RCB ಅಭಿಮಾನಿಗಳ ಆಸೆ ಈಡೇರಲಿ! – ಕುಂಭಮೇಳದಲ್ಲಿ 7 ಬೇಡಿಕೆಗಳ ಜೊತೆ ಯುವಕನ ಪುಣ್ಯಸ್ನಾನ!

ಒಂದ್ಕಡೆ ಉತ್ತರಪ್ರದೇಶದ ಪ್ರಯಾಗ್‌ರಾಜ್ ನಲ್ಲಿ ಮಹಾಕುಂಭಮೇಳೆ ನಡೆಯುತ್ತಿದೆ. ಮತ್ತೊಂದ್ಕಡೆ ಎಪಿಎಲ್ 2025ಗೆ ಕೌಂಟ್‌ಡೌನ್ ಶುರುವಾಗಿದೆ. ಇದೀಗ ಆರ್‌ಸಿಬಿ ಅಭಿಮಾನಿಯೊಬ್ಬರು ಕುಂಭಮೇಳದಲ್ಲಿ 7 ಬೇಡಿಕೆಗಳನ್ನು ಇಟ್ಕೊಂಡು ಪವಿತ್ರ ಸ್ನಾನ ಮಾಡಿದ್ದಾರೆ.
ಇದನ್ನೂ ಓದಿ: ಬಾಂಗ್ಲಾ ಬೆಂಡೆತ್ತಲು ಭಾರತ ರೆಡಿ – KL ರಾಹುಲ್ ಗೆ ಯಾವ ಸ್ಲಾಟ್?
ಕೋಟ್ಯಾಂತರ ಭಕ್ತರು ತ್ರಿವೇಣಿ ಸಂಗಮಕ್ಕೆ ಭೇಟಿ ನೀಡಿ ಕುಂಭದಲ್ಲಿ ಸ್ನಾನ ಮಾಡ್ತಿದ್ದಾರೆ. ಅದರಂತೆ ನಮ್ಮ ಕರ್ನಾಟಕದಿಂದಲೂ ಲಕ್ಷಾಂತರ ಭಕ್ತರು ಕುಂಭ ಮೇಳಕ್ಕೆ ಬಂದು ಹೋಗುತ್ತಿದ್ದಾರೆ. ಇದೀಗ ಚಿಕ್ಕಮಗಳೂರಿನ ಖಾಂಡ್ಯದ ದೇವೇಂದ್ರ ಅನ್ನೋರು ಕುಂಭ ಮೇಳಕ್ಕೆ ಹೋಗಿ ಸುದ್ದಿಯಾಗಿದ್ದಾರೆ. ಸಾಮಾನ್ಯವಾಗಿ ಪವಿತ್ರ ಸ್ನಾನದ ವೇಳೆ, ವೈಯಕ್ತಿಕ ಶ್ರೇಯಸ್ಸಿಗಾಗಿ ಬೇಡಿಕೊಳ್ತಾರೆ. ಆದರೆ ಈ ದೇವೇಂದ್ರ ಜನರ ಒಳಿತಿಗಾಗಿ 7 ಬೇಡಿಕೆಗಳನ್ನು ಇಟ್ಟುಕೊಂಡು ಪುಣ್ಯಸ್ನಾನ ಮಾಡಿದ್ದಾರೆ.
ಯುವಕನ ಬೇಡಿಕೆ ಏನು..?
ಹೆಣ್ಮಕ್ಕಳ ಮೇಲಿನ ಅತ್ಯಾಚಾರ ಸಂಪೂರ್ಣ ನಿಲ್ಲಬೇಕು
25 ವರ್ಷ ಮೇಲ್ಪಟ್ಟ ಎಲ್ಲರಿಗೂ ಕಂಕಣ ಭಾಗ್ಯ ಸಿಗಲಿ
ಕಾಲಕ್ಕೆ ತಕ್ಕಂತೆ ಮಳೆಯಾಗಿ ರೈತರ ಬೆಳೆ ಉತ್ತಮವಾಗಲಿ
ಮಲೆನಾಡಿನ ಒತ್ತುವರಿ ಸಮಸ್ಯೆ ಬಗೆಹರಿಯಲಿ
ಪ್ರಾಣಿಗಳಿಂದ ಆಗುತ್ತಿರುವ ಪ್ರಾಣಿ ಹಾನಿ ನಿಲ್ಲಲಿ
ಈ ಬಾರಿ ಆರ್‌ಸಿಬಿ ಅಭಿಮಾನಿಗಳ ಆಸೆ ಈಡೇರಲಿ
ರಾಜನ ಅಳ್ವಿಕೆ ಹೋಗಲಿ, ಪ್ರಜೆಗಳು ರಾಜರಾಗಲಿ
ಈ ಬೇಡಿಕೆಗಳನ್ನು ಇಟ್ಕೊಂಡು ಕುಂಭ ಮೇಳಕ್ಕೆ ಹೋಗಿರುವ ದೇವೇಂದ್ರ ನದಿಯಲ್ಲಿ ಬರೋಬ್ಬರಿ 101 ಬಾರಿ ಮುಳಗಿ ಎದ್ದಿದ್ದಾರೆ. ವಿಶೇಷ ಅಂದರೆ ಕೈಯಲ್ಲಿ ಬ್ಯಾನರ್ ಹಿಡಿದೇ ಪುಣ್ಯ ಸ್ನಾನ ಮಾಡಿದ್ದಾರೆ. ಇದೀಗ ಇದ್ರ ಫೋಟೋ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.