ಕ್ರಿಕೆಟ್.. ಕಾರು ಮತ್ತು ಕಾವ್ಯಾ!.. ಗಜಕೇಸರಿ ಯೋಗದಿಂದ SRH ಗೆಲುವು! – ಭಾರತದ ಹೊಸ ನ್ಯಾಷನಲ್ ಕ್ರಷ್!

ಕ್ರಿಕೆಟ್.. ಕಾರು ಮತ್ತು ಕಾವ್ಯಾ!.. ಗಜಕೇಸರಿ ಯೋಗದಿಂದ SRH ಗೆಲುವು! – ಭಾರತದ ಹೊಸ ನ್ಯಾಷನಲ್ ಕ್ರಷ್!

ಕಾವ್ಯಾ ಮಾರನ್.. ಸನ್ರೈಸರ್ಸ್ ಹೈದರಾಬಾದ್ ತಂಡದ ಓಡತಿ. ತಂಡ ಸೋತಾಗ ಮಂಕಾಗಿ ನೋವು ವ್ಯಕ್ತಪಡಿಸಿದ್ದ ಕಾವ್ಯಾ ಪರವಾಗಿ ಖುದ್ದು ಸೂಪರ್ ಸ್ಟಾರ್ ರಜನಿಕಾಂತ್ ಎಕ್ಸ್ ಪೋಸ್ಟ್ ಮೂಲಕ ಸಮಾಧಾನ ಹೇಳಿದ್ದರು.. ಇದೇ ಕಾವ್ಯಾ ತಂಡ ಗೆದ್ದಾಗ ಖುಷಿಯಲ್ಲಿ ಮಾಡುವ ಡ್ಯಾನ್ಸ್ ಫ್ಯಾನ್ಸ್ಗಂತೂ ಸಖತ್ ಇಷ್ಟ. ಕಾವ್ಯ ಮಾರನ್ ಈಗ ಭಾರತದ ಹೊಸ ನ್ಯಾಷನಲ್ ಕ್ರಷ್ ಅನ್ನಿಸಿಕೊಂಡಿದ್ದಾರೆ. ತಂಡದ ಸೋಲಲ್ಲೂ ಗೆಲುವಲ್ಲೂ ಎಲ್ಲರ ಗಮನ ಸೆಳೆಯೋ ಕಾವ್ಯಾ ತಮಿಳುನಾಡಿನ ಡಿಎಂಕೆ ಸಂಸದ ಕಲಾನಿಧಿ ಮಾರನ್ ಅವರ ಮಗಳು ಅನ್ನೋದು ಎಲ್ರಿಗೂ ಗೊತ್ತಿರೋ ವಿಚಾರ.. ಆದ್ರೆ, ಕಾವ್ಯಾ ಮಾರನ್ ಬಗ್ಗೆ ನಿಮಗೆ ಗೊತ್ತಿಲ್ಲದ ಸಾಕಷ್ಟು ಇಂಟ್ರಸ್ಟಿಂಗ್ ವಿಚಾರ ಇಲ್ಲಿದೆ.

ಕಾವ್ಯಾ ಮಾರನ್ 2018 ರಲ್ಲಿ ಐಪಿಎಲ್ ಸನ್ ರೈಸರ್ಸ್ ಹೈದರಾಬಾದ್ ತಂಡದ ಮಾಲೀಕತ್ವ ವಹಿಸಿಕೊಂಡರು. ಈ ಮೂಲಕ ಕ್ರಿಕೆಟ್ ಜಗತ್ತಿಗೆ ಎಂಟ್ರಿಕೊಟ್ರು ಕಾವ್ಯಾ. ಎಸ್ ಆರ್ ಹೆಚ್ ತಂಡ ಕಳೆದ ಸೀಸನ್ ನಲ್ಲಿ ಕೆಟ್ಟದಾಗಿ ಪರ್ಫಾರ್ಮ್ ಮಾಡಿತ್ತು. ಆಗೆಲ್ಲ ಸಪ್ಪೆ ಮುಖದಲ್ಲಿ ಕಾವ್ಯಾ ಕುಳಿತಿದ್ದನ್ನು ಟಿವಿಯಲ್ಲಿ ಪದೇ ಪದೆ ತೋರಿಸಲಾಗುತ್ತಿತ್ತು. ಆಗ ಸೂಪರ್ ಸ್ಟಾರ್ ರಜನಿಕಾಂತ್, ಕಾವ್ಯಾ ಹೀಗೆ ಬೇಸರದಲ್ಲಿ ಕುಳಿತುಕೊಳ್ಳೊದನ್ನು ನೊಡೋದಿಕ್ಕೆ ಆಗಲ್ಲ.. ಮಾರನ್ ಅವರು ಟೀಂ ಸೆಲೆಕ್ಟ್ ಮಾಡುವಾಗ ಸ್ವಲ್ಪ ಒಳ್ಳೆ ಪ್ಲೇಯರ್ಸ್ ಅನ್ನು ಖರೀದಿ ಮಾಡ್ಬೇಕು ಅಂದಿದ್ದರು.. ರಜಿನಿ ಸಲಹೆಯನ್ನು ಸೀರಿಯಸ್ಸಾಗಿ ತಗೊಂಡ ಕಾವ್ಯಾ ಈ ಬಾರಿ ಹೊಡಿಬಡಿ ಬ್ಯಾಟ್ಸ್ ಮನ್ ಗಳನ್ನೇ ಹರಾಜಿನಲ್ಲಿ ಖರೀದಿ ಮಾಡಿದ್ರು.. ಇದ್ರಿಂದಾಗಿಯೇ ಎಸ್ ಆರ್ ಹೆಚ್ ಟೀಂ ಈ ಸೀಸನ್ನಲ್ಲಿ ಆಲ್ರೆಡಿ ಮೂರು ಬಾರಿ 250ಕ್ಕಿಂತ ಹೆಚ್ಚು ರನ್ ಹೊಡೆದು ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಕಾವ್ಯಾ ಅವರ ತಂದೆ ಕಲಾನಿಧಿ ಮಾರನ್ ಸನ್ ಗ್ರೂಪ್ ಸಂಸ್ಥಾಪಕರೂ ಹೌದು.

