ಗೂಗಲ್ ಮ್ಯಾಪ್ ನಲ್ಲಿ ಬರುವ ಧ್ವನಿ ಇವರದ್ದೇ! -ಜಿಪಿಎಸ್ ವಾಯ್ಸ್ ರೆಕಾರ್ಡಿಂಗ್ ಹೇಗಿರುತ್ತೆ?

ಗೂಗಲ್ ಮ್ಯಾಪ್ ಬಳಸಿದಾಗ ಪ್ರತಿ ಬಾರಿ ಮಹಿಳೆಯೊಬ್ಬಳ ಧ್ವನಿ ಕೇಳಿಬರುತ್ತೆ.. ಆಗಾಗ ಗೂಗಲ್ ಮ್ಯಾಪ್ ನಲ್ಲಿ ಮಾತಾಡುವ ಆ ಮಹಿಳೆಯನ್ನು ಇಮಿಟೇಟ್ ಮಾಡುತ್ತಾ.. ಸಾಕು ಸುಮ್ನಿರಮ್ಮ ಅಂತ ಹೇಳ್ತಾ ನಗ್ತಾ ಇರ್ತೇವೆ.. ಇಷ್ಟಕ್ಕೂ ಆ ಮಹಿಳೆ ಯಾರು ಗೊತ್ತಾ? ಆಕೆಯ ಬಗೆಗಿನ ಮಾಹಿತಿ ಇಲ್ಲಿದೆ..
ಮನೆಯಿಂದ ಹೊರಗೆ ಕಾಲಿಡುತ್ತಲೇ ಹೋಗಬೇಕಾದ ಜಾಗವನ್ನು ಗೂಗಲ್ ಮ್ಯಾಪ್ನಲ್ಲಿ ಸರ್ಚ್ ಮಾಡಿಟ್ಟುಕೊಳ್ಳುವ ಕಾಲದಲ್ಲಿ ನಾವಿದ್ದೀವಿ.. ಎಲ್ಲೋ ಹೋಗೋದಿದ್ರೂ ಒಂದ್ಸಾರಿ ರೂಟ್ ಮ್ಯಾಪ್ ನೋಡಿ ಹೊರಡೋದು ಇತ್ತೀಚಿನ ಯುವಕ ಯುವತಿಯರಿಗಂತೂ ವಾಡಿಕೆ ಆಗ್ಬಿಟ್ಟಿದೆ.. ಗೊತ್ತಿಲ್ಲದ ಊರಿಗೋ.. ಗೊತ್ತಿಲ್ಲದ ನಗರದಲ್ಲೋ ಓಡೋಡುವಾಗಲೂ ಅಕ್ಕಪಕ್ಕದವರತ್ರ ಸಾರ್.. ಇದೇ ರೂಟಾ ಅಂತ ಕೇಳೋ ಬದಲು ಸಿಂಪಲ್ಲಾಗಿ ಗೂಗಲ್ ಮ್ಯಾಪ್ನಲ್ಲಿ ಲೊಕೇಷನ್ ಹಾಕಿದ್ರೆ ಅದರ ಪಾಡಿಗೆ ಮ್ಯಾಪ್ನಲ್ಲಿ ಕುಳಿತಿರುವ ಯುವತಿಯ ಧ್ವನಿಯಲ್ಲಿ ಲೆಫ್ಟ್, ರೈಟು, ಯು ಟರ್ನ್ ಅಂತ ಕೇಳುತ್ತಾ ಯುವರ್ ಡೆಸ್ಟಿನೇಷನ್ ರೀಚ್ಡ್ ಅನ್ನೋವರೆಗೂ ಧೈರ್ಯವಾಗಿ ಈಗ ಹೋಗಿ ಬರಬಹುದು.. ಗೂಗಲ್ ಮ್ಯಾಪ್ ಮಾತ್ರವಲ್ಲದೆ ಐ ಫೋನ್ನಲ್ಲಿರುವ ಸಿರಿಯ ವಾಯ್ಸ್ ಕೂಡ ಇದೇ ಮಹಿಳೆಯದ್ದು.
