‘ಹ್ಯಾಪಿ ಬರ್ತಡೇ ಹಸ್ಬೆಂಡ್’ – ಚಿರಂಜೀವಿ ಹುಟ್ಟುಹಬ್ಬಕ್ಕೆ ಮೇಘನಾ ಸರ್ಜಾ ಭಾವುಕ ಪೋಸ್ಟ್
ಅಕ್ಟೋಬರ್ 17ಕ್ಕೆ ನಟ ಚಿರಂಜೀವಿ ಸರ್ಜಾ ಅವರ ಹುಟ್ಟು ಹಬ್ಬ. ಸರ್ಜಾ ಫ್ಯಾಮಿಲಿ ಚಿರುವನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಪತ್ನಿ ಮೇಘನಾ ಸರ್ಜಾ ಪ್ರತಿಬಾರಿಯೂ ಚಿರುವನ್ನು ನೆನೆದು ಏನಾದರೊಂದು ಪೋಸ್ಟ್ ಹಾಕುತ್ತಲೇ ಇರುತ್ತಾರೆ. ಪ್ರೀತಿಯ ಗಂಡನ ಹುಟ್ಟುಹಬ್ಬಕ್ಕೆ ಮೇಘನಾ ಸರ್ಜಾ ಈ ಬಾರಿ ಭಾವುಕ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಸಂಗೀತಾ ಮತ್ತು ಕಾರ್ತಿಕ್ ಜೋಡಿಯಾಗುವ ಸಮಯ – ನೈಸ್ ಆಗಿ ಮಸಾಜ್ ಮಾಡ್ತಾ ಮತ್ತಷ್ಟು ಹತ್ತಿರವಾದ ಸ್ನೇಹಿತರು..!
ಚಿರಂಜೀವಿ ಸರ್ಜಾ ಅವರು ಜನಿಸಿದ್ದು 1984ರ ಅಕ್ಟೋಬರ್ 17ರಂದು. ಚಿರು ಬದುಕಿದ್ದರೆ 39ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಆದರೆ, ವಿಧಿಯಾಟ. ಚಿರು ಬದುಕಿಲ್ಲ. ಈ ದಿನದಂದು ಚಿರು ಪತ್ನಿ ಮೇಘನಾ ಸರ್ಜಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ವೊಂದನ್ನು ಮಾಡಿದ್ದಾರೆ. ‘ಕೆಲವನ್ನಷ್ಟೇ ಆಚರಿಸಲು ಆಯ್ಕೆ ಮಾಡಿಕೊಳ್ಳುತ್ತೇವೆ. ನಿಮ್ಮನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಹ್ಯಾಪಿ ಬರ್ತಡೇ ಹಸ್ಬೆಂಡ್’ ಎಂದು ಅವರು ಭಾವುಕವಾಗಿ ಪೋಸ್ಟ್ ಮಾಡಿದ್ದಾರೆ.
ಕೆಲ ವರ್ಷಗಳ ಹಿಂದೆ ಹೃದಯಾಘಾತದಿಂದ ಚಿರಂಜೀವಿ ಅವರು ಮೃತಪಟ್ಟರು. ಆದರೆ, ಮೇಘನಾ ರಾಜ್ ಹಾಗೂ ಅಭಿಮಾನಿಗಳ ಪಾಲಿಗೆ ಅವರಿನ್ನೂ ಜೀವಂತವಾಗಿದ್ದಾರೆ. ಅವರನ್ನು ನಾನಾ ರೀತಿಯಲ್ಲಿ ನೆನಪಿಸಿಕೊಳ್ಳುವ ಕೆಲಸ ಆಗುತ್ತಿದೆ. ಚಿರಂಜೀವಿ ಸರ್ಜಾ ಅವರ ಜೊತೆ ಕಳೆದ ಕ್ಷಣದ ಫೋಟೋ ಹಂಚಿಕೊಂಡಿದ್ದಾರೆ ಮೇಘನಾ ರಾಜ್. ಈ ಫೋಟೋಗೆ ಅಭಿಮಾನಿಗಳಿಂದ ಕಾಮೆಂಟ್ಸ್ ಬಂದಿದೆ. ‘ಹುಟ್ಟುಹಬ್ಬದ ಶುಭಾಶಯಗಳು ಚಿರಂಜೀವಿ ಅವರೇ. ನಾವು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ’ ಎಂದು ಕೆಲವರು ಬರೆದುಕೊಂಡಿದ್ದಾರೆ.
ಚಿರಂಜೀವಿ ಸರ್ಜಾ ಮತ್ತು ಮೇಘನಾ ದಂಪತಿಗೆ ರಾಯನ್ ರಾಜ್ ಸರ್ಜಾ ಎಂಬ ಮುದ್ದಾದ ಮಗನಿದ್ದಾನೆ. ಅವನ ಆರೈಕೆಯಲ್ಲಿ ಮೇಘನಾ ಬ್ಯುಸಿ ಆಗಿದ್ದಾರೆ. ರಾಯನ್ ನೋಡೋಕು ಕೂಡಾ ಚಿರಂಜೀವಿಯನ್ನೇ ಹೋಲುತ್ತಿದ್ದಾನೆ. ಇತ್ತೀಚೆಗೆ ಚಿರಂಜೀವಿ ಸರ್ಜಾ ಅವರ ಕೊನೆಯ ಸಿನಿಮಾ ‘ರಾಜಮಾರ್ತಾಂಡ’ ರಿಲೀಸ್ ಆಗಿದೆ.