ಮೆಗಾ ಫ್ಯಾಮಿಲಿಯಿಂದ ಅಲ್ಲು ದೂರ? – ಪವನ್ ಕಲ್ಯಾಣ್ ಗೆಲುವೇ ಕಾರಣವಾ?
ಸಾಯಿ ಧರಮ್ ತೇಜ್, ಅಲ್ಲು ಮಧ್ಯೆ ಏನಾಯ್ತು?
ಟಾಲಿವುಡ್ ಅನ್ನು ಎರಡು ಮುಖ್ಯ ಕುಟುಂಬ ಆಳ್ತಾ ಇವೆ.. ಅದ್ರಲ್ಲಿ ಒಂದು ಮೆಗಾ ಕುಟುಂಬ.. ಇನ್ನೊಂದು ನಂದಮೂರಿ ಕುಟುಂಬ. ತೆಲುಗು ಚಿತ್ರರಂಗದಲ್ಲಿ ಈ ಎರಡೂ ಕುಟುಂಬಗಳಲ್ಲಿ ಮೆಗಾ ಕುಟುಂಬದ್ದೇ ಮೇಲುಗೈ ಅಂತಾನೇ ಹೇಳ್ಬೋದು.. ಆದ್ರೆ ಈ ಮೆಗಾ ಫ್ಯಾಮಿಲಿ ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರುತ್ತೆ. ಮೆಗಾ ಫ್ಯಾಮಿಲಿ ಹಾಗೂ ಅಲ್ಲು ಫ್ಯಾಮಿಲಿ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಮಾತುಗಳು ಕೇಳಿಬರ್ತಿದೆ. ಮುಖ್ಯವಾಗಿ ಪವನ್ ಕಲ್ಯಾಣ್ ಹಾಗೂ ಅಲ್ಲು ಅರ್ಜುನ್ ನಡುವೆ ಶೀತಲ ಸಮರ ನಡೆಯುತ್ತಿದೆ ಅಂತಾ ಹೇಳಲಾಗ್ತಿದೆ. ಇದು ಕೆಲವೊಮ್ಮೆ ಜಗಜ್ಜಾಹೀರು ಆಗಿರುವುದು ಇದೆ. ಇದೀಗ ಈ ಶೀತಲ ಸಮರ ಮತ್ತೊಮ್ಮೆ ಜಗಜ್ಜಾಹೀರು ಆಗಿದೆ. ಅಲ್ಲು ಅರ್ಜುನ್ ಹಾಗೂ ಪತ್ನಿ ಸ್ನೇಹಾ ರೆಡ್ಡಿ ಮೇಲೆ ಸಾಯ್ ಧರ್ಮ್ ತೇಜ್ ಮುನಿಸಿಕೊಂಡಿದ್ದಾರೆ ಅಂತಾ ಹೇಳಲಾಗ್ತಿದೆ. ಅಷ್ಟಕ್ಕೂ ಮೆಗಾ ಫ್ಯಾಲಿಯಲ್ಲಿ ನಡೆಯುತ್ತಿರೋದಾದ್ರೂ ಏನು? ಅಷ್ಟು ಕ್ಲೋಸ್ ಆಗಿದ್ದವರು ದಿಢೀರ್ ದೂರ ಆಗಲು ಕಾರಣವೇನು ಗೊತ್ತಾ? ಇವೆಲ್ಲದ್ರ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: RCB ಕಿಂಗ್ ವಿಶ್ವಕಪ್ ನಲ್ಲಿ ಸೈಲೆಂಟ್ – ವಿರಾಟ್ ವೈಫಲ್ಯಕ್ಕೆ 5 ಕಾರಣಗಳು!
