38 ವಿಮಾನ, 300 ಕಾರು, 52 ಬೋಟ್.. 92 ಕೋಟಿ ಮೌಲ್ಯದ ಡೈಮೆಂಡ್ – ತಲೆ ತಿರುಗಿಸುತ್ತೆ ಆಗರ್ಭ ಶ್ರೀಮಂತನ ಜೀವನಶೈಲಿ

38 ವಿಮಾನ, 300 ಕಾರು, 52 ಬೋಟ್.. 92 ಕೋಟಿ ಮೌಲ್ಯದ ಡೈಮೆಂಡ್ – ತಲೆ ತಿರುಗಿಸುತ್ತೆ ಆಗರ್ಭ ಶ್ರೀಮಂತನ ಜೀವನಶೈಲಿ

ನೂರಾರು ಕೋಟಿ ಮೌಲ್ಯದ ಮನೆ. ಲಕ್ಸುರಿ ಕಾರುಗಳು. ಖಾಸಗಿ ಜೆಟ್.. ಐಷಾರಾಮಿ ಜೀವನ ಶೈಲಿ. ಹೀಗೆ ಬದುಕುವವರೇ ಆಗರ್ಭ ಶ್ರೀಮಂತರು ಅಂತಾ ನಾವೆಲ್ಲಾ ನಂಬಿದ್ದೇವೆ. ಅಂಬಾನಿ, ಅದಾನಿ ಹೆಸರು ಕೇಳಿದ್ರೆ ಹೋ ಇವರು ಕುಬೇರರು ಅಂದುಕೊಳ್ಳುತ್ತೇವೆ. ಆದರೆ ಇವರಿಗೆಲ್ಲಾ ಅಪ್ಪನಂತಹ ವ್ಯಕ್ತಿಯೊಬ್ಬರು ಇದ್ದಾರೆ. ಅವರ ಆಸ್ತಿ ವಿವರ, ಅವರ ಜೀವನಶೈಲಿ ಕೇಳಿದ್ರೆ ಒಮ್ಮೆ ತಲೆ ಸುತ್ತು ಬರೋದು ಗ್ಯಾರಂಟಿ. ಯಾಕಂದ್ರೆ ಥೈಲ್ಯಾಂಡ್ ನ ರಾಜನ ಬದುಕೇ ಹಾಗಿದೆ.

ಥಾಯ್ಲೆಂಡ್‌ನ ರಾಜ ಮಹಾ ವಜಿರಾಲಾಂಗ್‌ಕಾರ್ನ್ ವೈಭವಯುತ ಜೀವನ ನಡೆಸುತ್ತಿದ್ದಾರೆ. ಜನರು ಅವರನ್ನು ಕಿಂಗ್ ರಾಮ ಎಕ್ಸ್ ಎಂದೂ ಕರೆಯುತ್ತಾರೆ. ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ರಾಜ ವಜಿರಾಲಾಂಗ್ ಕಾರ್ನ್ ಬಳಿ ನೀವು ಎಣಿಸಲು ಸಾಧ್ಯವಾಗದಷ್ಟು ವಜ್ರಗಳು, ನಾಣ್ಯಗಳಿವೆ. ರಾಜಾ ವಜಿರಾಲಾಂಗ್‌ಕಾರ್ನ್ (Vajiralongkorn), ಜುಲೈ 28, 1952ರಲ್ಲಿ ಜನಿಸಿದ್ದಾರೆ. ಈಗ ಅವರಿಗೆ 71 ವರ್ಷ ವಯಸ್ಸಾಗಿದ್ದು, ರಾಜಮನೆತನದಿಂದ ಬಂದ ಅಪಾರ ಆಸ್ತಿ (asset) ವಜಿರಾಲಾಂಗ್ ಕಾರ್ನ್ ಬಳಿ ಇದೆ.

ಇದನ್ನೂ ಓದಿ : ಇನ್ನುಮುಂದೆ ಮಕ್ಕಳಿಗೆ ದಿನಕ್ಕೆ 2 ಗಂಟೆ ಮಾತ್ರ ಮೊಬೈಲ್ ನೋಡಲು ಅವಕಾಶ!

ಥೈಲ್ಯಾಂಡ್ ರಾಜನ ಬಳಿ ಸಾವಿರಾರು ಎಕರೆ ಜಮೀನಿದೆ. ಲೆಕ್ಕವಿಲ್ಲದಷ್ಟು ಕಾರುಗಳಿವೆ. ಬರೀ ಕಾರು ಮಾತ್ರವಲ್ಲ ಹಡಗಿನ ಸಂಖ್ಯೆ ಕೂಡ ಸಾಕಷ್ಟಿದೆ. ಥೈಲ್ಯಾಂಡ್ ರಾಜಮನೆತನದ ಸಂಪತ್ತು 40 ಬಿಲಿಯನ್ ಯುಎಸ್ ಡಾಲರ್‌ ಅಂದರೆ 3.2 ಲಕ್ಷ ಕೋಟಿಗಿಂತಲೂ ಹೆಚ್ಚು ಎಂದು ಅಂದಾಜಿಸಲಾಗಿದೆ. ರಾಜ ವಜಿರಲೋಂಗ್‌ಕಾರ್ನ್‌ನ ಆಸ್ತಿಗಳು ಥೈಲ್ಯಾಂಡ್‌ನಾದ್ಯಂತ ಹರಡಿಕೊಂಡಿವೆ. ರಾಜನ ಒಡೆತನದ ಜಮೀನುಗಳಲ್ಲಿ ಮಾಲ್‌ಗಳು, ಹೋಟೆಲ್‌ಗಳು ಸೇರಿದಂತೆ ಹಲವು ಸರ್ಕಾರಿ ಕಟ್ಟಡಗಳಿವೆ. ರಾಜ ವಜಿರಾಲೊಂಗ್‌ಕಾರ್ನ್ ಥೈಲ್ಯಾಂಡ್‌ನ ಎರಡನೇ ಅತಿದೊಡ್ಡ ಬ್ಯಾಂಕ್ ಸಿಯಾಮ್ ಕಮರ್ಷಿಯಲ್ ಬ್ಯಾಂಕ್‌ನಲ್ಲಿ ಶೇಕಡಾ 23 ರಷ್ಟು ಪಾಲನ್ನು ಹೊಂದಿದ್ದಾರೆ ಎಂಬುದು ಮತ್ತೊಂದು ವಿಶೇಷ. ಇಷ್ಟೇ ಅಲ್ಲ ದೇಶದ ಅತಿದೊಡ್ಡ ಕೈಗಾರಿಕಾ ಸಮೂಹವಾದ ಸಿಯಾಮ್ ಸಿಮೆಂಟ್ ಗ್ರೂಪ್‌ನಲ್ಲಿ ರಾಜ ಶೇಕಡಾ 33.3 ರಷ್ಟು ಪಾಲನ್ನು ಹೊಂದಿದ್ದಾರೆ ಎನ್ನಲಾಗಿದೆ.

