ಎಣ್ಣೆ ಏಟಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿದ ಸ್ಯಾಂಡಲ್‌ವುಡ್‌ ನಟ! – ನಟ ಮಯೂರ್ ಪಟೇಲ್ ವಿರುದ್ಧ FIR!

ಎಣ್ಣೆ ಏಟಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿದ ಸ್ಯಾಂಡಲ್‌ವುಡ್‌ ನಟ! – ನಟ ಮಯೂರ್ ಪಟೇಲ್ ವಿರುದ್ಧ FIR!

ಸ್ಯಾಂಡಲ್ ವುಡ್ ನಟ ಮಯೂರ್ ಪಟೇಲ್‌ನಿಂದ ದೊಡ್ಡ ಪ್ರಮಾದವೇ ನಡೆದಿದೆ. ಮಯೂರ್ ಪಟೇಲ್‌ಕಂಠಪೂರ್ತಿ ಕುಡಿದು ಕಾರು ಚಲಾಯಿಸಿ ಸರಣಿ ಅಪಘಾತ ಎಸಗಿದ್ದಾರೆ. ಕಾರನ್ನ ಅಡ್ಡಾದಿಡ್ಡಿಯಾಗಿ ಚಲಾಯಿಸಿ ನಾಲ್ಕೈದು ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾರೆ. ಇದೀಗ ಮಯೂರ್‌ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಇದನ್ನೂ ಓದಿ: ಇಬ್ಬರ ಸಾವಿಗೆ ಕಾರಣವಾದವಳು ಕೊನೆಗೂ ಅರೆಸ್ಟ್! – ಬೇರೊಬ್ಬನೊಂದಿಗೆ ಓಡಿಹೋಗಿದ್ದ ಮಹಿಳೆ ಸಿಕ್ಕಿಬಿದ್ದಿದ್ದು ಹೇಗೆ?

ಓಲ್ಡ್ ಏರ್ಪೋರ್ಟ್ ರಸ್ತೆಯ ಕಮಾಂಡೊ ಆಸ್ಪತ್ರೆ ಸಿಗ್ನಲ್ ಬಳಿ ಕಳೆದ ರಾತ್ರಿ 10 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಕಂಠಪೂರ್ತಿ ಕುಡಿದು ಮಯೂರ್ ಪಟೇಲ್ ಪಾರ್ಚೂನರ್ ಕಾರಿನಲ್ಲಿ ಬರುತ್ತಿದ್ದರು. ಈ ವೇಳೆ ಸಿಗ್ನಲ್‌ನಲ್ಲಿ ನಿಂತಿದ್ದ ಕಾರುಗಳಿಗೆ ಹಿಂಬದಿಯಿಂದ ಡಿಕ್ಕಿ ಹೊಡೆಯಲಾಗಿದೆ. ಈ ವೇಳೆ ಒಂದಕ್ಕೊಂದು ಕಾರುಗಳ ನಡುವೆ ಸರಣಿ ಅಪಘಾತವಾಗಿದೆ. ಈ ಘಟನೆಯಲ್ಲಿ ನಾಲ್ಕು ಕಾರುಗಳು ಜಖಂಗೊಂಡಿವೆ.

ಎರಡು ಸ್ವಿಫ್ಟ್ ಡಿಜೈರ್ ಕಾರು, ಮತ್ತೊಂದು ಸರ್ಕಾರಿ ಕಾರು ಜಖಂಗೊಂಡಿವೆ. ಘಟನಾ ಸ್ಥಳಕ್ಕೆ ಹಲಸೂರು ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಯೂರ್ ಪಟೇಲ್ ಪೊಲೀಸ್‌ ಠಾಣೆಗೆ ಕರೆತಂದು ಡ್ರಂಕ್ & ಡ್ರೈವ್ ಪರೀಕ್ಷೆ ನಡೆಸಲಾಯಿತು. ಡಿಡಿ ತಪಾಸಣೆ ವೇಳೆ ಪಾಸಿಟಿವ್ ಬಂದಿದೆ. ಜಖಂಗೊಂಡ ಕಾರು ಚಾಲಕರು ಮಯೂರ್‌ ವಿರುದ್ಧ ದೂರು ನೀಡಿದ್ದಾರೆ. ಈ ಸಂಬಂಧ ನಟನ ವಿರುದ್ಧ ಹಲಸೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಕಾರು ಚಾಲಕ ಶ್ರೀನಿವಾಸ್ ಎಂಬವರು ಕೊಟ್ಟ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಾಗಿದೆ. ಕುಡಿದು ವಾಹನ ಚಲಾಯಿಸಿ ಅಪಘಾತ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ನಟ ಮಯೂರ್ ಪಟೇಲ್ ಅವರ ಫಾರ್ಚೂನರ್ ಕಾರು ಸೀಜ್ ಮಾಡಲಾಗಿದೆ.

Shwetha M