ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕ ಶಾಂತಿಯುತವಾಗಿರಲಿ – ಸಿದ್ದು, ಡಿಕೆಶಿಗೆ ಅಭಿನಂದನೆ ಸಲ್ಲಿಸಿದ ಬಿಜೆಪಿ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದಿದ್ದು, 31 ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಆಗಿ ಡಿ.ಕೆ ಶಿವಕುಮಾರ್ ಶನಿವಾರ ಮಧ್ಯಾಹ್ನ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಬೆನ್ನಲ್ಲೇ ರಾಜ್ಯ ಬಿಜೆಪಿ ಟ್ವೀಟ್ ಮಾಡಿದ್ದು, ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕ ಶಾಂತಿಯುತವಾಗಿರಲಿ ಎಂದು ಹೇಳಿದೆ.
ಇದನ್ನೂ ಓದಿ: ಸಿದ್ದು, ಡಿಕೆಶಿ ಪಟ್ಟಾಭಿಷೇಕಕ್ಕೆ ಕ್ಷಣಗಣನೆ – ಪ್ರಮಾಣವಚನ ಬೋಧನೆಗೆ ಸಕಲ ಸಿದ್ಧತೆ
ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಿದೆ.
ʼನಿಮ್ಮ ಅಧಿಕಾರಾವಧಿಯಲ್ಲಿ ಕರ್ನಾಟಕವು ಶಾಂತಿಯುತವಾಗಿರಲಿ ಮತ್ತು ಕನ್ನಡಿಗರಿಗೆ ಸುರಕ್ಷತೆಯನ್ನು ಒದಗಿಸುತ್ತೀರಿ ಎಂದು ನಾವು ಭಾವಿಸುತ್ತೇವೆ. ಹಿಮಾಚಲ ಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನಗಳಲ್ಲಿ ನೀಡಿರುವ ನಿಮ್ಮ ಸುಳ್ಳುಗಳಂತೆ ಆಗದೆ, ಮುಂದಿನ ದಿನಗಳಲ್ಲಿ ನೀವು ಭರವಸೆ ನೀಡಿದ ಐದು ‘ಖಾತರಿ’ಗಳನ್ನು ಬೇಷರತ್ತಾಗಿ ಜಾರಿಗೊಳಿಸುತ್ತೀರಿ ಎಂದು ನಾವು ನಂಬುತ್ತೇವೆʼ ಎಂದು ಬಿಜೆಪಿ ಹೇಳಿದೆ.
Congratulations to Shri @siddaramaiah and @DKShivakumar who would swear in as Chief Minister and Deputy Chief Minister.
We hope that during your tenure Karnataka remains to be peaceful and the safety of Kannadigas is assured.
We believe that the five ‘guarantees’ promised will…
— BJP Karnataka (@BJP4Karnataka) May 20, 2023