ಥೈಲ್ಯಾಂಡ್ ರಾಜ ಧರಿಸಿರುವ ಕಿರೀಟ ಸಾಮಾನ್ಯದ್ದಲ್ಲ. 545.67 ಕ್ಯಾರೆಟ್ ಬ್ರೌನ್ ಗೋಲ್ಡನ್ ಜುಬಿಲಿ ಡೈಮಂಡ್ ಥೈಲ್ಯಾಂಡ್ ಕಿರೀಟದಲ್ಲಿದೆ. ಇದನ್ನು ವಿಶ್ವದ ಅತಿ ದೊಡ್ಡ ಮತ್ತು ದುಬಾರಿ ವಜ್ರ ಎಂದು ಕರೆಯಲಾಗುತ್ತದೆ. ವಜ್ರ ಪ್ರಾಧಿಕಾರ ಇದರ ಮೌಲ್ಯ 98 ಕೋಟಿ ರೂಪಾಯಿ ಎಂದಿದೆ. ರಾಜನ ಒಡೆತನದಲ್ಲಿ  21 ಹೆಲಿಕಾಪ್ಟರ್‌ಗಳಿದ್ದು, 17 ವಿಮಾನಗಳನ್ನು ಥಾಯ್ ಕಿಂಗ್ ಹೊಂದಿದ್ದಾರೆ. ಬೋಯಿಂಗ್, ಏರ್‌ಬಸ್ ವಿಮಾನ ಮತ್ತು ಸುಖೋಯ್ ಸೂಪರ್‌ಜೆಟ್ ಸೇರಿದಂತೆ ಅನೇಕ ವಿಮಾನಗಳನ್ನು ಇವರು ಹೊಂದಿದ್ದಾರೆ. ಈ ವಿಮಾನಗಳ ನಿರ್ವಹಣೆಗೆ ವಾರ್ಷಿಕ 524 ಕೋಟಿ ರೂಪಾಯಿಯನ್ನು ಖರ್ಚು ಮಾಡಲಾಗುತ್ತದೆ.

ಅಷ್ಟೇ ಅಲ್ಲದೆ ಕಿಂಗ್ ರಾಮ ಎಕ್ಸ್ ಅವರು ಲಿಮೋಸಿನ್, ಮರ್ಸಿಡಿಸ್ ಬೆಂಜ್ ಸೇರಿದಂತೆ 300 ಕ್ಕೂ ಹೆಚ್ಚು ದುಬಾರಿ ಕಾರುಗಳನ್ನು ಹೊಂದಿದ್ದಾರೆ. ಇದಲ್ಲದೆ ರಾಜನ ಬಳಿ 52 ದೋಣಿಗಳಿವೆ. ಎಲ್ಲ 52 ದೋಣಿಗಳಿಗೆ  ಚಿನ್ನದ ಕೆತ್ತನೆಗಳನ್ನು ಕೆತ್ತಲಾಗಿದೆ. ಥೈಲ್ಯಾಂಡ್ ರಾಜನ ಅರಮನೆಯು 23,51,000 ಚದರ ಅಡಿ ವಿಸ್ತೀರ್ಣದಲ್ಲಿ ಹರಡಿದೆ. ರಾಜನ ಅರಮನೆಯನ್ನು 1782 ರಲ್ಲಿ ನಿರ್ಮಿಸಲಾಗಿದೆ. ಆದ್ರೆ ಕಿಂಗ್ ರಾಮ್ X ಈ ರಾಜರ ಅರಮನೆಯಲ್ಲಿ ವಾಸ ಮಾಡ್ತಿಲ್ಲ. ಈ ಅರಮನೆಯಲ್ಲಿ ಅನೇಕ ಸರ್ಕಾರಿ ಕಚೇರಿಗಳು ಮತ್ತು ವಸ್ತುಸಂಗ್ರಹಾಲಯಗಳಿವೆ. ಥೈಲ್ಯಾಂಡ್ ರಾಜಮನೆತನದ ಸಂಪತ್ತು ಗಳಿಕೆಯ ಪ್ರಮುಖ ಮೂಲಗಳೆಂದ್ರೆ ಸಿಯಾಮ್ ಕಮರ್ಷಿಯಲ್ ಬ್ಯಾಂಕ್ಸ್, ಸಿಯಾಮ್ ಸಿಮೆಂಟ್ ಗ್ರೂಪ್ ಮತ್ತು ಭೂ ಬಾಡಿಗೆ.

suddiyaana