ಇದನ್ನೂ ಓದಿ: ಐದು ಬಾರಿ ಮದುವೆ.. 3 ನೇ ಗಂಡನೊಂದಿಗೆ ಜೀವನ..! – 2024ರ ಚುನಾವಣೆಗೆ ಸ್ಪರ್ಧಿಸಲು ರಾಜಕೀಯಕ್ಕೆ ಎಂಟ್ರಿಕೊಟ್ಟ ಖ್ಯಾತ ನಟಿ!
ಗೂಗಲ್ ಮ್ಯಾಪ್ ನಲ್ಲಿ ಬರುವ ಧ್ವನಿಯ ಒಡತಿ ಕರೆನ್ ಜಾಕೋಬ್ಸನ್. ಈಕೆಯನ್ನು ‘ಜಿಪಿಎಸ್ ಗರ್ಲ್’ ಅಂತಾ ಕರೀತಾರೆ. ಜನಪ್ರಿಯ ಪಾಪ್ ಸಿಂಗರ್ ಆಗ್ಬೇಕು ಅಂತ ಆಸ್ಟ್ರೇಲೀಯಾದಿಂದ ಅಮೆರಿಕಾಗೆ ಬಂದಿದ್ದ ಜಾಕೋಬ್ಸನ್ ಜಗತ್ತಿನಾದ್ಯಂತ ಜನರಿಗೆ ದಾರಿ ಹೇಳುವ ಧ್ವನಿಯಾಗಿ ಪರಿವರ್ತನೆಗೊಂಡಿದ್ದೇ ದೊಡ್ಡ ಸೋಜಿಗ. ಇಷ್ಟಕ್ಕೂ ಅಮೆರಿಕಾಗೆ ಪಾಪ್ ಸಿಂಗರ್ ಆಗ್ಬೇಕು ಅಂತ ಬಂದಿದ್ದ ಕರೆನ್ಗೆ ಅದೊಂದು ದಿನ ಆಡಿಷನ್ ನಡೀತಿರುವುದು ಗೊತ್ತಾಯ್ತು. ಅದರಲ್ಲೂ ಆಸ್ಟ್ರೇಲಿಯನ್ ಆಕ್ಸೆಂಟ್ ಹೊಂದಿರುವ ಮಹಿಳೆಯ ಧ್ವನಿ ಬೇಕೆಂದು ಅಮೆರಿಕಾದಲ್ಲಿ ಆಡಿಷನ್ ನಡೀತಿದ್ದು.. ತಾನು ವಾಸವಿದ್ದ ಪ್ರದೇಶದಲ್ಲೇ ಆ ಆಡಿಶನ್ ಇದ್ದಿದ್ದರಿಂದ ಅಲ್ಲಿಗೆ ಹೋಗಿದ್ದ ಕರೆನ್ ಅದರಲ್ಲಿ ಸೆಲೆಕ್ಟ್ ಆಗ್ತಾರೆ.
ಆಕೆ ಸೆಲೆಕ್ಟ್ ಆದ ನಂತರ ಆಕೆ ದಿನಪೂರ್ತಿ ಸ್ಟುಡಿಯೋದಲ್ಲಿ ಕುಳಿತು ಟನ್ ಗಟ್ಟಲೆ ನುಡಿಗಟ್ಟುಗಳನ್ನು ಓದುವ ಕೆಲಸ ಮಾಡುತ್ತಿದ್ದರಂತೆ. ಒಂದಿಷ್ಟು ನಾರ್ಮಲ್ ಟ್ರಾಫಿಕ್ ಡೈರೆಕ್ಷನ್ಗಳು ಲೆಫ್ಟ್, ರೈಟ್, ಸೆಕೆಂಡ್ ಲೆಫ್ಟ್ ದೈನ್ ರೈಟ್.. ಹೀಗೆಲ್ಲಾ ಇರುವ ಸಾಲುಗಳಿಂದ ಶುರುವಾಗಿ ಏರಿಯಾದ ಹೆಸರುಗಳವರೆಗೆ ಲಕ್ಷಾಂತರ ಪದಗಳನ್ನು ಉಚ್ಚರಣೆ ಮಾಡಬೇಕಿತ್ತಂತೆ. ಅದರಲ್ಲೂ ಕೆಲವು ಪದಗಳು ಸರಿಯಾಗಿ ಕೇಳಿಸಬೇಕು ಅಂತ ನೂರಕ್ಕೂ ಹೆಚ್ಚು ರೀಟೇಕ್ ಕೊಟ್ಟಿದ್ದೂ ಇದ್ಯಂತೆ. ಇಷ್ಟೆಲ್ಲಾ ಆದ್ಮೇಲೆ ಜಿಪಿಎಸ್‌ನಲ್ಲಿ ಕರೆನ್ ಧ್ವನಿ ಪರ್ಮೆನೆಂಟಾಗಿ ಕುಳಿತಿದೆ.
