ಬಿಎಸ್ ವೈ & ಬೊಮ್ಮಾಯಿ ಜೊತೆ ಮಾತುಕತೆ – ಕಿಚ್ಚ ಸುದೀಪ್ ಬಿಜೆಪಿ ಸೇರ್ಪಡೆ ಪಕ್ಕಾ..?
ರಾಜ್ಯದಲ್ಲಿ ಚುನಾವಣಾ ಕಣ ರಂಗೇರುತ್ತಿದೆ. ಮತದಾರರ ಮನಗೆಲ್ಲೋಕೆ ಪಕ್ಷಗಳು ನಾನಾ ಸರ್ಕಸ್ ಮಾಡುತ್ತಿವೆ. ಇದೀಗ ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ಕಿಚ್ಚ ಸುದೀಪ್ ರಾಜಕೀಯ ಅಖಾಡಕ್ಕೆ ಧುಮುಕುತ್ತಾರೆ ಅನ್ನೋ ಸುದ್ದಿ ಸಂಚಲನ ಮೂಡಿಸಿದೆ. ಸುದೀಪ್ ರನ್ನ ರಾಜಕೀಯಕ್ಕೆ ಕರೆತರಲು ಹಿಂದಿನಿಂದಲೂ ಸಾಕಷ್ಟು ಪ್ರಯತ್ನಗಳು ನಡೆದಿವೆ. ಇದೀಗ ಸುದೀಪ್ ಬಿಜೆಪಿ ಜೊತೆ ಕೈ ಜೋಡಿಸುವ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿ: ಯಾವ ಕ್ಷೇತ್ರಗಳಲ್ಲಿ ಬಿಜೆಪಿಗೆ ಅಭ್ಯರ್ಥಿ ಆಯ್ಕೆ ಕಗ್ಗಂಟು – ಸಭೆಯಲ್ಲಿ ಯಾರ್ಯಾರ ಬಗ್ಗೆ ಚರ್ಚೆ..?
ಕನ್ನಡ ಚಿತ್ರರಂಗದ ಖ್ಯಾತ ನಟ ಸುದೀಪ್ ಬಿಜೆಪಿಗೆ ಸೇರ್ಪಡೆಯಾಗುತ್ತಾರಾ ಅಥವಾ ಬಿಜೆಪಿ ಪರವಾಗಿ ಪ್ರಚಾರ ರಾಯಬಾರಿ ಆಗುತ್ತಾರಾ ಅನ್ನೋದು ಪ್ರಶ್ನೆಯಾಗಿದೆ. ಈ ಗೊಂದಲಕ್ಕೆ ಏಪ್ರಿಲ್ 5ರಂದು ಉತ್ತರ ಸಿಗುತ್ತೆ ಎನ್ನಲಾಗಿದೆ. ಬಸವರಾಜ ಬೊಮ್ಮಾಯಿ ಹಾಗೂ ಬಿ.ಎಸ್. ಯಡಿಯೂರಪ್ಪ ಜೊತೆ ಕಿಚ್ಚ ಸುದೀಪ್ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕೌತುಕ ಮತ್ತಷ್ಟು ಹೆಚ್ಚಾಗಿದೆ. ಸುದೀಪ್ ಬೆಂಬಲಕ್ಕಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಆಹ್ವಾನ ನೀಡಿದ್ರು. ಅಂತಿಮವಾಗಿ ಸುದೀಪ್ ಅವರು ಬಿಜೆಪಿ ಪರ ಆಸಕ್ತಿ ತೋರಿಸುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗುತ್ತಿದೆ.
ತಿಂಗಳ ಹಿಂದಷ್ಟೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮೊಹಮ್ಮದ್ ನಲಪಾಡ್ ನಟ ಸುದೀಪ್ ರನ್ನ ಭೇಟಿಯಾಗಿದ್ದರು. ಈ ವೇಳೆ ಸುದೀಪ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ವು. ಆದರೆ ಇದನ್ನ ಸುದೀಪ್ ತಳ್ಳಿ ಹಾಕಿದ್ದರು. ನಾನೊಬ್ಬ ಕಲಾವಿದ. ಮಾತುಕತೆಗೆ ಬಂದಿದ್ದು ಸತ್ಯ. ನಾನು ಇನ್ನೂ ನಿರ್ಧಾರ ತಗೊಂಡಿಲ್ಲ. ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಕಡೆ ಆಪ್ತರು ಇರುವಾಗ ನಿರ್ಧಾರ ತೆಗೆದುಕೊಳ್ಳುವುದು ಕಷ್ಟ ಆಗುತ್ತದೆ ಎಂದಿದ್ದರು.