ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮೆಗಾ ಸೆಮಿಫೈನಲ್ ಮ್ಯಾಚ್ – ಪಿಚ್ ಹೇಗಿದೆ? ಯಾರಿಗೆ ಫೇವರ್ ಆಗಿದೆ?
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮೆಗಾ ಸೆಮಿಫೈನಲ್ ಮ್ಯಾಚ್‌ಗೆ ಕೌಂಟ್‌ಡೌನ್ ಶುರುವಾಗಿದೆ.. ಗೆದ್ದವರು ನೇರವಾಗಿ ಫೈನಲ್ಗೆ ಎಂಟ್ರಿಯಾಗ್ತಾರೆ. ಸೋತವರು ಸೀದಾ ಮನೆ ದಾರಿ ಹಿಡೀತಾರೆ. ವಾಂಖೆಡೆ ಪಿಚ್ ಹೇಗಿದೆ. ಈ ಸ್ಟೇಡಿಯಂ ಯಾರಿಗೆ ಫೇವರ್ ಆಗಿದೆ ಎಂಬ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ವಾಂಖೆಡೆ ಸ್ಟೇಡಿಯಂನಲ್ಲಿ ಕ್ರಿಕೆಟ್ ದೇವರ ಪ್ರತಿಮೆ ಅನಾವರಣ – ಸಚಿನ್ ತೆಂಡೂಲ್ಕರ್ ಸ್ಟ್ಯಾಂಡ್‌ನಲ್ಲಿ ತಲೆಯೆತ್ತಿದ ಪ್ರತಿಮೆ
ರಾಬಿನ್ ರೌಂಡ್ಸ್ ಸ್ಟೇಜ್ನಲ್ಲಿ ಟೀಂ ಇಂಡಿಯಾ ಒಂದೇ ಒಂದು ಮ್ಯಾಚ್ನ್ನ ಕೂಡ ಸೋತಿಲ್ಲ. ಆಡಿದ ಎಲ್ಲಾ 9 ಪಂದ್ಯಗಳನ್ನ ಕೂಡ ಗೆದ್ದುಕೊಂಡಿದೆ. ಪಾಯಿಂಟ್ಸ್ ಟೇಬಲ್ನಲ್ಲಿ ನಂಬರ್-1 ಪೊಸೀಷನ್ನಲ್ಲಿದ್ದುಕೊಂಡು ಸೆಮಿಫೈನಲ್ಗೆ ಎಂಟ್ರಿಯಾಗಿದೆ. ಈ ಬಾರಿಯ ವರ್ಲ್ಡ್ಕಪ್ ಗೆಲ್ಲೋಕೆ ಭಾರತೀಯ ತಂಡಕ್ಕಿಂತ ಫೇವರೇಟ್ ಟೀಂ ಮತ್ತೊಂದಿಲ್ಲ. ಆದ್ರೂ ಕ್ರಿಕೆಟ್ನಲ್ಲಿ ಏನನ್ನೂ ಹೇಳೋಕೆ ಸಾಧ್ಯವಿಲ್ಲ. ಇದು ಅನಿಶ್ಚಿತತೆಯ ಆಟ. ಯಾರು ಬೇಕಾದ್ರೂ ಗೆಲ್ಲಬಹುದು. ಏನು ಬೇಕಾದ್ರೂ ಆಗಬಹುದು. ಹೀಗಾಗಿ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯೋದು ನಿಜಕ್ಕೂ ರಣರೋಚಕ ಸೆಮಿಫೈನಲ್ ಅನ್ನೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಹಾಗಿದ್ರೆ, ಸೆಮಿಫೈನಲ್ ಪಂದ್ಯಕ್ಕೆ ಸಿದ್ಧಪಡಿಸಲಾಗಿರುವ ವಾಂಖಡೆ ಸ್ಟೇಡಿಯಂನ ಪಿಚ್ ಹೇಗಿದೆ? ಯಾರಿಗೆ ಫೇವರ್ ಆಗಿದೆ ಅನ್ನೋದರ ಮಾಹಿತಿ ಇಲ್ಲಿದೆ.
