ಓಪನರ್ ಗಳೇ IPL ಗೇಮ್ ಚೇಂಜರ್ಸ್​ – ಅಭಿಷೇಕ್, ಹೆಡ್, ಸೂರ್ಯವಂಶಿ ಡೇಂಜರಸ್
10 ಟೀಂ.. ಹೇಗಿದೆ ಆರಂಭಿಕರ ಅಬ್ಬರ?

ಓಪನರ್ ಗಳೇ IPL ಗೇಮ್ ಚೇಂಜರ್ಸ್​ – ಅಭಿಷೇಕ್, ಹೆಡ್, ಸೂರ್ಯವಂಶಿ ಡೇಂಜರಸ್10 ಟೀಂ.. ಹೇಗಿದೆ ಆರಂಭಿಕರ ಅಬ್ಬರ?

ಬಿರು ಬೇಸಿಗೆಯ ಬಿಸಿಯಲ್ಲಿ ಐಪಿಎಲ್ ಕಾವು ಕೂಡ ಜೋರಾಗ್ತಿದೆ. 19ನೇ ಆವೃತ್ತಿಯ ಕ್ರಿಕೆಟ್ ಹಬ್ಬಕ್ಕೆ ಇನ್ನೆರಡೇ ದಿನ ಅಷ್ಟೇ ಬಾಕಿ. ಐಟಿ ಹಬ್ ಬೆಂಗಳೂರಿನಲ್ಲಿ ಹೊಸ ಸೀಸನ್​ಗೆ ಕಿಕ್ ಸ್ಟಾರ್ಟ್ ಸಿಗಲಿದ್ದು ಆಟಗಾರರೆಲ್ಲಾ ಭರ್ಜರಿಯಾಗೇ ರೆಡಿಯಾಗ್ತಿದ್ದಾರೆ. ಬ್ಯಾಟಿಂಗ್, ಬೌಲಿಂಗ್, ಫಿನಿಶರ್ಸ್ ಹೀಗೆ ಫ್ರಾಂಚೈಸಿಗಳಲ್ಲಿ ಪ್ಲೇಯಿಂಗ್ 11 ಲೆಕ್ಕಾಚಾರಗಳೂ ನಡೆದಿವೆ. ಅದ್ರಲ್ಲೂ ಪವರ್ ಪ್ಲೇನಲ್ಲೇ ಗೇಮ್ ಚೇಂಜಿಂಗ್ ಪರ್ಫಾಮೆನ್ಸ್ ನೀಡೋ ಓಪನರ್​ಗಳೂ ಫೈನಲ್ ಆಗಿದ್ದಾರೆ.

ಇದನ್ನೂ ಓದಿ : PSL ಪಂದ್ಯಗಳಿಗೆ ಬ್ಲಾ*ಸ್ಟ್ ಬೆದರಿಕೆ – ಪಾಕಿಸ್ತಾನದಲ್ಲಿ ನಡೆಯಲ್ಲ ಲೀಗ್?

ಮಾರ್ಡ್ರೆನ್ ಕ್ರಿಕೆಟ್​ನ ಬ್ಯೂಟಿ ಅಂದ್ರೆ ಅದು ಬ್ಯಾಟಿಂಗ್. ಅದ್ರಲ್ಲೂ ಟಿ-20 ಫಾರ್ಮೆಟ್ ಅಂತಾ ಬಂದಾಗ ಅಲ್ಲಿ ಬ್ಯಾಟರ್​ಗಳದ್ದೇ ಅಬ್ಬರ. ಐಪಿಎಲ್​ನಲ್ಲಂತೂ ದಾಖಲೆ ಮಟ್ಟದ ರನ್ಸ್ ಬರ್ತಿವೆ. 200 ಪ್ಲಸ್ ಟಾರ್ಗೆಟ್, 200ಪ್ಲಸ್ ಚೇಸಿಂಗ್ ಎಲ್ಲಾ ಕಾಮನ್ ಆಗೋಗಿದೆ. ಹೀಗೆ ಒಂದು ತಂಡದ ಬ್ಯಾಟಿಂಗ್​ ಬಿರುಗಾಳಿಯ ಪಿಲ್ಲರ್​ಗಳೇ ಓಪನರ್ಸ್. ಪವರ್ ಪ್ಲೇನಲ್ಲಿ ಈ ಜೋಡಿಯಿಂದ ಬರೋ ಸ್ಕೋರ್ ನೆಕ್ಸ್​ಟ್ ಟಾರ್ಗೆಟ್ ಸೆಟ್ ಮಾಡೋಕೆ ಅಥವಾ ಚೇಸ್ ಮಾಡೋಕೆ ದೊಡ್ಡ ಕೊಡುಗೆ ನೀಡುತ್ತೆ. ಹೀಗೆ ಓಪನಿಂಗ್​ನಲ್ಲೇ ಸದ್ದು ಮಾಡೋಕೆ ಹತ್ತು ತಂಡಗಳಲ್ಲೂ ಪವರ್ ಹಿಟ್ಟರ್​ಗಳೇ ರೆಡಿಯಾಗಿದ್ದಾರೆ.

