ಗೊಂಬೆಯಾದ್ರೂ ನೀನೇ ನನ್ನ ಅಮ್ಮ! – ಹೆತ್ತಮ್ಮ ದೂರ ಮಾಡಿದ್ದಕ್ಕೆ ಗೊಂಬೆಯನ್ನೇ ತಾಯಿ ಅಂದುಕೊಂಡಿರುವ ಕೋತಿ ಮರಿ!

ಗೊಂಬೆಯಾದ್ರೂ ನೀನೇ ನನ್ನ ಅಮ್ಮ! – ಹೆತ್ತಮ್ಮ ದೂರ ಮಾಡಿದ್ದಕ್ಕೆ ಗೊಂಬೆಯನ್ನೇ ತಾಯಿ ಅಂದುಕೊಂಡಿರುವ ಕೋತಿ ಮರಿ!

ಅಮ್ಮ, ಮಗುವಿನ ಸಂಬಂಧಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಮನುಷ್ಯರೇ ಆಗ್ಲಿ, ಪ್ರಾಣಿಗಳೇ ಆಗ್ಲಿ.. ಹೆತ್ತಮ್ಮ ಜೊತೆಗೆ ಇರಲೇ ಬೇಕು. ಅಂಇದೊಂದು ಭಾವನಾತ್ಮಕ ಬೆಸುಗೆ. ಆದ್ರೆ ಇಲ್ಲೊಂದು ಕೋತಿ ಮರಿ ತಾಯಿಯಿಂದ ಬೇರ್ಪಟ್ಟಿದ್ದು, ಗೊಂಬೆಯನ್ನೇ ಅಮ್ಮ ಅಂತ ಭಾವಿಸಿದೆ. ಕೋತಿ ಮರಿ ಮನಮಿಡಿಯುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ: ರೀಲ್ಸ್ ಮಾಡೋರಿಗೆ ಬಿಗ್ ಶಾಕ್ ಕೊಟ್ಟ ಸರ್ಕಾರ! – ಇನ್ಮುಂದೆ ಈ ಸ್ಥಳಗಳಲ್ಲಿ ರೀಲ್ಸ್‌ ಮಾಡುವಂತಿಲ್ಲ!

ವೈರಲ್‌ ಆಗುತ್ತಿರುವ ವಿಡಿಯೋ ಜಪಾನ್‌ನ ಇಚಿಕಾವಾ ಸಿಟಿ ಮೃಗಾಲಯದ್ದು ಎನ್ನಲಾಗ್ತಿದೆ.  ಇಲ್ಲಿನ ಕೋತಿ ಮರಿ ತಾಯಿಯಿಂದ ದೂರವಾಗಿದ್ದು ಬೊಂಬೆಯನ್ನೇ ತಾಯಿ ಎಂದು ಭಾವಿಸಿಕೊಂಡು ಬದುಕುತ್ತಿದೆ.  ಇದರ ದೃಶ್ಯವು ವೈರಲ್‌ ಆಗುತ್ತಿದೆ.

ಜಪಾನ್‌ನ ಇಚಿಕಾವಾ ಸಿಟಿ ಮೃಗಾಲಯದಲ್ಲಿ, ಏಳು ತಿಂಗಳ ವಯಸ್ಸಿನ ಪಂಚ್ ಎಂಬ ಮರಿಯನ್ನು ಅದರ ತಾಯಿಯು ತಿರಸ್ಕಾರ ಮಾಡಿತ್ತು. ಈ ಅನಾಥ ಮರಿಯನ್ನು ಒಂಟಿಯಾಗಿ ಬಿಟ್ಟುಹೋಗಿದ್ದು ಅಲ್ಲಿನ ಸಿಬ್ಬಂದಿಯೂ ಅದಕ್ಕೆ ಸ್ವಾಂತನ ನೀಡಲು ಗೊಂಬೆಯನ್ನು ನೀಡಿದ್ದಾರೆ. ಈ ಬೊಂಬೆಯನ್ನೇ ತನ್ನ ತಾಯಿ ಎಂದು ಭಾವಿಸಿದ ಪಂಚ್ ಬದುಕು ಸಾಗಿಸಿದೆ.

ಜುಲೈ 2025 ರಲ್ಲಿ ಜನಿಸಿದ ಪಂಚ್ ಅನ್ನು ತಾಯಿಯೂ ಹುಟ್ಟಿದ ಸ್ವಲ್ಪ ಸಮಯದಲ್ಲೆ ತಿರಸ್ಕರಿಸಿತು. ಮರಿಯನ್ನು ಸಮಾಧಾನ ಪಡಿಸಲು, ಮೃಗಾಲಯದ ಪಾಲಕರು ಪ್ಲಶ್ ಒರಾಂಗುಟನ್ ಆಟಿಕೆಯನ್ನು ನೀಡಿದರು‌. ಅದು ಬೇಗನೆ ಆ ಗೊಂಬೆಯ ಜೊತೆ ಬೆರೆಯಲು ಆರಂಭ ಮಾಡಿದೆ. ಮರಿ ಮಕಾಕ್ ಆಟಿಕೆಯನ್ನು ಎಲ್ಲೆಡೆ ಕೊಂಡೊಯ್ಯುತ್ತದೆ. ಮಲಗಿರುವಾಗ ಅದನ್ನು ಬಿಗಿಯಾಗಿ ತಬ್ಬಿಕೊಂಡು ನಿದ್ದೆ ಮಾಡುತ್ತಿದೆ.

ಈ ದೃಶ್ಯ ನೋಡುಗರ ಕರುಳು ಹಿಂಡುವಂತಿದೆ. ಬೊಂಬೆಯ ಜೊತೆಗಿನ ಜೀವನ ಕೇವಲ ಸಾಂತ್ವನ ಕ್ಕಾಗಿತ್ತೇ ಹೊರತು, ಪಂಚ್ ಇತರ ಮಂಗಗಳ ಜೊತೆಗೆ ಬದುಕುವುದು ಅನಿವಾರ್ಯವಾಗಿತ್ತು. ಹಾಗಾಗಿ ಪಾಲಕರು ಅದನ್ನು ಮೃಗಾಲಯದ ‘ಮಂಕಿ ಮೌಂಟೇನ್’ ಎಂಬ ದೊಡ್ಡ ಆವರಣಕ್ಕೆ ಕೊಂಡೊಯ್ದಿದ್ದಾರೆ.

Shwetha M

Leave a Reply

Your email address will not be published. Required fields are marked *