ತಮಿಳುನಾಡಿನ ಸಿಎಂ ಎಂಕೆ ಸ್ಟಾಲಿನ್ ಅವರ ಸಂಬಂಧಿಕ. ಕ್ರೀಡಾ ವಲಯ ಮಾತ್ರವಲ್ಲದೆ ಕಾವ್ಯಾ ಮಾರನ್ ಸನ್ ಟಿವಿ ನೆಟ್ವರ್ಕ್ ನಿರ್ವಹಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಕಾವ್ಯಾ ಮಾರನ್ ಚೆನ್ನೈನ ಸ್ಟೆಲ್ಲಾ ಮೇರಿಸ್ ಕಾಲೇಜಿನಿಂದ ವಾಣಿಜ್ಯ ಪದವಿ ಮತ್ತು ಯುಕೆಯ ವಾರ್ವಿಕ್ ಬ್ಯುಸಿನೆಸ್ ಸ್ಕೂಲ್ನಿಂದ ಎಂಬಿಎ ಪದವಿ ಪಡೆದಿದ್ದಾರೆ. ಆಗಸ್ಟ್ 6, 1992 ರಂದು ಚೆನ್ನೈನಲ್ಲಿ ಕಲಾನಿಧಿ ಮತ್ತು ಕಾವೇರಿ ಮಾರನ್ ದಂಪತಿಗೆ ಜನಿಸಿದ ಕಾವ್ಯಾ ತನ್ನ ಕುಟುಂಬದ ಸಂಪತ್ತು ಮಾತ್ರವಲ್ಲದೆ ತಮಿಳುನಾಡಿನಲ್ಲಿ ಆಳವಾಗಿ ಬೇರೂರಿರುವ ರಾಜಕೀಯ ಪರಂಪರೆಯನ್ನೂ ಪಡೆದಿದ್ದಾರೆ. ಕಾವ್ಯಾ ತಾಯಿ ಕಾವೇರಿ ಮಾರನ್, ಸನ್ ಟಿವಿ ಕಮ್ಯುನಿಟಿ ಲಿಮಿಟೆಡ್ನ ಸಿಇಒ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಾವ್ಯ ಮಾರನ್ ಗೆ ಈಗ 32 ವರ್ಷ ವಯಸ್ಸು. ಈ ವಯಸ್ಸಿನಲ್ಲಿ ಅವರು ಹೊಂದಿರುವ ಆಸ್ತಿಯ ಮೌಲ್ಯ ಎಷ್ಟು ಗೊತ್ತಾ? ಜನ್ ಭಾರತ್ ಟೈಮ್ಸ್ ಪ್ರಕಾರ, ಕಾವ್ಯಾ ಮಾರನ್ ಅವರ ಆಸ್ತಿಗಳ ಒಟ್ಟು ಮೌಲ್ಯ ಸುಮಾರು 409 ಕೋಟಿ ರೂಪಾಯಿಗಳು ಎಂದು ಅಂದಾಜಿಸಲಾಗಿದೆ.

