5 ವರ್ಷ ಡೇಟಿಂಗ್.. ಮದ್ವೆಗೂ ಮುನ್ನವೇ ಸಾಲ್ಟ್‌ ಗೆ ಮಗು! – RCB ಪ್ಲೇಯರ್‌ ಗರ್ಲ್‌ಫ್ರೆಂಡ್ ಯಾರು?

5 ವರ್ಷ ಡೇಟಿಂಗ್.. ಮದ್ವೆಗೂ ಮುನ್ನವೇ ಸಾಲ್ಟ್‌ ಗೆ ಮಗು! – RCB ಪ್ಲೇಯರ್‌ ಗರ್ಲ್‌ಫ್ರೆಂಡ್ ಯಾರು?

ಫಿಲ್‌ ಸಾಲ್ಟ್‌.. 28 ವರ್ಷದ ಇಂಗ್ಲೆಂಡ್‌ ಆಟಗಾರ ಸ್ಫೋಟಕ ಇನಿಂಗ್ಸ್​ಗೆ ಹೆಸರು ವಾಸಿ.. ಪಿಚ್ ಎಂತಹದ್ದೇ ಇರಲಿ, ಎದುರಾಳಿ ಯಾರೇ ಇರಲಿ ಸಾಲ್ಟ್ ಅಬ್ಬರಿಸಲು ಶುರು ಮಾಡಿದರೆ ಎದುರಾಳಿ ಬೌಲರ್ ಗಳು ತಬ್ಬಿಬ್ಬಾಗೋದು ಗ್ಯಾರಂಟಿ. ಐಪಿಎಲ್‌ 2025ರಲ್ಲೂ ಸಾಲ್ಟ್‌ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಆರ್‌ಸಿಬಿ ತಂಡದ ಆರಂಭಿಕ ಆಟಗಾರನಾಗಿರೋ ಸಾಲ್ಟ್‌, ತಂಡದ ಆಪತ್ಬಾಂಧವ ಎನಿಸಿಕೊಂಡಿದ್ದಾರೆ. ಫಿಲ್‌ ಸಾಲ್ಟ್‌ ಮೈದಾನದಲ್ಲಿ ಅಬ್ಬರಿಸ್ತಿದ್ದಂತೆ, ಅವ್ರ ವೈಯಕ್ತಿಕ ಜೀವನ ಮುನ್ನೆಲೆ ಬಂದಿದೆ. ಸಾಲ್ಟ್‌ ಮದುವೆಗೂ ಮನ್ನವೇ ತಂದೆಯಾಗ್ತಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಕೊರೊನಾ ಕರಿನೆರಳು – ಶಾಲೆಗಳಿಗೆ ಹೊಸ ಮಾರ್ಗಸೂಚಿ ಪ್ರಕಟಿಸಿದ ಆರೋಗ್ಯ ಇಲಾಖೆ

ಆರ್​ಸಿಬಿ ಪರ ಈ ಸೀಸನ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಫಿಲ್ ಸಾಲ್ಟ್​, ಕೊಹ್ಲಿ ಜೊತೆ ಸೇರಿ ಆರಂಭದಲ್ಲೇ ಪವರ್ ಹಿಟ್ಟಿಂಗ್ ಬ್ಯಾಟಿಂಗ್ ಮಾಡಿದ್ದಾರೆ. ಐಪಿಎಲ್‌ನಲ್ಲಿ ಸಾಲ್ಟ್‌ ಅಬ್ಬರಿಸ್ತಿರುವ ಸಾಲ್ಟ್‌ ಈಗ ಅವ್ರ ಫ್ಯಾನ್ಸ್‌ ಗೆ ಗುಡ್‌ನ್ಯೂಸ್‌ ಕೊಟ್ಟಿದ್ದಾರೆ. ಸಾಲ್ಟ್‌ ಮದುವೆಗೂ ಮುನ್ನವೇ ತಂದೆ ಆಗ್ತಿದ್ದಾರೆ ಎಂಬ ಸುದ್ದಿ ಈಗ ಸದ್ದು ಮಾಡ್ತಿದೆ. ಈ ಬೆನ್ನಲ್ಲೇ ಸಾಲ್ಟ್‌ ಗೆಳತಿ ಯಾರು ಅಂತಾ ಫ್ಯಾನ್ಸ್‌ ಹುಡುಕಾಟ ನಡೆಸ್ತಿದ್ದಾರೆ. ಅಂದ್ಹಾಗೆ ಫಿಲ್ ಸಾಲ್ಟ್‌ ಗೆಳತಿ ಹೆಸ್ರು ಅಬಿ ಮೆಕ್‌ ಲಾವೆನ್.. ಇದೀಗ ಅಬಿ ಮೆಕ್‌ ಲಾವೆನ್‌ ತಾಯಿಯಾಗೋ ಸಂಭ್ರಮದಲ್ಲಿದ್ದಾರೆ.