ಈ ಹಿಂದಿನಿಂದಲೂ ವಾಂಖಡೆ ಸ್ಟೇಡಿಯಂನದ್ದು ಬ್ಯಾಟ್ಸ್ಮನ್ಗಳಿಗೆ ಫೇವರ್ ಆಗಿರುವ ಪಿಚ್. ಈ ಬಾರಿಯ ವರ್ಲ್ಡ್ಕಪ್ನಲ್ಲೂ ಅಷ್ಟೇ ವಾಂಖೆಡೆಯಲ್ಲಿ ರನ್ ಪ್ರವಾಹವೇ ಬಂದಿತ್ತು. ಫಸ್ಟ್ ಬ್ಯಾಟಿಂಗ್ ಮಾಡಿದ ಟೀಂಗಳಂತೂ ಯರ್ರಾಬಿರ್ರಿ ಚಚ್ಚಿದ್ರು. ಸಣ್ಣ ಗ್ರೌಂಡ್ ಬೇರೆ.. ಬೌಂಡರಿ ಲೈನ್ ಹೆಚ್ಚು ಡಿಸ್ಟೆನ್ಸ್ನಲ್ಲಿ ಇಲ್ಲ. ಬೌಂಡರಿ, ಸಿಕ್ಸರ್ಗಳಲ್ಲೇ ಬ್ಯಾಟ್ಸ್ಮನ್ಗಳು ಸ್ಕೋರ್ ಮಾಡ್ತಾರೆ. ಅಫ್ಘಾನಿಸ್ತಾನ ವಿರುದ್ಧದ ಮ್ಯಾಚ್ನಲ್ಲಿ ಗ್ಲೇನ್ ಮ್ಯಾಕ್ಸ್ವೆಲ್ ಯಾವ ರೀತಿ ಆಡಿದ್ರು ಅನ್ನೋದನ್ನ ನೀವೆಲ್ಲಾ ನೋಡಿದ್ರಿ. ಟೋಟಲಿ ಇದೊಂದು ಪಕ್ಕಾ ಬ್ಯಾಟಿಂಗ್ ಪಿಚ್. ಹಾಗಂತಾ ಬೌಲರ್ಸ್ಗಳಿಗೆ ಯಾವುದೇ ಅಡ್ವಾಂಟೇಜ್ ಇಲ್ಲ ಅಂತೇನಲ್ಲ. ಈಗ ಸೆಮಿಫೈನಲ್ಗೆ ರೆಡಿ ಮಾಡಲಾಗಿರುವ ಪಿಚ್ ಸ್ಪಿನ್ನರ್ಸ್ಗಳಿಗೆ ಒಂದಷ್ಟು ಹೆಲ್ಪ್ ಆಗಬಹುದು. ಇನ್ನು ಪೇಸ್ ಬೌಲರ್ಸ್ಗಳಂತೂ ತುಂಬಾ ಪ್ಲ್ಯಾನ್ನಿಂದಲೇ ಬೌಲಿಂಗ್ ಮಾಡಬೇಕಾಗುತ್ತೆ. ಬ್ಯಾಟ್ಗೆ ನೀಟಾಗಿ ಕನೆಕ್ಟ್ ಆಯ್ತ ಅಂದ್ರೆ ಬೌಂಡರಿ ಲೈನ್ ಚಿಕ್ಕದಿರೋದ್ರಿಂದ ಸುಲಭವಾಗಿ ಫೋರ್, ಸಿಕ್ಸರ್ಗಳು ಬರಬಹುದು. ಆದ್ರೆ, ಈ ಬಾರಿಯ ವರ್ಲ್ಡ್ಕಪ್ನಲ್ಲಿ ಟೀಂ ಇಂಡಿಯಾದ ಪೇಸ್ ಬೌಲರ್ಸ್ಗಳಿಗೆ ಇದು ಕೂಡ ವನ್ ಆಫ್ ದಿ ಫೇವರೇಟ್ ಪಿಚ್ ಆಗಿದೆ. ಶ್ರೀಲಂಕಾ ತಂಡವನ್ನ ಗ್ರೌಂಡ್ನಲ್ಲಿ ನಮ್ಮ ಬೌಲರ್ಸ್ 55 ರನ್ಗಳಿಗೆ ಆಲೌಟ್ ಮಾಡಿದ್ರು. ಹೀಗಾಗಿ ಪಿಚ್ ವಿಚಾರದಲ್ಲಿ ಹೇಳೋದಾದ್ರೆ, ವಾಂಖೆಡೆಯಲ್ಲಿ ಟೀಂ ಇಂಡಿಯಾವೆ ಗೆಲಲೋ ಫೇವರೇಟ್ ಟೀಂ. ಇನ್ನು ಫಸ್ಟ್ ಬ್ಯಾಟಿಂಗ್ ಮತ್ತು ಚೇಸಿಂಗ್ ಮಾಡಿದವರಿಗೂ ಪಂದ್ಯವನ್ನ ಗೆಲ್ಲೋಕೆ ಸಮಾನ ಅವಕಾಶ ಇದೆ.
ವಾಂಖೆಡೆಯಲ್ಲಿ ಫಸ್ಟ್ ಬ್ಯಾಟಿಂಗ್ ಮಾಡಿದ ಟೀಂ ಒಟ್ಟು 14 ಮ್ಯಾಚ್ಗಳನ್ನ ಗೆದ್ದುಕೊಂಡಿದೆ. ಚೇಸಿಂಗ್ ಮಾಡಿದಾಗ ಒಟ್ಟು 13 ಪಂದ್ಯಗಳನ್ನ ಗೆದ್ದಿದೆ. ಹೀಗಾಗಿ ಫಸ್ಟ್ ಮಾಡಿದ್ರಷ್ಟೇ ಮ್ಯಾಚ್ ಗೆಲ್ಲೋಕೆ ಸಾಧ್ಯ ಅಂತೇನಿಲ್ಲ. 2011ರಲ್ಲಿ ಫೈನಲ್ನಲ್ಲಿ ಇದೇ ಗ್ರೌಂಡ್ನಲ್ಲಿ ಚೇಸಿಂಗ್ ಮಾಡಿ ಟೀಂ ಇಂಡಿಯಾ ವರ್ಲ್ಡ್ಕಪ್ ಗೆದ್ದಿತ್ತು. ಹೀಗಾಗಿ ಟಾಸ್ ಯಾರು ಗೆಲ್ತಾರೆ ಅನ್ನೋದು ಅಷ್ಟೊಂದು ಇಂಪಾರ್ಟೆಂಟ್ ಆಗಲ್ಲ ಅಂತಾನೆ ಹೇಳಬಹುದು.