ಪವನ್ ಕಲ್ಯಾಣ್ ಜನಸೇನಾ ಪಕ್ಷ ಕಟ್ಟಿ ರಾಜಕೀಯರಂಗ ಪ್ರವೇಶಿಸಿದರು. ಮೆಗಾ ಫ್ಯಾಮಿಲಿಯಲ್ಲಿ ಎಲ್ಲರೂ ಬೆಂಬಲಿಸಿದರು. ಈ ಬಾರಿಯ ಚುನಾವಣೆಯಲ್ಲಿ ಪವನ್ ಕಲ್ಯಾಣ್ ಗೆದ್ದು, ಆಂಧ್ರದ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದ್ರಿಂದಾಗಿ ಮೆಗಾ ಫ್ಯಾಮಿಲಿಯಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ. ಮೆಗಾ ಫ್ಯಾನ್ಸ್ ಸಂತಸಕ್ಕೆ ಪಾರವೇ ಇಲ್ಲ. ಇದೇ ಖುಷಿಯಲ್ಲಿದ್ದ ಕುಟುಂಬಸ್ಥರು ಪವನ್ ಕಲ್ಯಾಣ್ ಗೆ ಭರ್ಜರಿ ಸ್ವಾಗತ ಕೋರಿದ್ದರು. ಅದ್ಧೂರಿಯಾಗಿ ಸ್ವಾಗತ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ಸಂದರ್ಭದಲ್ಲಿ ಮೆಗಾ ಫ್ಯಾಮಿಲಿ ಜತೆ ಅಲ್ಲು ಅರ್ಜುನ್ ಇರಲಿಲ್ಲ. ಈ ಬೆನ್ನಲ್ಲೇ ಮೆಗಾ ಫ್ಯಾಮಿಲಿಯಲ್ಲಿ ಮಹತ್ವದ ಬೆಳವಣಿಗೆ ಕೂಡ ಆಗಿದೆ. ಇದು ಹತ್ತು ಹಲವು ಪ್ರಶ್ನೆಗಳಿಗೆ ಎಡೆ ಮಾಡಿಕೊಟ್ಟಿದೆ. ಅಷ್ಟೇ ಅಲ್ಲದೇ ಮೆಗಾ ಕುಟುಂಬ ಒಡೆದಿಯಾ? ಅಥವಾ ಬಿರುಕು ಮೂಡಿದೆಯಾ? ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಟ್ವಿಟರ್ ಮತ್ತು ಇನ್ಸ್ಟಾಗ್ರಾಮ್ ಖಾತೆಯಲ್ಲಿ ನಟ ಸಾಯ್ ಧರ್ಮ ತೇಜ್ ಅವರು ಅಲ್ಲು ಅರ್ಜುನ್ ಅವರನ್ನು ಅನ್ಫಾಲೋ ಮಾಡಿದ್ದಾರೆ. ಇದು ಮೆಗಾ ಫ್ಯಾಮಿಲಿಯಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದಕ್ಕೆ ಸಾಕ್ಷಿ ಎನ್ನುವಂತಾಗಿದೆ.
ಹೌದು, ಇಷ್ಟು ದಿನ ನಟ ಸಾಯ್ ಧರ್ಮ್ ತೇಜ್ ಅಲ್ಲು ಅರ್ಜುನ್ ಕುಟುಂಬಸ್ಥರನ್ನು ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ಹಾಗೂ ಟ್ವೀಟರ್ ಖಾತೆಯಲ್ಲಿ ಫಾಲೋ ಮಾಡುತ್ತಿದ್ದರು. ಆದರೆ ಇದೀಗ ಏಕಾಏಕಿ ಅನ್ಫಾಲೋ ಮಾಡಿಬಿಟ್ಟಿದ್ದಾರೆ. ಅಷ್ಟು ಕ್ಲೋಸ್ ಆಗಿದ್ದ ಇಬ್ಬರು ದಿಢೀರ್ ಅಂತ ದೂರ ಆಗಿದ್ದೇಕೆ ಅಂತ ಅಭಿಮಾನಿಗಳು ಕಾಮೆಂಟ್ ಮಾಡಿ ಬೇಸರ ಹೊರ ಹಾಕುತ್ತಿದ್ದಾರೆ. ಆದರೆ ನಟ ಸಾಯ್ ಧರ್ಮ್ ತೇಜ್ ಅವರು ಅಲ್ಲು ಅರ್ಜುನ್ ಜತೆ ಸ್ನೇಹಾ ರೆಡ್ಡಿ ಅವರನ್ನು ಕೂಡ ಅನ್ ಫಾಲೋ ಮಾಡಿದ್ದಾರೆ. ಅಲ್ಲು ಕುಟುಂಬದ ಅಲ್ಲು ಸಿರಿಶ್ ಅನ್ನು ಮಾತ್ರ ಫಾಲೋ ಮಾಡುತ್ತಿದ್ದಾರೆ. ಇದನ್ನು ಖುದ್ದು ಅಭಿಮಾನಿಗಳು ಪತ್ತೆ ಹಚ್ಚಿ ಬೇಸರ ಹೊರ ಹಾಕುತ್ತಿದ್ದಾರೆ.
