘನಾ ಗರ್ಭಿಣಿಯಾಗಿದ್ದರು. ನಂತರ ಮೇಘನಾ ಗಂಡುಮಗುವಿಗೆ ಜನ್ಮ ನೀಡಿದ್ದರು. ಚಿರಂಜೀವಿ ಜನ್ಮದಿನ ಇರಲಿ, ಪುಣ್ಯತಿಥಿ ಇರಲಿ ಮೇಘನಾ ರಾಜ್ ಅವರು ಪತಿಯ ಜೊತೆಗಿನ ಫೋಟೋ ಹಂಚಿಕೊಳ್ಳುತ್ತಾರೆ. ಅದೇ ರೀತಿ ಮೇಘನಾ ಅವರು ಇಂದು ಒಂದು ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಚಿರು ನಿಂತಿದ್ದಾರೆ. ಅವರ ಹಿಂದೆ ಮೇಘನಾ ನಿಂತಿದ್ದಾರೆ. ಇಬ್ಬರ ಮುಖದಲ್ಲೂ ನಗು ಇದೆ. ಈ ಫೋಟೋಗೆ ಮೇಘನಾ, ‘ನನ್ನ ನಿನ್ನೆ, ಇಂದು ಹಾಗೂ ನಾಳೆಗಳು ನೀನೆ’ ಎಂದು ಬರೆದುಕೊಂಡಿದ್ದಾರೆ. ಈ ಫೋಟೋ ಶೇರ್ ಮಾಡಿಕೊಂಡ ಒಂದು ಗಂಟೆಯಲ್ಲಿ ಸಾವಿರಾರು ಲೈಕ್ಸ್ ಸಿಕ್ಕಿದೆ. ಅಭಿಮಾನಿಗಳು ಕಮೆಂಟ್ ಬಾಕ್ಸ್‌ನಲ್ಲಿ ‘ಮಿಸ್ ಯೂ ಚಿರು ಸರ್ಜಾ’ ಎಂದು ಬರೆದುಕೊಂಡಿದ್ದಾರೆ.

ಮೇಘನಾ ರಾಜ್, ಧ್ರುವ ಸರ್ಜಾ, ರಾಯನ್ ರಾಜ್ ಸರ್ಜಾ ಚಿರು ಸಮಾಧಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಚಿರು ಸಮಾಧಿಗೆ ಪೂಜೆ ಮಾಡಲಾಗಿದೆ. ಚಿರು ಅಭಿಮಾನಿಗಳು ಕೂಡ ಇಲ್ಲಿ ನೆರೆದಿದ್ದರು.

suddiyaana