ಇನ್ನು ಕಾವ್ಯಾ ಮಾರನ್ ಕಾರುಗಳ ಕಲೆಕ್ಷನ್ ಬಗ್ಗೆ ಕೇಳಿದ್ರೆ ಅಚ್ಚರಿಯಾಗುತ್ತೆ. ಇದರಲ್ಲಿ 12.2 ಕೋಟಿ ಮೌಲ್ಯದ ರೋಲ್ಸ್ ರಾಯ್ಸ್ ಕಾರು ಅಗ್ರಸ್ಥಾನದಲ್ಲಿದೆ.. ನೀತಾ ಅಂಬಾನಿ ಕೂಡ ಇಂತದ್ದೇ ರೋಲ್ಸ್ ರಾಯ್ಸ್ ಕಾರು ಹೊಂದಿದ್ದಾರೆ.. ಈ ಕಾರಿನಲ್ಲಿ ಮಾಲೀಕರಿಗೆ ಇಷ್ಟವಾದ ರೀತಿಯಲ್ಲಿ ಇಂಟೀರಿಯರ್ ಮತ್ತು ಸೌಲಭ್ಯಗಳನ್ನು ಹೊಂದುವ ಅವಕಾಶವಿದೆ.. ಹೀಗಾಗಿ ಈ ಕಾರಿನ ಅಸಲಿ ಮೌಲ್ಯ ಎಷ್ಟು ಎನ್ನುವುದು ಇನ್ನೂ ಗೌಪ್ಯವಾಗಿದೆ.. ರೋಲ್ಸ್ ರಾಯ್ಸ್ ಜೊತೆಗೆ ಬೆಂಟ್ಲಿ ಬೆಂತಾಯ್ಗ ಕಾರು ಕೂಡ ಕಾವ್ಯಾ ಬಳಿಯಿದೆ.. ಈ ಕಾರಿನ ಮೌಲ್ಯ ಬರೋಬ್ಬರಿ 6 ಕೋಟಿ ರುಪಾಯಿಗಳು.. ಇಷ್ಟಕ್ಕೇ ಮುಗಿದಿಲ್ಲ ಕಾವ್ಯಾ ಅವರ ಕಾರಿನ ಕತೆ.. ಅವರ ಬಳಿಯಿರುವ ಇನ್ನೊಂದು ಕಾರೆಂದರೆ ಅದು ಬಿಎಂಡಬ್ಲ್ಯು ಐ7 ಎಲೆಕ್ಟ್ರಿಕ್ ಕಾರು.. ಇದರ ಮೌಲ್ಯ 2.13 ಕೋಟಿ ರುಪಾಯಿಗಳು.. ಇನ್ನು ಟೂ ಸೀಟರ್ ಫೆರಾರಿ ಕಾರು ಕೂಡ ಕಾವ್ಯಾ ಅವರ ಬಳಿಯಿದೆ.. 3.76 ಕೋಟಿ ಎಕ್ಸ್ ಶೋ ರೂಂ ಮುಖಬೆಲೆಯ ಫೆರಾರಿ ರೋಮ ಕಾರನ್ನು ಕಾವ್ಯಾ ಹೊಂದಿದ್ದಾರೆ.. ಇದು ಕ್ರಿಕೆಟ್ ಜೊತೆಗೆ ಕಾವ್ಯಾ ಅವರಿಗೆ ಕಾರುಗಳ ಬಗ್ಗೆ ಎಂತಹ ಕ್ರೇಜ್ ಇದೆ ಎನ್ನುವುದಕ್ಕೆ ಸಾಕ್ಷಿ..

ಇನ್ನು ಈ ಸೀಸನ್ನಲ್ಲಿ ಸನ್ರೈಸರ್ಸ್ ಸಕ್ಸಸ್ಗೆ ಕಾವ್ಯ ಮಾರನ್ ಜಾತಕವೇ ಪ್ರಮುಖ ಕಾರಣ ಅನ್ನೋ ವಿಚಾರ ಕೂಡಾ ಜೋರಾಗಿಯೇ ಸೌಂಡ್ ಮಾಡ್ತಿದೆ. ಸದ್ಯ ಕಾವ್ಯಗೆ ಗುರುಬಲ ಕೂಡಿ ಬಂದಿದೆಯಂತೆ. ಅವ್ರ ಜಾತಕದಲ್ಲಿ ಗಜಕೇಸರಿ ಯೋಗ ನಡೆಯುತ್ತಿದೆ. ಕಾವ್ಯ ಅವರ ಗುರುಬಲ ಅವರ ತಂಡದ ಏಳ್ಗೆಗೂ ಕಾರಣ ಅಂತಾನೇ ಹೇಳಲಾಗ್ತಿದೆ. ಹೀಗಾಗಿಯೇ ಸನ್ರೈಸರ್ಸ್ IPLನಲ್ಲಿ ರನ್ ಸುನಾಮಿ ಸೃಷ್ಟಿಸುತ್ತಿದೆ ಎನ್ನಲಾಗ್ತಿದೆ. ಅದೇನೇ ಇರಲಿ, ಹೈದ್ರಾಬಾದ್ ತಂಡ ಸ್ಟೇಡಿಯಂನಲ್ಲಿ ಆಡ್ತಿದ್ರೆ, ಇತ್ತ ಗ್ಯಾಲರಿಯಲ್ಲಿ ಕೂತು ಚಪ್ಪಾಳೆ ತಟ್ಟುತ್ತಾ, ಡ್ಯಾನ್ಸ್ ಮಾಡುತ್ತಾ, ಮನಸಾರೆ ನಗುತ್ತಾ, ಅಭಿಮಾನಿಗಳ ಮನ ಗೆಲ್ಲುತ್ತಿದ್ದಾರೆ ಕಾವ್ಯ ಮಾರನ್.

Shwetha M

Leave a Reply

Your email address will not be published. Required fields are marked *