ಇನ್ನು ಮೆಗಾ ಫ್ಯಾಮಿಲಿಯಲ್ಲಿ ಶೀತಲ ಸಮರ ಉಂಟಾಗಲು ಮುಖ್ಯ ಕಾರಣ ಇದೆ. ಈ ಬಾರಿ ಪೀಠಾಪುರ ವಿಧಾನಸಭಾ ಕ್ಷೇತ್ರದಿಂದ ಪವನ್ ಕಲ್ಯಾಣ್ ಚುನಾವಣೆಗೆ ನಿಂತಿದ್ರು.. ಆದರೆ ಸ್ವಂತ ಕುಟುಂಬಸ್ಥರ ಪರವಾಗಿ ಅಲ್ಲು ಅರ್ಜುನ್ ಪ್ರಚಾರ ಮಾಡಿರಲಿಲ್ಲ. ಬದಲಾಗಿ ಪವನ್ ಕಲ್ಯಾಣ್ಗೆ ಬೆಂಬಲ ಸೂಚಿಸಿ ಒಂದು ಟ್ವೀಟ್ ಹಾಕಿದ್ರು.. ಇದಾದ ಮರುದಿನವೇ ಆತ್ಮೀಯ ಸ್ನೇಹಿತ ಎನ್ನುವ ಕಾರಣಕ್ಕೆ ನಂದ್ಯಾಲ ಕ್ಷೇತ್ರದಲ್ಲಿ ವೈಎಸ್ಆರ್ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚಿಸಿದ್ರು. ಇದು ಮೆಗಾ ಫ್ಯಾನ್ಸ್, ಪವನ್ ಕಲ್ಯಾಣ್ ಫ್ಯಾನ್ಸ್ ಬೇಸರಕ್ಕೆ ಕಾರಣವಾಗಿತ್ತು. ಖುದ್ದು ಪವನ್ ಸಹೋದರ ನಾಗಬಾಬು ಪರೋಕ್ಷವಾಗಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಆಂಧ್ರಪ್ರದೇಶದ ಚುನಾವಣೆಯಲ್ಲಿ ಗೆದ್ದು ಬೀಗಿದ್ದ ಪವನ್ ಕಲ್ಯಾಣ ಕುಟುಂಬಸ್ಥರ ಸೆಲೆಬ್ರೇಶನ್ನಲ್ಲಿಯೂ ಕೂಡ ಅಲ್ಲು ಅರ್ಜುನ್ ಕುಟುಂಬಸ್ಥರು ಭಾಗಿಯಾಗಿರಲಿಲ್ಲ. ಮೊನ್ನೆ ಆಂಧ್ರಪ್ರದೇಶದಲ್ಲಿ ನಡೆದ ಪ್ರಮಾಣ ವಚನ ಸಮಾರಂಭದಲ್ಲಿಯೂ ನಟ ಅಲ್ಲು ಅರ್ಜುನ್ ಕಾಣಿಸಿಕೊಂಡಿರಲಿಲ್ಲ. ಆ ಕಾರ್ಯಕ್ರಮಕ್ಕೆ ಸಾಯ್ ಧರ್ಮ ತೇಜ್, ವರುಣ್ ತೇಜ್ ಮತ್ತು ಉಳಿದ ಬಂಧುಗಳು ಹಾಜರಿದ್ದರು. ಆದರೆ ಅಲ್ಲು ಕುಟುಂಬದ ಯಾರೊಬ್ಬರು ಅಲ್ಲಿರಲಿಲ್ಲ. ಇನ್ನು ಮೆಗಾ ಫ್ಯಾಮಿಲಿ ವಾಟ್ಸಪ್ ಗ್ರೂಪ್ಯಿಂದಲೂ ಅಲ್ಲು ಅರ್ಜುನ್ ಎಕ್ಸಿಟ್ ಆಗಿದ್ದಾರೆ ಎನ್ನುವಂತೆ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಪವನ್ ಕಲ್ಯಾಣ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಸೋದರಳಿಯ ಸಾಯಿ ಧರಮ್ ತೇಜ್ ಸೋಶಿಯಲ್ ಮೀಡಿಯಾದಲ್ಲಿ ಅಲ್ಲು ಅರ್ಜುನ್ನ ಅನ್ಫಾಲೋ ಮಾಡಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಮೆಗಾ ಫ್ಯಾಮಿಲಿಯಲ್ಲಿ ಆಂತರಿಕ ಕಲಹ ನಡಿತಿದ್ಯಾ ಅನ್ನೋದು ಫ್ಯಾನ್ಸ್ ನಡುವೆ ನಡೆಯುತ್ತಿರುವ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.