ವಾಯುಪಡೆ ಯುದ್ಧ ಘಟಕಕ್ಕೆ ಮೊದಲ ಮಹಿಳಾ ಅಧಿಕಾರಿ – ಯಾರೀಕೆ ಶಾಲಿಜಾ ಧಾಮಿ?

ವಾಯುಪಡೆ ಯುದ್ಧ ಘಟಕಕ್ಕೆ ಮೊದಲ ಮಹಿಳಾ ಅಧಿಕಾರಿ – ಯಾರೀಕೆ ಶಾಲಿಜಾ ಧಾಮಿ?

ನವದೆಹಲಿ: ಮಿಲಿಟರಿಯಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳಾ ಅಧಿಕಾರಿಗಳು ಈಗ ಪುರುಷ ಅಧಿಕಾರಿಗಳ ಹಂತದಲ್ಲೇ ಸೇನಾ ನಾಯಕತ್ವ ವಹಿಸಿಕೊಳ್ಳಲು ಅರ್ಹರಾಗಿದ್ದಾರೆ. ಅಲ್ಲದೇ ಸೇನೆಯಲ್ಲಿ ಸಮಾನತೆಯೆಡೆಗೆ ದಿಟ್ಟ ಹೆಜ್ಜೆ ಇಡುತ್ತಿದ್ದಾರೆ. ಇದೀಗ ಭಾರತೀಯ ವಾಯುಪಡೆಯು ಗ್ರೂಪ್ ಕ್ಯಾಪ್ಟನ್ ಶಾಲಿಜಾ ಧಾಮಿ ಅವರಿಗೆ ಯುದ್ಧ ಘಟಕದ ನೇತೃತ್ವವನ್ನು ವಹಿಸಿದೆ. ಇದು ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಯುದ್ಧ ಘಟಕದ ನೇತೃತ್ವವನ್ನು ಮಹಿಳಾ ಅಧಿಕಾರಿಗೆ ವಹಿಸಲಾಗಿದೆ.

ಇದನ್ನೂ ಓದಿ: ಮಾನವಸಹಿತ ಗಗನಯಾನಕ್ಕೆ ಇಸ್ರೋ ಸಿದ್ದತೆ – ಪ್ಯಾರಾಚೂಟ್ ಪರೀಕ್ಷೆ ಯಶಸ್ವಿ

ಮಂಗಳವಾರ ಶಾಲಿಜಾ ಧಾಮಿ ಅವರನ್ನು ದೆಹಲಿಯ ಕೇಂದ್ರ ಕಚೇರಿ ಹೊಂದಿರುವ ಭಾರತೀಯ ವಾಯುಪಡೆಯ ಪಶ್ಚಿಮ ವಿಭಾಗದ ಮುಂಚೂಣಿ ಯುದ್ಧ ಘಟಕದ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಆ ಮೂಲಕ ಐಎಎಫ್ ನ ಯಾವುದೇ ಯುದ್ಧ ಘಟಕವನ್ನು ಮುನ್ನಡೆಸಲಿರುವ ಮೊದಲ ಮಹಿಳೆ ಅನ್ನೋ ಹಿರಿಮೆಗೆ ಶಾಲಿಜಾ ಪಾತ್ರರಾಗಿದ್ದಾರೆ.

ಪಂಜಾಬ್‌ನ ಲೂಧಿಯಾನದಲ್ಲಿ ಜನಿಸಿದ ಧಾಮಿ, 2003ರಲ್ಲಿ ಮೊದಲ ಬಾರಿಗೆ ಹೆಚ್‌ಎಎಲ್‌ನ ಹೆಚ್‌ಪಿಟಿ-32 ಡಿ ವಿಮಾನವನ್ನು ಹಾರಿಸಿದ್ದರು. 2005ರಲ್ಲಿ ಇವರಿಗೆ ಫ್ಲೈಟ್‌ ಲೆಫ್ಟಿನೆಂಟ್‌ ಆಗಿ, 2009ರಲ್ಲಿ ಸ್ಕ್ವಾಡ್ರನ್‌ ಲೀಡರ್‌ ಆಗಿ ಪದೋನ್ನತಿ ನೀಡಲಾಯಿತು. ಗ್ರೂಪ್‌ ಕ್ಯಾಪ್ಟನ್‌ ಹುದ್ದೆಯು ಸೇನೆಯಲ್ಲಿನ ಕರ್ನಲ್‌ ಹುದ್ದೆಗೆ ಸಮನಾಗಿದೆ. ಬಳಿಕ  2019 ರಲ್ಲಿ ಫ್ಲೈಟ್ ಕಮಾಂಡರ್ ಆಗಿ ಪದೋನ್ನತಿ ಹೊಂದಿದ್ದರು. ಸುಮಾರು 15 ವರ್ಷಗಳಲ್ಲಿ ಶಾಲಿಜಾ  ಅವರು 2,800 ಗಂಟೆಗಳ ಕಾಲ ಯುದ್ಧ ವಿಮಾನ ಹಾರಾಟ ಮಾಡಿದ ಅನುಭವ ಹೊಂದಿದ್ದಾರೆ.

ಕೆಲ ತಿಂಗಳುಗಳ ಹಿಂದೆ ವಿಶ್ವದ ಅತ್ಯಂತ ಎತ್ತರದ ಯುದ್ಧ ಭೂಮಿ ಎಂಬ ಖ್ಯಾತಿ ಹೊಂದಿರುವ ಮತ್ತು ಉಷ್ಣಾಂಶ ಮೈನಸ್‌ 40 ಡಿಗ್ರಿಯವರೆಗೂ ಕುಸಿಯುವ ಸಿಯಾಚಿನ್‌ಗೆ ಕ್ಯಾಪ್ಟನ್‌ ಸೇನಾಪಡೆಯ ಶಿವಾ ಚೌಹಾಣ್‌ ಅವರನ್ನು ನಿಯೋಜಿಸಲಾಗಿತ್ತು. ಅದರ ಬೆನ್ನಲ್ಲೇ ಮತ್ತೋರ್ವ ಮಹಿಳೆಗೆ ಅತ್ಯಂತ ಉನ್ನತ ಹುದ್ದೆ ನೀಡಲಾಗಿದೆ.

suddiyaana