ಸಾಲ್ಟ್‌ ಹಾಗೂ ಅಬಿ ಮೆಕ್‌ಲಾವೆನ್‌ 2020ರಲ್ಲಿ ಮೊದಲ ಬಾರಿಗೆ ಮೀಟ್‌ ಆದ್ರು. ಅಲ್ಲಿಂದಲೇ ಅವರಿಬ್ರ ಮಧ್ಯೆ ಪ್ರೀತಿ ಚಿಗುರಿದೆ. ಕೆಲ ಕಾಲ ಡೇಟಿಂಗ್‌ ನಡೆಸಿದ ಈ ಜೋಡಿ ಬಳಿಕ ಒಟ್ಟಿಗೆ ಇರಲು ನಿರ್ಧರಿಸ್ತಾರೆ. ಸುಮಾರು 5 ವರ್ಷಗಳಿಂದ ಸಾಲ್ಟ್‌ ಹಾಗೂ ಅಬಿ ಮೆಕ್‌ಲಾವೆನ್‌  ಲಿವಿಂಗ್‌ ರಿಲೇಷನ್‌ಶಿಪ್‌ ಇದ್ದಾರೆ. ಇದೀಗ ಈ ಜೋಡಿ ಮದುವೆಗೂ ಮುನ್ನವೇ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅಬಿ ಮೆಕ್ ಲಾವೆನ್‌ ಈಗ ತುಂಬು ಗರ್ಭಿಣಿಯಾಗಿದ್ದಾರೆ. ಹೀಗಾಗಿ ಸಾಲ್ಟ್‌ ವಿದೇಶಕ್ಕೆ ಹೋಗ್ತಿದ್ದಾರೆ.

ಇನ್ನು ಅಬಿ ಮೆಕ್‌ಲಾವೆನ್‌ ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನಲ್ಲಿ ವಾಸಿಸುತ್ತಿದ್ದಾರೆ. ಈಕೆ ಇಂಗ್ಲೆಂಡ್‌ನಲ್ಲೇ ವಿದ್ಯಾಭ್ಯಾಸ ಮುಗ್ಸಿದ್ದಾರೆ.  ನಾಟಿಂಗ್‌ ಹ್ಯಾಮ್ ಟ್ರೆಂಟ್ ವಿಶ್ವವಿದ್ಯಾಲಯದಲ್ಲಿ Land Use Planning and Development ವಿಷಯದಲ್ಲಿ ಪದವಿ ಪಡೆದಿದ್ದಾರೆ. ಇನ್ನು ಅಭಿ ತನ್ನ ಬಾಯ್‌ಫ್ರೆಂಡ್‌ ಫೇಮಸ್‌ ಕ್ರಿಕೆಟರ್‌.. ಬೇಕಾದಷ್ಟು ದುಡ್ಡು ಬರುತ್ತೆ ಆರಾಮಾಗಿ ಇರ್ಬೋದು ಅಂತಾ ಯಾವತ್ತೂ ಯೋಚನೆ ಮಾಡಿಲ್ಲ. ವಿದ್ಯಾಭ್ಯಾಸದ ನಂತ್ರ ಆಕೆ ಕೆಲಸ ಕೂಡ ಕೆಲಸ ಮಾಡ್ತಿದ್ದಾರೆ. ಸೋಶಿಯಲ್​ ಮೀಡಿಯಾ ಮಾರ್ಕೆಟಿಂಗ್​ನಲ್ಲಿ ಫ್ರಿಲ್ಯಾನ್ಸರ್​ ಆಗಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.

ಇನ್ನು ಅಬಿ ಮೆಕ್‌ಲಾವೆನ್‌ ಸಾಲ್ಟ್‌ಗೆ ಸದಾ ಸಪೋರ್ಟ್‌ ಮಾಡ್ತಿರ್ತಾರೆ. ಆಗಾಗ ಸ್ಟೇಡಿಯಂಗೆ ಬಂದು ಸಾಲ್ಟ್‌ ಗೆ ಸಪೋರ್ಟ್‌ ಮಾಡ್ತಿರ್ತಾರೆ. ಅಷ್ಟೇ ಅಲ್ಲ ಸೋಶಿಯಲ್‌ ಮೀಡಿಯಾದಲ್ಲೂ ಆಕೆ ಸಖತ್‌ ಆಕ್ಟಿವ್.‌ ಆಗಾಗ ಸಾಲ್ಟ್‌ ಜೊತೆಗಿನ ಫೋಟೋಗಳನ್ನ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾಳೆ. ಇವರಿಬ್ರರ ಭಾಂದವ್ಯ ಹೀಗೆ ಇರ್ಲಿ ಅನ್ನೋದೇ ಫ್ಯಾನ್ಸ್‌ ಆಶಯ.

Shwetha M

Leave a Reply

Your email address will not be published. Required fields are marked *