ಪದೇ ಪದೆ ಚಳಿ ಆಗ್ತಿದ್ಯಾ? – ಈ ಕಾಯಿಲೆಗಳು ಕಾಡುತ್ತಿರಬಹುದು ಎಚ್ಚರ!

ಪದೇ ಪದೆ ಚಳಿ ಆಗ್ತಿದ್ಯಾ? – ಈ ಕಾಯಿಲೆಗಳು ಕಾಡುತ್ತಿರಬಹುದು ಎಚ್ಚರ!

ಚಳಿಗಾಲದಲ್ಲಿ ಹಾಗೂ ಮಳೆಗಾಲದಲ್ಲಿ ಚಳಿಯಾಗುವುದು ನೈಸರ್ಗಿಕ ಪ್ರಕ್ರಿಯೆ. ಚಳಿಗಾಲದಲ್ಲಿ ಮೈ ನಡುಗವುದು, ಮೈ ಕೈ ತಣ್ಣಗಾಗುವುದು, ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಎದುರಾಗುವುದು ಎಲ್ಲವೂ ಮಾಮೂಲಿ. ಅದೇ ಕೆಲವೊಂದು ಕಚೇರಿಯ ಅಥವಾ ಮನೆಯ ಹವಾನಿಯಂತ್ರಣವು ಹೆಚ್ಚು ತಂಪಾಗಿದ್ದರೆ ಆಗ ಚಳಿ ಆಗುವುದು. ಆದರೆ ಈ ಮೂರು ಲಕ್ಷಣಗಳು ಇಲ್ಲದೆ ಇರುವ ಸಂದರ್ಭದಲ್ಲಿ ನಿಮಗೆ ಚಳಿಯಾಗುತ್ತಲಿದ್ದರೆ, ಆಗ ನೀವು ಇದರ ಬಗ್ಗೆ ಸ್ವಲ್ಪ ಎಚ್ಚರಿಕೆ ವಹಿಸಬೇಕು. ಯಾಕೆಂದರೆ ಅಸಾಮಾನ್ಯವಾಗಿ ಚಳಿಯಾಗುತ್ತಿರುವುದು ಯಾವುದಾದರೂ ಸಮಸ್ಯೆಯ ಮುನ್ನೆಚ್ಚರಿಕೆ ಆಗಿರಬಹುದು.

ಇದನ್ನೂ ಓದಿ: ದಿನಕ್ಕೆ ಒಂದು ಬಾರಿಯೂ ಕೂದಲು ಬಾಚೋದಿಲ್ವಾ? – ತಲೆಯಲ್ಲಿರುವ ಕೂದಲು ಖಾಲಿಯಾಗೋ‌ ಮೊದಲು ಈ ವಿಚಾರ ತಿಳ್ಕೊಳಿ!  

ಹೌದು, ಕೆಲವರಿಗೆ ಚಳಿ  ಇಲ್ಲದಿದ್ದರೂ ತುಂಬಾ ಚಳಿ ಆಗುತ್ತಿರುತ್ತೆ. ಚಳಿಯಿಂದ ನಡುಗೋದಿಕ್ಕೆ ಶುರು ಮಾಡ್ತಾರೆ. ಸುಸ್ತು, ಜ್ವರ ಮೈ ಕೈ ನೋವು ಮುಂತಾದ ಸಮಸ್ಯೆಗಳು ಆಗಾಗ ಕಾಣಿಸಿಕೊಳ್ಳುತ್ತವೆ. ದೇಹದಲ್ಲಿ ಕೆಂಪು ರಕ್ತ ಕಣಗಳು ಕಡಿಮೆಯಾದರೆ ಆಗ ಇಂತಹ ಸಮಸ್ಯೆ ಕಂಡು ಬರುತ್ತದೆ. ಈ ಸಮಯದಲ್ಲಿ ನಮ್ಮ ದೇಹ ದುರ್ಬಲವಾದಂತೆ ಅನುಭವವಾಗುತ್ತದೆ. ಯಾವುದೇ ಕಾರಣಕ್ಕೂ ಇದನ್ನು ನಿರ್ಲಕ್ಷ್ಯ ಮಾಡುವಂತಿಲ್ಲ.

ಇನ್ನು ಹೈಪೋಥೈರಾಯ್ಡಿಸಂ  ಇದ್ರೂ ಕೂಡ ಹೆಚ್ಚು ಚಳಿಯಾಗುವ ಸಾಧ್ಯತೆ ಇರುತ್ತೆ. ಇನ್ನು ಮಧುಮೇಹ, ವಿಟಮಿನ್ ಬಿ12 ಕೊರತೆ ಇದ್ರೂ ವಿಪರೀತ ಚಳಿ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತೆ. ಒಂದು ವೇಳೆ ನಿಮಗೆ ಎಂದಾದರೂ ಇಂತಹ ಲಕ್ಷಣಗಳು ಕಂಡು ಬಂದಿದ್ದರೆ ಅಥವಾ ಆಗಾಗ ಕಾಣಿಸುತ್ತಿದ್ದರೆ ಮೊದಲು ನಿಮ್ಮ ಸಮಸ್ಯೆಗೆ ವೈದ್ಯರ ಬಳಿ ಪರೀಕ್ಷೆ ಮಾಡಿಸಿ ಪರಿಹಾರ ಕಂಡುಕೊಳ್ಳಿ.

ಇನ್ನು ನಿದ್ರೆಯು ದೇಹದ ತಾಪಮಾನ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಿದ್ರಾಹೀನತೆ ಕಂಡುಬಂದರೆ ಆಗ ದೇಹಕ್ಕೆ ಚಳಿಯಾಗಬಹುದು. ನಮ್ಮ ದೇಹವು 24 ಗಂಟೆಗಳ ಆವರ್ತನವನ್ನು ಪಾಲಿಸುವುದು ಮತ್ತು ಇದರಲ್ಲಿ ಬದಲಾವಣೆ ಆದರೆ ಆಗ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ನಿಮಗೆ ಹೊತ್ತಲ್ಲದ ಹೊತ್ತಿನಲ್ಲೂ ಚಳಿಯಾಗುತ್ತಲಿದ್ದರೆ ಆಗ ನೀವು ಸರಿಯಾಗಿ ನಿದ್ರೆ ಮಾಡುವುದು ಉತ್ತಮ.

Shwetha M