ಪವರ್ ಪ್ಲೇ ಪವರ್ ಹಿಟ್ಟರ್ಸ್!

ತಂಡ                                     ಓಪನರ್ಸ್                                ಕಾಂಬಿನೇಷನ್

RCB                            ವಿರಾಟ್ ಕೊಹ್ಲಿ & ಫಿಲ್ ಸಾಲ್ಟ್               ರೈಟ್ ಹ್ಯಾಂಡ್

SRH                        ಟ್ರಾವಿಸ್ ಹೆಡ್ & ಅಭಿಷೇಕ್ ಶರ್ಮಾ             ಲೆಫ್ಟ್ ಹ್ಯಾಂಡ್

CSK                        ಸಂಜು ಸ್ಯಾಮ್ಸನ್ & ಆಯುಷ್ ಮ್ಹಾತ್ರೆ             ರೈಟ್ ಹ್ಯಾಂಡ್

MI                         ರೋಹಿತ್ ಶರ್ಮಾ & ಕ್ವಿಂಟನ್ ಡಿ ಕಾಕ್           ಲೆಫ್ಟ್ ರೈಟ್

RR                         ಯಶಸ್ವಿ ಜೈಸ್ವಾಲ್ & ಸೂರ್ಯವಂಶಿ                ಲೆಫ್ಟ್ ಹ್ಯಾಂಡ್

GT                        ಶುಭ್ ಮನ್ ಗಿಲ್ & ಸಾಯಿ ಸುದರ್ಶನ್             ಲೆಫ್ಟ್ ರೈಟ್

PBKS                     ಪ್ರಭ್ ಸಿಮ್ರಾನ್ ಸಿಂಗ್ & ಪ್ರಿಯಾನ್ಶ್ ಆರ್ಯ          ಲೆಫ್ಟ್ ರೈಟ್

DC                        ಕೆಎಲ್ ರಾಹುಲ್ & ಪಥುಮ್ ನಿಸ್ಸಾಂಕ                 ರೈಟ್ ಹ್ಯಾಂಡ್

LSG                        ಏಡನ್ ಮಾರ್ಕ್ರಂ & ಮಿಚೆಲ್ ಮಾರ್ಷ್               ರೈಟ್ ಹ್ಯಾಂಡ್

ಓಪನರ್ಸ್​ ಅಂತಾ ಬಂದಾಗ ಲೆಫ್ಟ್ ರೈಟ್ ಕಾಂಬಿನೇಷನ್ ಇರ್ಬೇಕು ಅಂತೀವಿ. ಬಟ್ ಐಪಿಎಲ್​ನಲ್ಲಿ ಹತ್ತು ಫ್ರಾಂಚೈಸಿಗಳ ಪೈಕಿ ಮೂರು ತಂಡಗಳಲ್ಲಷ್ಟೇ ಲೆಫ್ಟ್ ರೈಟ್ ಹ್ಯಾಂಡ್ ಬ್ಯಾಟರ್ಸ್ ಕಾಂಬಿನೇಷನ್ ಇದೆ. ಉಳಿದ 7 ತಂಡಗಳಲ್ಲಿ ಇಬ್ಬರೂ ಲೆಫ್ಟ್ ಹ್ಯಾಂಡರ್ಸ್ ಅಥವಾ ಇಬ್ಬರೂ ರೈಟ್ ಹ್ಯಾಂಡರ್ಸ್ ಇದ್ದಾರೆ. ಬಟ್ ಪರ್ಫಾಮೆನ್ಸ್​ಗೆ ಯಾವತ್ತೂ ಹೊಡೆತ ಕೊಟ್ಟಿಲ್ಲ. ಸೋ ಈ ಸೀಸನ್​ನಲ್ಲೇ ಪವರ್ ಶೋ ತೋರಿಸೋಕೆ ರೆಡಿಯಾಗ್ತಿದ್ದಾರೆ.

Shantha Kumari