ಜಗತ್ತಿನಲ್ಲಿ ಪುರುಷರು ಯಾವುದೇ ಮರುಪ್ರಶ್ನೆಯಿಲ್ಲದೆ ಪಾಲನೆ ಮಾಡುವ ಆದೇಶ ತನ್ನದು ಮಾತ್ರ ಎಂದು ಜಿಪಿಎಸ್ನಲ್ಲಿರುವ ತನ್ನ ಧ್ವನಿಯನ್ನು ಫಾಲೋ ಮಾಡೋದರ ಬಗ್ಗೆ ಸಂದರ್ಶನವೊಂದರಲ್ಲಿ ಕರೆನ್ ತಮಾಷೆಯಾಗಿ ಹೇಳಿದ್ದಾರೆ.. ಆದರೆ ಐ ಫೋನ್ ನಲ್ಲಿ ಸಿರಿಯಾಗಿ ವಾಯ್ಸ್ ನೀಡುವುದು ಅಷ್ಟೊಂದು ಸುಲಭದ ಕೆಲಸವಾಗಿರಲಿಲ್ಲ. ಇದು ನಿಜಕ್ಕೂ ಕಠಿಣ ಮಾರ್ಗವಾಗಿತ್ತು, ಇದರ ಬಗ್ಗೆ ಮತ್ತೆ ಮತ್ತೆ ಯೋಚಿಸಲು ಭಯವಾಗುತ್ತದೆ ಎಂದು ಕರೆನ್ ಹೇಳಿಕೊಂಡಿದ್ದಾರೆ.
ಇಲ್ಲಿ ಇನ್ನೊಂದು ತಮಾಷೆಯ ಸಂಗತಿಯೊಂದನ್ನು ಕರೆನ್ ಶೇರ್ ಮಾಡಿಕೊಂಡಿದ್ದಾರೆ.. ಜಗತ್ತಿನಲ್ಲಿ ಯಾರೇ ತಮ್ಮ ಐಫೋನ್ನಲ್ಲಿ ಹಾಯ್ ಸಿರಿ.. ಹಲೋ ಸಿರಿ ಅಂದಾಗೆಲೆಲ್ಲಾ ಐಫೋನ್‌ನಲ್ಲಿರುವ ಸಿರಿ ರೆಸ್ಪಾಂಡ್ ಮಾಡ್ತಾಳೆ. ಆದರೆ ಕರೆನ್ ಮಾತಾಡಿದ್ರೆ ಮಾತ್ರ ಸಿರಿ ಯಾವುದೇ ರೀತಿಯ ಪ್ರತಿಕ್ರಿಯೆ ಕೊಡೋದೇ ಇಲ್ವಂತೆ. ತಮ್ಮ ಗಂಡ ಹಾಗೂ ಮಗ ಇಬ್ಬರೂ ಸಿರಿಯಲ್ಲಿ ಪ್ರಶ್ನೆ ಕೇಳಿದ್ರೆ ಉತ್ತರಿಸುತ್ತಾಳೆ. ಆದ್ರೆ ನನ್ನ ಪ್ರಶ್ನೆಗೆ ಮಾತ್ರ ಆನ್ಸರ್ ಬರೋದೇ ಇಲ್ಲ ಅಂತ ಕರೆನ್ ಬೇಸರದಿಂದ ಹೇಳ್ಕೊಳ್ತಾರೆ. ಏನೇ ಆದ್ರೂ ಜನಪ್ರಿಯ ಪಾಪ್ ಸಿಂಗರ್ ಆಗಬೇಕು ಅಂತ ಹೊರಟಿದ್ದ ಕರೆನ್ ಜಾಕೋಬ್ಸನ್ ಈಗ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ತಮ್ಮ ಧ್ವನಿಯನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.